ಕಾಳುಮೆಣಸು ಬೆಳೆಯುವುದರಿಂದ ರೈತರು ಸ್ವಾವಲಂಬನೆ ಸಾಧಿಸಬಹುದು ಎಂದು ಸಲಹೆ ನೀಡಿರುವ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಯುವಕರು ಕೃಷಿಯಿಂದ ವಿಮುಖರಾಗುತಿದ್ದಾರೆ ಎನ್ನುವ ಭಾವನೆ ಬಲವಾಗುತ್ತಿರುವ ಸಮಯದಲ್ಲಿ ಮಲೆನಾಡಿನಲ್ಲಿ ಯುವಕರು ಕೃಷಿಮಾಡಿ ಖುಷಿ ಕಾಣುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ.
sಸಿದ್ಧಾಪುರ ತಾಲೂಕಿನ ಹೇರೂರಿನಲ್ಲಿ ನಡೆದ ಕಾಳುಮೆಣಸು ವಿಚಾರ ಗೋಷ್ಠಿ ಮತ್ತು ತೋಟಗಾರಿಕಾ ಯಂತ್ರಮೇಳ ಉದ್ಘಾಟಿಸಿ ಮಾತನಾಡಿದ ಅವರು ಛಲದಿಂದ ಯಾವುದೇ ಕ್ಷೇತ್ರದಲ್ಲಿ ಸಾಧಿಸಬಹುದು ಎಂದರು.
ತೋಟಗಾರಿಕೆ ಇಲಾಖೆ,ಕೃಷಿ ಇಲಾಖೆ ಸೇರಿದ ನಾನಾ ಸಂಘಟನೆಗಳ ಸಹಯೋಗದ ಈ ಕಾರ್ಯಕ್ರಮದಲ್ಲಿ ತಾಲೂಕಿನ ಕೃಷಿ ಮತ್ತು ತೋಟಗಾರಿಕೆ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ಧೇಶಕರಾಗಿ ಈಗ ಉಪವಿಭಾಗೀಯ ಅಧಿಕಾರಿಯಾಗಿ ಆಯ್ಕೆಯಾದ ದೇವರಾಜ್ ರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ರಾಜ್ಯ ವಿಧಾನಸಭೆಯ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಇದೇ ವೇದಿಕೆಯಲ್ಲಿ ಸನ್ಮಾನಿಸಿ,ಗೌರವಿಸಲಾಯಿತು.
ಕನ್ಹಯ್ಯಕುಮಾರ ಮತ್ತು ಪ್ರಶಾಂತ್ ಕಿಶೋರ್ ವಿಶ್ವದ ಪ್ರಭಾವಿಗಳು
ಸಿದ್ಧಾಪುರ,ಜ.07- ಪೋರ್ಬ್ ಪ್ರಕಟಿಸಿರುವ ವಿಶ್ವದ ಹಿಂದಿನ ದಶಕದ ಪ್ರಭಾವಿ ವ್ಯಕ್ತಿಗಳಲ್ಲಿ ಸಿ.ಪಿ.ಐ.ಎಂ. ಮುಖಂಡ ಡಾ.ಕನ್ಹಯ್ಯ ಕುಮಾರ ಮತ್ತು ಜೆ.ಡಿ.ಯು.ಮುಖಂಡ ಪ್ರಶಾಂತ್ ಕಿಶೋರ್ ಸೇರಿದ್ದಾರೆ. ಡಾ.ಕನ್ಹಯ್ಯ ಕುಮಾರ ಮೋದಿ ವಿರೋಧಿಯಾಗಿ ಭಾರತದ ಯುವ ಐಕಾನ್ ಆಗಿ ಹೋರಾಟದಲ್ಲಿದ್ದು ಈಗ ಸಿ.ಪಿ.ಐ.ಎಂ. ಪಕ್ಷ ಸೇರಿದ್ದಾರೆ. ಪ್ರಶಾಂತ್ ಕಿಶೋರ್ ಚುನಾವಣಾ ತಜ್ಷರಾಗಿದ್ದು, ಹಲವು ಪಕ್ಷಗಳಿಗೆ ಸಲಹೆ,ಮಾರ್ಗದರ್ಶನ ಮಾಡಿ ಈಗ ಜೆ.ಡಿ.ಯು. ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.