
ಸಮಾಜಮುಖಿ ವಿಷನ್ 2020-02
ಚುನಾವಣೆ ಮುಗಿದು ಹೋದ ಮೇಲೆ,ಮಳೆ ನಿಂತು ಹೋದ ಮೇಲೆ ಬದಲಾಗದ ಹಳೆ ಲೀಲೆ -02
2014 ರಲ್ಲಿ ಉಪಾಯದ ಪರಿವಾರದ ವ್ಯಕ್ತಿ- ಶಕ್ತಿಗಳು ನಾಯಕತ್ವ ವಹಿಸಿದ ಮೇಲೆ ಜಿಲ್ಲೆಯ ಬಹುಸಂಖ್ಯಾತರ ಭವಿಷ್ಯ, ಬದುಕಿನ ಅರಣ್ಯ ಹಕ್ಕು, ಸಾಮಾಜಿಕ,ರಾಜಕೀಯ ಹೋರಾಟಗಳೆಲ್ಲಾ ಹಿನ್ನೆಲೆಗೆ ಸರಿದು. ಮತ-ಧರ್ಮಗಳ ಅಮಲಿನ ನಾಗಾಲೋಟಕ್ಕೆ ಸಿಕ್ಕ ಜನ ತಮ್ಮ ನೆಲ ಬಿರಿಯುತ್ತಿರುವ ಅರಿವೂ ಇರದಂತೆ ಧಾರ್ಮಿಕ ದಾಸರಾಗಿದ್ದಾರೆ.
ಈ ವಿಷಮತೆಯನ್ನು ಸರಿಯಾಗಿ ಬಳಸಿಕೊಂಡ ಸಾಂಪ್ರದಾಯಿಕ ಬಲಪಂಥೀಯ ರಾಜಕಾರಣ ಸಾರ್ವಜನಿಕರ ಅನ್ನ, ಆಹಾರ, ಆರೋಗ್ಯಕ್ಕಿಂತ ಧರ್ಮ ಮುಖ್ಯ ಎಂಬ ವಿಷವನ್ನು ಬಿತ್ತಿ ದ್ವೇಶ,ಸೇಡಿನ ಮತೀಯವಾದಿ ರಾಜಕೀಯದ ಲಾಭ ಬೆಳೆದಿದ್ದಾರೆ. ಇದರ ಪರಿಣಾಮವೆಂದರೆ……
ಒಂದು ದಶಕಕ್ಕಿಂತ ಹಿಂದೆ ಮುನ್ನೆಲೆಗೆ ಬಂದ ಬುಡಕಟ್ಟುಗಳ ಹಕ್ಕು ಹಿಂದುಳಿದವರು ಸ್ವಾಭಿಮಾನ, ಉದ್ಯೋಗ, ಅವಕಾಶ, ಅನುಕೂಲಗಳ ಸಾಂಘಿಕ ಹೋರಾಟ ಸ್ಥಬ್ಧವಾಗುವಂತಾಗಿದೆ. ಕಳೆದ ದಶಕದಲ್ಲಿ ಜಿಲ್ಲೆಯ ಹಾಲಕ್ಕಿಗಳು, ಜಿಲ್ಲೆ ಜಿಲ್ಲೆಯ ಹೊರಗಿನ ಸಿದ್ಧಿ ಗಳು ಬದುಕು, ಭೂಮಿ, ಸರ್ಕಾರಿ ಅವಕಾಶ, ಅನುಕೂಲಕ್ಕಾಗಿ ಹೋರಾಡಿದ್ದು ಬಿಟ್ಟರೆ ಉಳಿದ ಕುಣಬಿಗಳು, ಗೌಳಿಗಳು, ಮರಾಠರು, ದೀವರು,ಸೇರಿದ ಅನೇಕ ನೈಜ ಬುಡಕಟ್ಟುಗಳು ತಮ್ಮ ಅಸ್ಮಿತೆಯ ಹೋರಾಟವನ್ನು ಮರೆತು ಧರ್ಮ, ರಾಷ್ಟ್ರೀಯತೆಯ ಬಲಪಂಥೀಯ ರಾಜಕೀಯ ನೊಗವನ್ನು ಹೊತ್ತಿವೆ.
