

ಸಿದ್ಧಾಪುರ ತಾಲೂಕಿನ ಏಕೈಕ ಸ್ನಾತಕೋತ್ತರ ಶಿಕ್ಷಣ ಕೇಂದ್ರ ಧನ್ವಂತರಿ ಆಯುರ್ವೇದ ಕಾಲೇಜಿನ ವಾರ್ಷಿಕೋತ್ಸವ ಮತ್ತು ಪದವಿಪ್ರದಾನ ಸಮಾರಂಭ ಜ.13 ರ ಸೋಮವಾರ ನಡೆಯಲಿದೆ. ಇದೇ ದಿನ ನೂತನಸುಸಜ್ಜಿತ ಸಭಾಭವನ ಸುವಾಚಾ ಲೋಕಾರ್ಪಣಗೊಳ್ಳಲಿದೆ.
ಈ ಬಗ್ಗೆ ಕಾಲೇಜಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಪ್ರಸಾರಕ ಸಮೀತಿಯ ಅಧ್ಯಕ್ಷ ವಿನಾಯಕ ಹೆಗಡೆ ತಾಲೂಕಿನಿಂದ ಮೊದಲ ಸ್ನಾತಕೋತ್ತರ ಆಯುರ್ವೇದ ಪದವಿಧರರು ಹೊರನಡೆಯುತಿದ್ದು ಈ ದೀಕ್ಷಾಂತಾ2020 ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವ್ಯಾಸ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಆರ್.ರಾಮಕೃಷ್ಣ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಇದೇ ದಿನ ನಡೆಯುವ ಧನ್ವಂತರಿ ಆಯುರ್ವೇದ ಕಾಲೇಜಿನ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಶಿರಸಿ ಸಹಾಯಕ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಪಾಲ್ಗೊಳ್ಳಲಿದ್ದಾರೆ ಎಂದು ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ರೂಪಾ ಭಟ್ ಹೇಳಿದರು.
ಯೋಗ್ಯಚಿಕಿತ್ಸೆ,ಉತ್ತಮ ಸೇವೆ,ಉತೃಷ್ಟ ತಾಂತ್ರಿಕತೆಗಳಿಂದ ಗಮನ ಸೆಳೆಯುತ್ತಿರುವ ಲೇನಸ್‍ಆಸ್ಫತ್ರೆ
ಮಲೆನಾಡಿನ ನುರಿತ ವೈದ್ಯರು,ಉತ್ಕøಷ್ಟ ತಾಂತ್ರಿಕತೆ, ಉತ್ತರದಾಯಿಯಾದ ಚಿಕಿತ್ಸೆ ಸೇರಿದಂತೆ ಹಲವು ವೈಶಿಷ್ಟ್ಯಗಳಿಂದ ಬೆಂಗಳೂರು ಜೇ.ಪಿ.ನಗರದ ಲೆನಸ್ ಆಸ್ಫತ್ರೆ ಗಮನ ಸೆಳೆಯುತ್ತಿದೆ.
ಈ ಆಸ್ಫತ್ರೆಯ ತಜ್ಞ ವೈದ್ಯರು,ಮುಖ್ಯಸ್ಥರು ಆಗಿರುವ ಸಾಗರದ ಡಾ.ಟಿ.ಎಮ್.ಸತೀಶ್ ಶ್ರೇಷ್ಠ ಶಸ್ತ್ರ ಚಿಕಿತ್ಸಕರೆಂದು ಪ್ರಸಿದ್ಧರಾಗಿದ್ದು ಮಲೆನಾಡು ಮತ್ತು ರಾಜ್ಯದ ಜನರ ಪಾಲಿಗೆ ವೈದ್ಯ ನಾರಾಯಣ ರೆನಿಸಿಕೊಂಡಿದ್ದಾರೆ.



