.
ಜ.14ರಿಂದ ಪ್ರಾರಂಭ
ಸಿದ್ಧಾಪುರ ತಾಲೂಕಿನ ಅತಿ ದೊಡ್ಡಜಾತ್ರೆ ಎನ್ನುವ ಹೆಗ್ಗಳಿಕೆ ಇದ್ದ ಸಿದ್ಧಾಪುರದ ವಾಜಗೋಡು ಪಂಚಾಯತ್ ನ ಲಂಬಾಪುರದ ಬರಗಾಲ ಜಾತ್ರೆ ಜ.14 ರ ಮಂಗಳವಾರದಿಂದ ಪ್ರಾರಂಭವಾಗುತ್ತಿದೆ. ಹಿಂದೆ ಅಂದರೆ ಬಹುಹಿಂದೆ ಬಿಳಗಿ ಅರಸರ ಕಾಲದಿಂದಲೂ ಇಲ್ಲಿ ಜಾತ್ರೆ ನಡೆಯುತಿತ್ತು ಎನ್ನುವ ಪ್ರತೀತಿ ಇರುವ ಈ ಬರಗಾಲ ಬಿಳಗಿ ಅರಸರ ಹಿಂದಿನ ರಾಜಧಾನಿ ಐಸೂರಿಗೆ ತಾಕಿಕೊಂಡಿರುವ ಪ್ರದೇಶ. ಈ ಪ್ರದೇಶದಲ್ಲಿ ತಿಂಗಳುಗಳ ವರೆಗೆ ನಡೆಯುತಿದ್ದ ಜಾತ್ರೆ ಈ ಭಾಗದ ಜನರಿಗೆ ದವಸ,ಧಾನ್ಯ, ಕಾಳು-ಮೆಣಸು ಕೊಳ್ಳುವ ವಿಶೇಶ ಜಾತ್ರೆಯಾಗಿತ್ತು.
ಈಗ ಇಲ್ಲಿರುವ ಕಾಲಭೈರವ ದೇವರು ಹಾಗೂ ತ್ರಿಲಿಂಗೇಶ್ವರ ದೇವರುಗಳಿಗೂ ಸಂಕ್ರಾಂತಿ ಸಮಯದಲ್ಲಿ ಜಾತ್ರೆ ನಡೆಯುತ್ತದೆ. ಪ್ರತಿಸೋಮುವಾರ ಪೂಜೆ ನಡೆಯುವ ಇಲ್ಲಿಯ ಕಾಲಭೈರವ ಸನ್ನಿಧಿಯಲ್ಲಿ ಸರ್ಪ ವಾಸಿಸುತ್ತದೆ ಎನ್ನುವ ನಂಬಿಕೆ ಉಂಟು. ಕಳೆದ ವಸ್ತುಗಳು ಮರಳಲು, ಸಂತಾನಪ್ರಾಪ್ತಿಯಾಗಲು ಹರಕೆ ಹೊರುವ ಸಾರ್ವಜನಿಕರು ನಾನಾ ಹರಕೆಗಳನ್ನು ತೀರಿಸಲು ಇಲ್ಲಿಗೆ ಬರುತ್ತಾರೆ.
ಹೀಗೆ ಸಂಪ್ರದಾಯ, ನಂಬಿಕೆ,ರೂಢಿಗಳಿಂದ ಅನೇಕ ವರ್ಷಗಳಿಂದ ನಡೆದು ಬರುತ್ತಿರುವ ಈ ಜಾತ್ರೆ ಸಿದ್ದಾಪುರದ ಅರ್ಧಕ್ಕರ್ಧ ಜನರ ಜಾತ್ರೆಯಾಗುವ ಜೊತೆಗೆ ಈ ದೇವರು, ಜಾತ್ರೆಗೆ ಸುತ್ತಲ ಮೂರ್ನಾಲ್ಕು ಜಿಲ್ಲೆಯ ಅನುಯಾಯಿಗಳೂ ಬರುತ್ತಾರೆ. ಪ್ರತಿ ಸಂಕ್ರಾಂತಿಯ ಜನೇವರಿ 14 ರಂದು ನಡೆಯುವ ಈ ಬರಗಾಲ ಜಾತ್ರೆಯ ವಿಶೇಶವೆಂದರೆ 14 ರ ಸಾಮೂಹಿಕ ಅನ್ನಸಂತರ್ಪಣೆ ನಂತರ ಈ ಭಾಗದ ಹಳ್ಳಿಗಳ ಜನರು ವಾರದ ವರೆಗೂ ಮಾಂಸದ ಅಡುಗೆ ಮಾಡಿ ಅತಿಥಿಗಳನ್ನು ಉಪಚರಿಸುವುದು ವಾಡಿಕೆ. ಹೀಗೆ ಅನೇಕ ವಿಶೇಶಗಳ ಈ ಜಾತ್ರೆ ಸಿದ್ಧಾಪುರದ ಪ್ರಮುಖ ಜಾತ್ರೆಯಾಗಿ ಗಮನ ಸೆಳೆಯುತ್ತಿರುವುದು ವಿಶೇಶ.
ಆಧಾರ್ ಪರದಾಟ ತಪ್ಪಿಸಲು ರಾಷ್ಟ್ರಪತಿಗಳಿಗೆ ಪತ್ರ
ದೇಶದಲ್ಲಿ ನಾನಾ ಕಾನೂನು-ಕಾಯಿದೆ ಜಾರಿ ಮಾಡಲು ಹವಣಿಸುತ್ತಿರುವ ಕೇಂದ್ರ ಸರ್ಕಾರ ಜನರ ಅಗತ್ಯ ಆಧಾರ್‍ಕಾರ್ಡ್ ನೀಡಿಕೆ,ತಿದ್ದುಪಡಿ ಮಾಡುತ್ತಿಲ್ಲ ಎನ್ನುವ ಆರೋಪ ಬಲವಾಗುತ್ತಿದೆ.
ಈ ಬಗ್ಗೆ ರಾಷ್ಟ್ರಪತಿಗಳಿಗೆ ಮನವಿ ಮಾಡಿ, ಪರಿಹಾರ ಕೋರಿರುವ ಜೆ.ಡಿ.ಎಸ್. ಜಿಲ್ಲಾ ಅಲ್ಫಸಂಖ್ಯಾತರ ಘಟಕದ ಅಧ್ಯಕ್ಷ ಇಲಿಯಾಸ್ ಶೇಖ್ ರಾಜ್ಯ ವಿಧಾನಸಭಾ ಅಧ್ಯಕ್ಷರು, ಮಾಜಿ ಕೇಂದ್ರ ಸಚಿವರು ಪ್ರತಿನಿಧಿಸುವ ಶಿರಸಿ ಕ್ಷೇತ್ರದಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ರಗಳೆಯಾಗುತಿದ್ದು ಇದಕ್ಕೆ ಸೂಕ್ತ ಏರ್ಪಾಡು ಮಾಡುವ ಮೂಲಕ ಜನರ ನೆರವಿಗೆ ಬರಲು ಕೋರಿದ್ದಾರೆ.