ಇದರಿಂದಾದ ಪರಿಣಾಮವೆಂದರೆ…. ಮೂಲನಿವಾಸಿಗಳು ಎಚ್ಚರತಪ್ಪಿ ಮೇಲ್ವರ್ಗದ ರಾಜಕೀಯ ಲಾಭದ ಕೈಗೊಂಗೆಗಳು, ಕಾಲಾಳುಗಳಾಗಿದ್ದು.
ಉತ್ತರಕನ್ನಡವೆಂದರೆ…… ಕಾಣದ ಕಡಲು,ಎದೆ ಎತ್ತಿ ನಿಂತ ಗುಡ್ಡ-ಬೆಟ್ಟಗಳು ಅವುಗಳ ನಡುವಿನ ಜನಜೀವನದ ಜೀವಂತ ಸಂಸ್ಕøತಿ-ಬುಡಕಟ್ಟು ಸಾಂಪ್ರದಾಯಿಕ ಬದುಕು. ಕರಾವಳಿಯ ಲಕ್ಷಾಂತರ ಜನ ಕಡಲಿನೊಂದಿಗೆ ಸೆಣಸಿ ಮುತ್ತು ಹೆಕ್ಕುವ ಸಾಹಸ ಮಾಡುವ ಮೀನುಗಾರರು. ಅವರಲ್ಲಿ ಆಯಾ ಸ್ಥಳಗಳ ಭಾಷಾ ವೈವಿಧ್ಯತೆಗೆ ತಕ್ಕಂತೆ ಕೊಂಕಣಿ ಮಾತನಾಡುತ್ತಾರಾದರೂ ಅವರ ಕನ್ನಡ, ಬಹುವೈಶಿಷ್ಟ್ಯದ ಕೊಂಕಣಿ, ಮರಾಠಿ ಮಿಶ್ರಿತ ಪಂಚರದೇಶಿ ಕನ್ನಡವೆ.
ಜಿಲ್ಲೆಯಲ್ಲಿ ಮುಸ್ಲಿಂ ರೊಂದಿಗೆ ಇತರ ಅಲ್ಫಸಂಖ್ಯಾತ ಪಂಗಡಗಳಿದ್ದರೂ ಅಲ್ಫಸಂಖ್ಯಾತರಲ್ಲಿ ಮುಸ್ಲಿಂ ರೇ ಬಹುಸಂಖ್ಯಾತರು. ಭಟ್ಕಳದ ನವಾಯತಿಗಳನ್ನು ಬಿಟ್ಟರೆ ಜಿಲ್ಲೆಯ ಹನ್ನೊಂದು ತಾಲೂಕುಗಳಲ್ಲಿ ಸ್ವದೇಶಿ, ಮೂಲನಿವಾಸಿ ಪರಿವರ್ತಿತ ಇಸ್ಲಾಂ ಮತಾನುಯಾಯಿಗಳು ಜಿಲ್ಲೆಯ ನಾಲ್ಕನೇ ಬಹುಸಂಖ್ಯಾತ ಗುಂಪು.
