

ಸಿದ್ಧಾಪುರ ತಾಲೂಕಿನ ಹಾರ್ಸಿಕಟ್ಟಾದಲ್ಲಿ 1964 ರಲ್ಲಿ ಅಶೋಕ ಪ್ರೌಢ ಶಾಲೆ ಪ್ರಾರಂಭವಾಯಿತು. ಮೊದಲ ಎಸ್.ಎಸ್.ಎಲ್.ಸಿ. ಬ್ಯಾಚ್ ಮುಗಿದಿತ್ತಷ್ಟೆ. 1967 ರಲ್ಲಿ ವಿದ್ಯಾರ್ಥಿಯಾಗಿದ್ದ ಮೆಣಸಿನಮನೆಯ ವಿಶ್ವನಾಥ ಶೇಟ್ ಆ ವರ್ಷ ನಿವೃತ್ತರಾದ ಜವಾನರೊಬ್ಬರ ಜಾಗಕ್ಕೆ ಬಂದರು.
ಅಂಥ ಅನಿವಾರ್ಯತೆಯ ಬಡತನದಲ್ಲಿ ಬೆಳೆದ ಶೇಟ್ ಓದಿದ್ದರೆ ದೊಡ್ಡ ನೌಕರರಾಗುತ್ತಿದ್ದರೇನೋ ಆದರೆ, ಮೆಟ್ರಿಕ್ ಓದಿ ಜವಾನರಾದ ವಿಶ್ವನಾಥ ಶೇಟ್ ವಿದ್ವಾಂಸರಾದರು. ಹೀಗೆ ಸಣ್ಣ ಕತೆಯಂತೆ ಮುಗಿಸಬಹುದಾದ ವಿಶ್ವನಾಥ ಶೇಟ್ ರ ಚರಿತ್ರೆ ಎಂಥವರಿಗೂ ಮಾದರಿ.
ತಾಯಿಯ ಮನೆಯಲ್ಲಿ ಮಾವಂದಿರು ಕಲಾವಿದರಾಗಿದ್ದರು.ಅವರೊಂದಿಗೆ ಆಟ ನೋಡುವ ,ಕುಣಿಯುವ ಚುರುಕಿನ ವಿಶ್ವನಾಥ್ ಶೇಟ್ ಮನೆಯ ಬಡತನದ ಕಾರಣಕ್ಕೆ ಸಣ್ಣ ವಯಸ್ಸಿನಲ್ಲಿ ದುಡಿಮೆ ಪ್ರಾರಂಭಿಸಿದ್ದರು.
ಹೀಗೆ ಸಮೀಪದ ಸಣ್ಣ ನೌಕರಿ ಮಾಡದಿದ್ದರೆ ಅನಿವಾರ್ಯತೆಯಲ್ಲಿ ಕೂಲಿಗೆ ಹೋಗಬೇಕಿತ್ತು. ಕೂಲಿಮಾಡಿ ನೋಯುವುದಕ್ಕಿಂತ ಇಲ್ಲಿ ಜವಾನನಾಗುವುದೇ ಲೇಸು ಎಂದು ಬಗೆದ ಮೆಣಸಿಮನೆಯ ವಿಶ್ವನಾಥ ಅಶೋಕ ಪ್ರೌಢ ಶಾಲೆಯ ಜವಾನನಾಗಿ ನಿವೃತ್ತರಾಗಿದ್ದರೆ ಅವರ ಪ್ರತಿಭೆ,ಸಾಮಥ್ರ್ಯ ಬೆಳಕಿಗೆ ಬರುತ್ತಿರಲಿಲ್ಲ. ಆದರೆ ಅಶೋಕಪ್ರೌಢ ಶಾಲೆಯ ಸಿಬ್ಬಂದಿಯಾಗಿ ಪ್ರಭಾರಿ ಗೃಂಥಪಾಲಕರಾಗಿ ಕೆಲಸ ಮಾಡಿದ ವಿಶ್ವನಾಥ ಶೇಟ್ ರನ್ನು ಪುಸ್ತಕಗಳು ಬೆಳಸಿದವು. ಅವರು ಓದಿದ ಪುಸ್ತಕಗಳು ಅಸಂಖ್ಯ ಆದರೆ ಅವರು ಬರೆದ 7-8 ಪುಸ್ತಕಗಳಲ್ಲಿ ಬಹುತೇಕ ಎಲ್ಲವೂ ಕೊಂಕಣಿ ಭಾಷೆಯಲ್ಲಿರುವುದು ವಿಶೇಶ.
