

ಶಿಲ್ಫಕಲೆ,ಲಲಿತಕಲೆಯಂಥ ಕಲಾ ಪ್ರಕಾರಗಳನ್ನು ಗೌರವಿಸಿ,ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಈ ಕಲೆಗಳನ್ನು ಉಳಿಸಿ,ಬೆಳಸಿಕೊಂಡು ಹೋಗಲು ಅನುಕೂಲವಾಗುತ್ತದೆ ಎಂದು ಶಿಲ್ಫಿ,ಶಿಲ್ಫಕಲಾ ಅಕಾಡೆಮಿ ಸದಸ್ಯ ಚಂದ್ರಶೇಖರ್ ನಾಯ್ಕ ನರಮುಂಡಿಗೆ ಹೇಳಿದ್ದಾರೆ.
ಅವರು ಇಲ್ಲಿಯ ಬೇಡ್ಕಣಿ ರಾಮಾಂಜನೇಯ ಕಲಾಬಳಗದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೇಡ್ಕಣಿ ಕೋಟೆ ಹನುಮಂತ ದೇವಾಲಯದ ಅಧ್ಯಕ್ಷ ವಿ.ಎನ್.ನಾಯ್ಕ ತಾಲೂಕಿನಲ್ಲಿ ಶಿಲ್ಫಕಲೆ ಅಭ್ಯಸಿಸಿದ,ಸಾಧನೆ ಮಾಡಿದ ಜನರ ಸಂಖ್ಯೆ ಕಡಿಮೆ. ಇಂಥ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಈ ಕ್ಷೇತ್ರಕ್ಕೆ ಬರಲು ಹೊಸಬರಿಗೆ ಉತ್ತೇಜಿಸುವ ಅಗತ್ಯವಿದೆ ಎಂದರು.
ಇಂಥ ವಿದಾಯಕ ಕೆಲಸ ಮಾಡುವ ರಾಮಾಂಜನೇಯ ಕಲಾಬಳಗದ ಪ್ರಯತ್ನ ಶ್ಲಾಘಿಸಿದರು. ಉಪನ್ಯಾಸಕ ಎಂ.ಕೆ.ನಾಯ್ಕ ಹೊಸಳ್ಳಿ ಸನ್ಮಾನಿತರನ್ನು ಪರಿಚಯಿಸಿದರು.ಚಂದ್ರು ಕುಂಬ್ರಿಗದ್ದೆ ನಿರೂಪಿಸಿದರು. ಸಭೆಯ ನಂತರ ವಿದ್ಯುನ್ಮತಿ ಯಕ್ಷಗಾನ ಪ್ರದರ್ಶನ ನಡೆಯಿತು.