ಇವರಲ್ಲಿ ಭಟ್ಕಳ ಸೇರಿದ ಕೆಲವೆಡೆ ಕೊಂಕಣಿ ಮಿಶ್ರಿತ ನವಾಯತಿ ಮಾತನಾಡುತ್ತಾರಾದರೂ ಅವರ ಭಾಷೆ ಉರ್ದು. ಭಟ್ಕಳದಿಂದ ಪ್ರಾರಂಭವಾಗಿ ಮುಂಡಗೋಡು-ಹಳಿಯಾಳಗಳ ವರೆಗೆ ಮುಸ್ಲಿಂರು ಉದ್ಯಮ, ಕೃಷಿ ಜೊತೆಗೆ ಹೊರದೇಶಗಳ ಉದ್ಯೋಗ ಅವಲಂಬಿಸಿದ್ದಾರೆ. ಇವರೊಂದಿಗೆ ಜಿಲ್ಲೆಯ ದೀವರನ್ನೊಳಗೊಂಡ ಹಿಂದುಳಿದ ವರ್ಗ ಜೊತೆಯಾಗಿದ್ದಾಗ ಭಟ್ಳಳದ ಎಸ್.ಎಂ. ಯಾಹ್ಯಾ ಶಾಸಕರಾಗಿ, ಸಚಿವರೂ ಆಗಿದ್ದರು. ನಂತರ ವಿದೇಶಿ ವಲಸೆ ಆರ್ಯ ಪರಿವಾರದ ವಿಭಜಕರಾಜಕೀಯ, ಧಾರ್ಮಿಕ ಮತಾಂಧತೆಯ ಪ್ರಯೋಗದಿಂದ ಭಟ್ಖಳದಲ್ಲಿ ಗೆದ್ದ ಬಿ.ಜೆ.ಪಿ. ನಂತರ ಉತ್ತರಕನ್ನಡದಾದ್ಯಂತ ವಿಸ್ತರಿಸಿದ್ದು ಮತಾಂಧತೆಯ ಪರಾಕಾಷ್ಟೆ ಮತ್ತು ಹಿಂದುಳಿದವರು ದಲಿತರ ವಿಘಟನೆಯಿಂದ.
ದೇವರಾಜ ಅರಸು ಕಾಲದಲ್ಲಿ ಹೋರಾಟ,ಅಸ್ಮಿತೆಯ ಜನಾಂದೋಲನದಿಂದ ಕಾಂಗ್ರೆಸ್ ನೇತೃತ್ವದ ಜಾತ್ಯಾತೀತ ಶಕ್ತಿಯಾಗಿದ್ದ ಜಿಲ್ಲೆ ಧಾರ್ಮಿಕ ರಾಜಕಾರಣದ ಷಡ್ಯಂತ್ರದಿಂದ ಬಲಪಂಥೀಯ ವಿಚಾರಧಾರೆಯ ಶ್ರೀಮಂತ, ಸಾಂಖ್ಯಿಕ ಅಲ್ಫಸಂಖ್ಯಾತರನಾಯಕತ್ವ ಬೆಳೆದು ಜಿಲ್ಲೆಯ ಮೂಲನಿವಾಸಿ ಬಹುಸಂಖ್ಯಾತರು,ಮೂಲನಿವಾಸಿ ಪರಿವರ್ತಿತ ಧಾರ್ಮಿಕ ಅಲ್ಫಸಂಖ್ಯಾತರು ನಾಯಕತ್ವ,ಜನನಾಯಕತ್ವ ಕಳೆದುಕೊಂಡಿದ್ದು ಮೇಲ್ವರ್ಗದ ಹಿಂದೂ ಎನ್ನುವ ವೈದಿಕ ಮತಾಂತರದಿಂದ.
ಭಟ್ಕಳ,ಹೊನ್ನಾವರಗಳಲ್ಲಿರುವ ಜೈನರು ಈ ಅಲ್ಫಸಂಖ್ಯಾತ ಜನವರ್ಗದ ಮೇಲೆ ಪ್ರಭಾವ ಬೀರಿದ್ದರೂ ಬಹುಸಂಖ್ಯಾತ ಹಿಂದುಳಿದವರ ಬೌದ್ಧಿಕ ಮತ್ತು ಸಂಘಟನಾತ್ಮಕ ದಿವಾಳಿತನಗಳಿಂದ ಜಿಲ್ಲೆಯ ಹಿಂದುಳಿದವರ ಜೊತೆಗೆ ಅಲ್ಫಸಂಖ್ಯಾತರ ನಾಯಕತ್ವವನ್ನು ಕೊಂದಿದ್ದು ವೈದಿಕ ಶಾಹಿ ಮತಾಂಧತೆಯ ಉಪಾಯದ ರಾಜಕಾರಣವೆ.
