

ಉ.ಕ.ಏ.09
ಏಫ್ರಿಲ್ ತಿಂಗಳ 5 ಮತ್ತು 9 ರ ಎರಡು ದಿವಸ ಎರಡು ಹಂತಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದ್ದು ಉತ್ತರ ಮತ್ತು ಕರಾವಳಿ ಕರ್ನಾಟಕದಲ್ಲಿ ಏ.9 ರಂದು ಉಳಿದ ಜಿಲ್ಲೆಗಳಲ್ಲಿ ಏ.5 ರಂದು ಚುನಾವಣೆ ನಡೆಯಲಿದೆ.
ಗ್ರಾ.ಪಂ. ಚುನಾವಣೆಗೆ ಅಭ್ಯರ್ಥಿಗಳಾಗಬಯಸುವವರು ಕನಿಷ್ಟ ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳ ಪೋಷಕರು, ಕುಟುಂಬಸ್ಥರು ಸರ್ಕಾರಿ, ಅರೆ ಸರ್ಕಾರಿ ನೌಕರಾಗಿರಬಾರದು ಎಂದು ನಿರ್ಬಂಧ ಹೇರಲಾಗಿದೆ.
ತಡರಾತ್ರಿ ಶಿರಸಿ ರಸ್ತೆಯಲ್ಲಿ ವಾಹನ ಬೆನ್ನಟ್ಟುವ ಪಾಪಿಗಳು ಖಾರ ಎರಚಿ ದರೋಡೆ ಮಾಡುವವರೆ?
ಮೊದಲಘಟನೆ-
ಅದು ಒಂದುದಿನದ ಚಳಿಯ ಮುಸ್ಸಂಜೆ ಸಿದ್ಧಾಪುರದ ಕಛೇರಿಯ ಕೆಲಸ ಮುಗಿಸಿ ತೆರಳಿದ ಯುವಜೋಡಿಯೊಂದು ಕಾನಸೂರ ವರೆಗೆ ಬೈಕ್‍ರೈಡ್ ಹೋಗಿ, ಕಾನಸೂರಿನಲ್ಲಿ ಗೋಬಿ, ಪಾವಭಜಿ ತಿಂದು ಹೊರಡುವ ಹೊತ್ತಿಗೆ ಸಂಜೆಯ 8 ಗಂಟೆಯ ಸಮಯ ಕಾನಸೂರು ಅರಣ್ಯ ಇಲಾಖೆ ನರ್ಸರಿಯಿಂದ ಈ ಜೋಡಿಯ ದ್ವಿಚಕ್ರ ವಾಹನವನ್ನು ಹಿಂಬಾಲಿಸಿದ ವ್ಯಕ್ತಿ ಬೈಕ್ ಚಲಾಯಿಸುತಿದ್ದ ಯುವಕನಿಗೆ ನಿರ್ಜನ ಪ್ರದೇಶದಲ್ಲಿ ಕಣ್ಣಗೆ ಖಾರ ಎರಚಿ ನಿಲ್ಲಿಸುವ ಪ್ರಯತ್ನ ಮಾಡಿದ್ದಾನೆ, ಆದರೆ ಹೆದರಿದ ಯುವಕ (ಅವಿವಾಹಿತ ಜೋಡಿ) ಗೆಳತಿಯ ಮಾರ್ಗದರ್ಶನದಂತೆ ಬೈಕ್ ಚಲಾಯಿಸಿ ಪಾರಾಗಿದ್ದಾನೆ.
