

ಸಿದ್ದಾಪುರ ತಾಲೂಕಾ ಜೇನು ಸಾಕುವವರ ಸಹಕಾರಿ ಉತ್ಪಾದಕ ಸಂಘಕ್ಕೆ ಕರ್ನಾಟಕ ರಾಜ್ಯ ಪ್ರಗತಿಪರ ಜೇನು ಕೃಷಿಕ ಸಂಘ ಪ್ರಶಸ್ತಿ ಲಭ್ಯವಾಗಿದ್ದು ತೋಟಗಾರಿಕಾ ಸಚಿವ ವಿ.ಸೋಮಣ್ಣ ಬೆಂಗಳೂರ ಲಾಲ್‍ಬಾಗ್‍ನಲ್ಲಿ ಇತ್ತೀಚೆಗೆ ಜರುಗಿದ ರಾಜ್ಯಮಟ್ಟದ ಜೇನುಗಾರಿಕೆ ಕಾರ್ಯಾಗಾರ ಮತ್ತು ಮಧುಮಹೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
70 ವರ್ಷಗಳಿಂದ ಸಹಕಾರಿ ತಳಹದಿಯ ಮೇಲೆ ಜೇನು ವ್ಯವಸಾಯವನ್ನು ಪ್ರೋತ್ಸಾಹಿಸುತ್ತಾ, ರೈತರಿಗೆ ತರಬೇತಿ ನೀಡಿ, ಅವರಿಂದ ಜೇನು ತುಪ್ಪ ಖರೀದಿಸಿ, ಮಾರಾಟ ಮಾಡುತ್ತಿರುವ ಸಂಘದ ಜೇನುತುಪ್ಪವು ತನ್ನ ಗುಣಮಟ್ಟದಿಂದಾಗಿ ಗ್ರಾಹಕರ ವಿಶ್ವಾಸ ಗಳಿಸಿದೆ. ಜೇನು ಉತ್ಪಾದನಾ ಉಪಕರಣಗಳನ್ನು ಸಹ ವಿಕ್ರಯ ಮಾಡುತ್ತಿರುವ ಸಂಘವು ಲಾಭದ ಹಾದಿಯಲ್ಲಿದೆ. ತೋಟಗಾರಿಕಾ ಇಲಾಖೆಯು ಸಂಘದ ಸಾಧನೆಯ ಮುನ್ನಡೆ ಗುರುತಿಸಿ ಈ ಪ್ರಶಸ್ತಿ ನೀಡಿದ್ದು ಸಂಘದ ಅಧ್ಯಕ್ಷ ಆರ್.ಆರ್.ಹೆಗಡೆ ಐನಕೈ ಹಾಗೂ ಕಾರ್ಯನಿರ್ವಾಹಕಿ ಸುಮಂಗಲಾ ಎಸ್.ಹೆಗಡೆ ಪ್ರಶಸ್ತಿಯನ್ನು ಸ್ವೀಕರಿಸಿದರು.
ಸಮಾಜಮುಖಿ ವಿಷನ್ 2020-02
ಚುನಾವಣೆ ಮುಗಿದು ಹೋದ ಮೇಲೆ,ಮಳೆ ನಿಂತು ಹೋದ ಮೇಲೆ ಬದಲಾಗದ ಹಳೆ ಲೀಲೆ
2014 ರಲ್ಲಿ ಉಪಾಯದ ಪರಿವಾರದ ವ್ಯಕ್ತಿ- ಶಕ್ತಿಗಳು ನಾಯಕತ್ವ ವಹಿಸಿದ ಮೇಲೆ ಜಿಲ್ಲೆಯ ಬಹುಸಂಖ್ಯಾತರ ಭವಿಷ್ಯ, ಬದುಕಿನ ಅರಣ್ಯ ಹಕ್ಕು, ಸಾಮಾಜಿಕ,ರಾಜಕೀಯ ಹೋರಾಟಗಳೆಲ್ಲಾ ಹಿನ್ನೆಲೆಗೆ ಸರಿದು. ಮತ-ಧರ್ಮಗಳ ಅಮಲಿನ ನಾಗಾಲೋಟಕ್ಕೆ ಸಿಕ್ಕ ಜನ ತಮ್ಮ ನೆಲ ಬಿರಿಯುತ್ತಿರುವ ಅರಿವೂ ಇರದಂತೆ ಧಾರ್ಮಿಕ ದಾಸರಾಗಿದ್ದಾರೆ.
ಈ ವಿಷಮತೆಯನ್ನು ಸರಿಯಾಗಿ ಬಳಸಿಕೊಂಡ ಸಾಂಪ್ರದಾಯಿಕ ಬಲಪಂಥೀಯ ರಾಜಕಾರಣ ಸಾರ್ವಜನಿಕರ ಅನ್ನ, ಆಹಾರ, ಆರೋಗ್ಯಕ್ಕಿಂತ ಧರ್ಮ ಮುಖ್ಯ ಎಂಬ ವಿಷವನ್ನು ಬಿತ್ತಿ ದ್ವೇಶ,ಸೇಡಿನ ಮತೀಯವಾದಿ ರಾಜಕೀಯದ ಲಾಭ ಬೆಳೆದಿದ್ದಾರೆ. ಇದರ ಪರಿಣಾಮವೆಂದರೆ……