ಹಿಂದೂ ಮುಖವಾಡದ ವೈದಿಕಶಾಹಿ ರಾಜಕಾರಣದಿಂದಾಗಿ ಜಿಲ್ಲೆಯ ಬಹುಸಂಖ್ಯಾತ ದೀವರು ಅವರೊಂದಿಗೆ ಅಲ್ಪಸಂಖ್ಯಾತರು ನಾಯಕತ್ವ, ಜನಪ್ರತಿನಿಧಿತ್ವ ಕಳೆದುಕೊಂಡರು. ಇವರೊಂದಿಗೆ ವೈದಿಕ ಶಾಹಿಯ ಉಪಾಯದ ವಿಷವರ್ತುಲದಲ್ಲಿ ಸಿಕ್ಕು ವಿಲವಿಲ ಒದ್ದಾಡುತ್ತಿರುವ ಸಮೂದಾಯಗಳೆಂದರೆ ಅವು ಒಕ್ಕಲಿಗರು ಮತ್ತು ರಾಮಕ್ಷತ್ರಿಯರು. ಬನವಾಸಿ ಕದಂಬರ ಕಾಲದಲ್ಲಿ ಉತ್ತರದಿಂದ ಪೂಜೆಗಾಗಿ ಬಂದ ಬ್ರಾಹ್ಮಣರು ಉತ್ತರ ಕನ್ನಡ ಕರಾವಳಿಯಿಂದ ಘಟ್ಟ ಹತ್ತಿದ್ದು ಒಕ್ಕಲಿಗರು ಮತ್ತು ರಾಮಕ್ಷತ್ರಿಯರ ನೆರವಿನಿಂದ.
ಅಂದಿನಿಂದ ಇಂದಿನವರೆಗೂ ಆ ಎರಡೂ ಸಮೂದಾಯಗಳಿಗೆ ನಾವು ನಿಮ್ಮೊಂದಿಗಿದ್ದೇವೆ ಎಂದು ಅಭಿನಯಿಸುತ್ತಾ, ಬಿಂಬಿಸುತ್ತಾ ಅವರು ಹಿಂದುಳಿದ ವರ್ಗಗಳ ಜೊತೆಗೆ ಸೇರದ ವಿಘಟನೆಗೆ ಕಾರಣವಾಗಿರುವ ವೈದಿಕರು ಈಗಲೂ ಅನುಕೂಲ, ನಾಯಕತ್ವ, ಮುಖಂಡತ್ವಗಳಿಲ್ಲದೆ ವೈದಿಕಶಾಹಿಯ ಕಪಿಮುಷ್ಠಿಯಲ್ಲಿ ನಲುಗುತ್ತಿವೆ. ಈ ನೋವು ಮರೆಸಲು ಹಿಂದುತ್ವದ ಹೆಸರಲ್ಲಿ ವೈದಿಕ ವಿಷಕುಡಿಸಿ ಈ ಸಮೂದಾಯಗಳ ಹೋರಾಟ, ಒಗ್ಗಟ್ಟು ತಡೆಯುವಲ್ಲಿ ಯಶಸ್ವಿಯಾಗಿರುವ ಮೇಲ್ವರ್ಗ ದಾಸ್ಯತ್ವಕ್ಕೆ ರಾಜಕಾರಣಕ್ಕೆ ಮಾತ್ರ ಈ ಸಮೂದಾಯಗಳನ್ನು ಓಲೈಸುತ್ತದೆ,ಬಿಟ್ಟರೆ ಹವ್ಯಕರ ಸಂತಾನಾಭಿವೃದ್ಧಿಗೆ ಮಡಿಲುಕೊಟ್ಟ ಇವುಗಳೊಂದಿಗಿನ ಉತ್ತರ ಕನ್ನಡದ ಹಿಂದುಳಿದ ವರ್ಗಗಳು ಈಗಲೂ ಅವರ ವೈದಿಕ ಉಪಾಯದ ಹಿಂದೂ ಮತಾಚರಣೆಯಲ್ಲಿ ನಲುಗುತ್ತಾ ಶೋಷಣೆಗೊಳಗಾಗಿವೆ.
ಈ ವರ್ಗಗಳೂ ಬಿ.ಜೆ.ಪಿ. ಪಾರಮ್ಯದ ಸಮಯದಲ್ಲಿ ನಾಯಕತ್ವ, ರಾಜಕೀಯ ಪ್ರಾತಿನಿಧಿತ್ವ ಕಳೆದುಕೊಂಡಿದ್ದು ದುರಂತ.