1995 ರಲ್ಲಿ ಮೊದಲು ಕೊಂಕಣಿ ಯಕ್ಷಗಾನ ಬರೆದ ನಂತರ 1997 ರಿಂದ ಸಾಹಿತ್ಯ ಕೃಷಿ ಮುಂದುವರಿಸಿದ ಇವರು ಯಕ್ಷಗಾನ ಆಭರಣಗಳಿಗೆ ಸಂಬಂಧಿಸಿದ ಆಹಾರ್ಯ ಕಮ್ಮಟ ಬರೆದ ನಂತರ ಕೊಂಕಣಿ ರಾಮಾಯಣ ಶ್ರೀರಾಮ ಚರಿತ ಬರೆದು ವಿಶ್ವ ಕೊಂಕಣಿ ಸಮ್ಮೇಳದಲ್ಲಿ ಸನ್ಮಾನಿತರಾದರು.
ಯಕ್ಷಗಾನ ಆಭರಣ ತಯಾರಕರು,ಯಕ್ಷಗಾನ ಕಲಾವಿದರು. ಕೊಂಕಣಿ ಗಮಕ ಹಾಡುತ್ತಾ,ಅರ್ಥಧಾರಿಯಾಗಿ ಸಾಹಿತಿ,ಯಾಗಿ ಬಹುಮುಖಿಯಾಗಿ ಪ್ರಕಟವಾದ ವಿಶ್ವನಾಥ ಶೇಟ್ ರಾಜ್ಯೋತ್ಸವ ಪ್ರಶಸ್ತಿ ಪಡೆದರು.
ವಿಶ್ವಕೊಂಕಣಿ ಸಮ್ಮೇಳನದಲ್ಲಿ ವಸ್ತು ಪ್ರದರ್ಶನಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿ ಗೌರವ ಪಡೆದರು. ಮೂಲತ: ಕೃಷಿ ಕೂಲಿ,ಬಂಗಾರದ ಕೆಲಸ ಮಾಡುವ ಕುಟುಂಬದ ವಿಶ್ವನಾಥ ಶೇಟ್ ಕುಸುರಿ ಕೆಲಸ, ಮರದ ಕೆತ್ತನೆ ಕೆಲಸಗಳಲ್ಲೂ ಸಿದ್ಧಹಸ್ತರು. ಅನಿವಾರ್ಯತೆ, ಹಸಿವು ಎಲ್ಲವನ್ನೂ ಕಲಿಸುತ್ತದೆ ಎನ್ನುವ ಶೇಟ್ ಜವಾನನಾಗಿ ನಂತರ ಜಗದೆತ್ತರಕ್ಕೆ ಪ್ರಸಿದ್ಧರಾದ ಬಹುಮುಖಿ 7 ದಶಕದ ಹಿರಿಯ ಜೀವವಾಗಿರುವ ವಿಶ್ವನಾಥ ಶೇಟ್ ಉತ್ತರ ಕನ್ನಡ ಜಿಲ್ಲೆಯ ಹಿರಿಯ ಪ್ರತಿಭಾವಂತ.
ಮಕ್ಕಳು ಹೊರ ಊರುಗಳಲ್ಲಿದ್ದರೂ ಇಲ್ಲೇ ನೆಲೆಸಿ,ಹಾರ್ಸಿಕಟ್ಟಾ ವೇ ತಮ್ಮ ಜನ್ಮಭೂಮಿ,ಕರ್ಮಭೂಮಿ ಎನ್ನುವ ಶೇಟ್ ರನ್ನು ಹುಡುಕಿ ಬಂದ ಗೌರವ, ಪ್ರಶಸ್ತಿ, ಪುರಸ್ಕಾರಗಳೂ ಅನೇಕ. ಭಾರತೀಯ ತತ್ವಶಾಸ್ತ್ರ,ಶಿಲ್ಫಶಾಸ್ತ್ರ, ಆಭರಣ ಶಾಸ್ತ್ರಗಳ ಮೇಲೆ ಮಾತನಾಡುವ ವಿರಳ ವಿದ್ವತ್ತಿನ ವಿಶ್ವನಾಥ ಶೇಟ್ ಕುಗ್ರಾಮದಲ್ಲಿ ಹುಟ್ಟಿ ಹಾರ್ಸಿಕಟ್ಟಾದ ಜೊತೆಗೇ ತಾಲೂಕು, ಉತ್ತರಕನ್ನಡವನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸಿದ ಪ್ರತೀಭಾವಂತ.




_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
