

ಮಲೆನಾಡಿನ ನುರಿತ ವೈದ್ಯರು,ಉತ್ಕøಷ್ಟ ತಾಂತ್ರಿಕತೆ, ಉತ್ತರದಾಯಿಯಾದ ಚಿಕಿತ್ಸೆ ಸೇರಿದಂತೆ ಹಲವು ವೈಶಿಷ್ಟ್ಯಗಳಿಂದ ಬೆಂಗಳೂರು ಜೇ.ಪಿ.ನಗರದ ಲೆನಸ್ ಆಸ್ಫತ್ರೆ ಗಮನ ಸೆಳೆಯುತ್ತಿದೆ.
ಈ ಆಸ್ಫತ್ರೆಯ ತಜ್ಞ ವೈದ್ಯರು,ಮುಖ್ಯಸ್ಥರು ಆಗಿರುವ ಸಾಗರದ ಡಾ.ಟಿ.ಎಮ್.ಸತೀಶ್ ಶ್ರೇಷ್ಠ ಶಸ್ತ್ರ ಚಿಕಿತ್ಸಕರೆಂದು ಪ್ರಸಿದ್ಧರಾಗಿದ್ದು ಮಲೆನಾಡು ಮತ್ತು ರಾಜ್ಯದ ಜನರ ಪಾಲಿಗೆ ವೈದ್ಯ ನಾರಾಯಣ ರೆನಿಸಿಕೊಂಡಿದ್ದಾರೆ.
ಬೆಂಗಳೂರು ಜೆ.ಪಿ. ನಗರ ರಾಗಿಗುಡ್ಡ ರಸ್ತೆಯ ಈ ಲೆನಸ್ ಆಸ್ಫತ್ರೆ ಸಕಲ ವ್ಯವಸ್ಥೆ,ಉತ್ತಮ ಸೇವೆ ಹೊಂದಿರುವುದರಿಂದ ಮಲೆನಾಡಿನ ಜನತೆ ಈ ಆಸ್ಫತ್ರೆಗೆ ಧಾವಿಸುತಿದ್ದು ಬೆಂಗಳೂರಿನಲ್ಲಿ ನೆಲೆಸಿರುವ ಮಲೆನಾಡಿಗರ ಸೇವೆ-ಕೌಟಿಂಬಿಕ ವಾತಾವರಣ ರೋಗಿಗಳಿಗೆ ಆತ್ಮವಿಶ್ವಾಸ ತುಂಬುತಿದ್ದು ಈ ಭಾಗದ ಜನರು ಸಕಲ ವ್ಯವಸ್ಥೆ, ಪಕ್ಕಾ ಚಿಕಿತ್ಸೆಯ ಈ ಆಸ್ಫತ್ರೆ ಮತ್ತು ತಜ್ಞವೈದ್ಯರ ನೆರವು ಪಡೆಯಬೇಕೆಂದು ಡಾ.ಟಿ.ಎಂ. ಸತೀಶ್ ಅಭಿಮಾನಿಗಳು ಮಲೆನಾಡ ಜನತೆಗೆ ಮನವಿ ಮಾಡಿದ್ದಾರೆ.
ಕಠಿಣ ಶಸ್ತ್ರ ಚಿಕಿತ್ಸೆಗಳು, ಮನೆಯ ಉಪಚಾರ, ಸರಳ & ಸುಲಭ ಚಿಕಿತ್ಸೆಗಳಿಗಾಗಿ ಈ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಿದ್ದಾರೆ.
ಪೊ-080-26598888,ಮೊ-9353216048
(ಸದ್ಯದಲ್ಲೇ ಡಾ.ಸತೀಶ್ ದೂರವಾಣಿ,ಅಂತರ್ಜಾಲ ಕರೆಗಳ ಮೂಲಕ ಕರಾವಳಿ-ಮಲೆನಾಡಿನ ಜನರ ಆರೋಗ್ಯ,ಚಿಕಿತ್ಸೆ ಬಗ್ಗೆ ಆಪ್ತಸಮಾಲೋಚನೆ ಮೂಲಕ ಸಲಹೆ-ಸಹಕಾರ ನೀಡಲಿದ್ದಾರೆ. ನಿರೀಕ್ಷಿಸಿ…..)
ನಾಳೆ,ನಾಡಿದ್ದು ಟಿ.ಎಂ.ಎಸ್.ಅಮೃತಮಹೋತ್ಸವ ಗಣ್ಯಾತಿಗಣ್ಯರ ಸಮಾಗಮ
ಸಂಸ್ಥೆಯ ಸಂಕಷ್ಟದ ಸಮಯದಲ್ಲಿ ಅಂದಿನ ಸಹಕಾರ ಸಚಿವ ಕೆ.ಎಚ್.ಪಾಟೀಲ್ ಟಿ.ಎಂ.ಎಸ್. ಗೆ ಜೀವದಾನ ನೀಡಿದ್ದಾರೆ. ಅಂಥ ಮಹನೀಯರು, ತಾಲೂಕಿನ ಅಡಿಕೆ ಬೆಳೆಗಾರರ ಸಹಕಾರ, ಶ್ರಮದಿಂದ ಸಂಸ್ಥೆ ಯಶಸ್ವಿಯಾಗಿ 75 ವರ್ಷ ಪೂರೈಸಿದೆ. 1 ಕೋಟಿ ವೆಚ್ಚದ ಸಂಸ್ಥೆಯ ಕಟ್ಟಡ ನವೀಕರಣದೊಂದಿಗೆ ವಿದಾಯಕ ಕಾರ್ಯಕ್ರಮಗಳ ಮೂಲಕ 2 ದಿನ ಅಮೃತಮಹೋತ್ಸವ ಆಚರಿಸುತಿದ್ದೇವೆ.
-ಆರ್.ಎಂ.ಹೆಗಡೆ, ಬಾಳೇಸರ
ಸಿದ್ಧಾಪುರ ತಾಲೂಕಿನ ರೈತರ ಅಭಿಮಾನದ ಸಂಸ್ಥೆ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘದ 75 ನೇ ವರ್ಷದ ಅಮೃತಮಹೋತ್ಸವದ ಅಂಗವಾಗಿ ಜ.11,12 ರಂದು ವಿಶಿಷ್ಟ ಕಾರ್ಯಕ್ರಮಗಳು ನಡೆಯಲಿವೆ.
11 ರ ಶನಿವಾರ ಅಮೃತಮಹೋತ್ಸವದ ಅಂಗವಾಗಿ ವಿಚಾರ ಸಂಕಿರಣ ನಡೆಯಲಿದ್ದು ರವಿ ಹೆಗಡೆ ಹೂವಿನಮನೆ, ಡಾ.ಶಶಿಭೂಷಣ ಹೆಗಡೆ ದೊಡ್ಮನೆ, ಎ.ಆರ್. ಹೆಗಡೆ ಹೂಡ್ಲಮನೆ, ಎಸ್.ಜಿ.ಹೆಗಡೆ,ಜಿ.ಕೆ.ರಾಮಪ್ಪ ಉಪನ್ಯಾಸ ನೀಡಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಕೀಲ ಜಯಕುಮಾರ ಎಸ್. ಪಾಟೀಲ್ ಕೋಲಶಿರ್ಸಿ ವಹಿಸಲಿದ್ದಾರೆ.