ಹೀಗೆ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಬಹುಸಂಖ್ಯಾತ ಮರಾಠರು, ಉತ್ತರಕನ್ನಡ ಜಿಲ್ಲೆಯ ಬಹುಸಂಖ್ಯಾತ ದೀವರು ಇವರೊಂದಿಗೆ ಇತರ ಶ್ರಮಿಕ ವರ್ಗಗಳು ಅಸ್ಮಿತೆ, ನಾಯಕತ್ವ, ಜನಪ್ರತಿನಿಧಿತ್ವಗಳಿಂದ ವಂಚಿತವಾಗಲು ಕಾರಣ ಹಿಂದುತ್ವದ ಮುಖವಾಡದ ಮೇಲ್ವರ್ಗದ ಶೋಷಕ ವೈದಿಕತ್ವ.
ರೂಢಿ,ಸಂಪ್ರದಾಯ, ಆಚರಣೆ, ನಂಬಿಕೆ ಧರ್ಮಗಳ ಹೆಸರಲ್ಲಿ ಹಿಂದುಳಿದವರ ತಲೆಯಲ್ಲಿ ನಶೆ, ಮತಾಂಧತೆ, ಕ್ರೂರತನಗಳನ್ನು ತುಂಬುವ ವೈದಿಕ ಶಾಹಿ ಅನುಕೂಲ, ಆದಾಯ, ಲಾಭಗಳ ಜೊತೆಗೆ ನಾಯಕತ್ವ, ಜನಪ್ರತಿನಿಧಿತ್ವಗಳನ್ನೂ ಕಬಳಿಸಿರುವ ಹಿಂದಿನ ಅವರ ಮೂಲ ಶಕ್ತಿ ಸಂಘ ಮತ್ತು ವೈದಿಕತೆ.
ವೈದಿಕತೆಯ ಮೂಲಕವೇ ಉಪಾಯದಿಂದ ಹಿಂದುಳಿದವರ ಒಗ್ಗಟ್ಟು,ವಿವೇಕ, ಸಂಘಟನೆ, ಹೋರಾಟಗಳನ್ನು ಮುರಿಯುವ ವೈದಿಕ ಶಾಹಿ ಸಾಮಾಜಿಕ, ಸಾಂಸ್ಕøತಿಕ, ರಾಜಕೀಯ ಕ್ಷೇತ್ರಗಳಲ್ಲಿ ಬೆಳೆದಿದೆ. ಇದರಿಂದ ಭಾರತದಾದ್ಯಂತದಂತೆ ಅಲ್ಪಸಂಖ್ಯಾತ ವಲಸೆ ಆರ್ಯರು. ಈ ದೇಶದ ಜಿಲ್ಲೆಯ ಆಡಳಿತ, ಅಧಿಕಾರವನ್ನು ಅತಿಕ್ರಮಿಸಿ ಬಹುಸಂಖ್ಯಾತರನ್ನು ಆಳುತಿದ್ದಾರೆ. ಈ ಹೋರಾಟದಲ್ಲಿ ಪರಿಶಿಷ್ಟವರ್ಗಗಳಾದ ಬುಡಕಟ್ಟುಗಳು ಅನ್ಯಾಯಕ್ಕೊಳಗಾಗುತಿದ್ದಾರೆ.
ಬುಡಕಟ್ಟುಗಳಿಗಿಲ್ಲದ ಅನುಕೂಲ ನಾಯಕತ್ವ-
ವಿಜೃಂಬಣೆಯಿಂದ ನಡೆದ ಸರ್ಕಾರಿ ಬೀರಗುಂಡಿ ಜಾತ್ರೆ
ಪ್ರತಿವರ್ಷ ಹೊಸವರ್ಷದ ಮೊದಲವಾರ ನಡೆಯುವ ಇಲ್ಲಿಯ ಸರ್ಕಾರಿ ಜಾತ್ರೆ ಬೀರಗುಂಡಿ ಭೂತಪ್ಪನ ಜಾತ್ರೆ ವಿಜೃಂಬಣೆಯಿಂದ ನಡೆಯಿತು.
