

ಪ್ರತಿವರ್ಷ ಹೊಸವರ್ಷದ ಮೊದಲವಾರ ನಡೆಯುವ ಇಲ್ಲಿಯ ಸರ್ಕಾರಿ ಜಾತ್ರೆ ಬೀರಗುಂಡಿ ಭೂತಪ್ಪನ ಜಾತ್ರೆ ವಿಜೃಂಬಣೆಯಿಂದ ನಡೆಯಿತು.
ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳು ಫಲ-ತಾಂಬೂಲಗಳೊಂದಿಗೆ ಬೀರಗುಂಡಿ ಭೂತಪ್ಪನಿಗೆ ಪೂಜೆ ಸಲ್ಲಿಸಿದರು. ಸರ್ಕಾರಿ ಅಧಿಕಾರಿಗಳು, ಇತರರಸಂಘಟನೆಯಲ್ಲಿ ನಡೆಯುವ ಈ ವಾರ್ಷಿಕ ಜಾತ್ರೆಗೆ ಈ ವರ್ಷ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರೊಂದಿಗೆ ರಾಜಕೀಯ ಧುರೀಣರು,ಹಿರಿಯ ಅಧಿಕಾರಿಗಳು ಆಗಮಿಸಿದ್ದರು.
ಹಿಂದೆ ಈ ಭೂತಪ್ಪ (ಕಟ್ಟೆ) ಈಗಿನ ಪೊಲೀಸ್ ಠಾಣೆ ಮತ್ತು ಕಂದಾಯ ಇಲಾಖೆಯ ಕಟ್ಟಡ, ಕಛೇರಿಗಳ ಬಳಿ ಇತ್ತು ಈಗ ಸ್ಥಳಾಂತರಗೊಂಡ ಈ ಭೂತಪ್ಪನಿಗೆ ಪೊಲೀಸ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಪೂಜೆ ಸಲ್ಲಿಸುವುದು ರೂಢಿ. ಪೂಜೆ,ಜಾತ್ರೆ, ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮಗಳಲ್ಲಿ ಸರ್ಕಾರಿ ನೌಕರರೊಂದಿಗೆ ಸ್ಥಳಿಯರೂ ಪಾಲ್ಗೊಳ್ಳುವುದು ವಿಶೇಶ.
ನರಮುಂಡಿಗೆಚಂದ್ರುಗೆ ಸನ್ಮಾನ,ರಾಮಾಂಜನೇಯ ಕಲಾಬಳಗದ ಕೆಲಸಕ್ಕೆ ಶ್ಲಾಘನೆ
ಶಿಲ್ಫಕಲೆ,ಲಲಿತಕಲೆಯಂಥ ಕಲಾ ಪ್ರಕಾರಗಳನ್ನು ಗೌರವಿಸಿ,ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಈ ಕಲೆಗಳನ್ನು ಉಳಿಸಿ,ಬೆಳಸಿಕೊಂಡು ಹೋಗಲು ಅನುಕೂಲವಾಗುತ್ತದೆ ಎಂದು ಶಿಲ್ಫಿ,ಶಿಲ್ಫಕಲಾ ಅಕಾಡೆಮಿ ಸದಸ್ಯ ಚಂದ್ರಶೇಖರ್ ನಾಯ್ಕ ನರಮುಂಡಿಗೆ ಹೇಳಿದ್ದಾರೆ.

