

ಸಿದ್ಧಾಪುರ ತಾಲೂಕಿನ ವಿಶಿಷ್ಟ ಜಾತ್ರೆ ಅಯ್ಯಪ್ಪಸ್ವಾಮಿ ಜಾತ್ರಾಮಹೋತ್ಸವ ಮಂಗಳವಾರ ಮುಕ್ತಾಯವಾಗಲಿದೆ. ಜ.15 ರಂದು ಎಂದಿನಂತೆ ಪೂಜೆ,ಪುನಸ್ಕಾರಗಳಿಗೆ ಅವಕಾಶವಿದೆಯಾದರೂ ಜ.14 ರ ಸಂಜೆಯ ಅಯ್ಯಪ್ಪ ಶೋಭಾಯಾತ್ರೆಯ ಆನೆಯ ಮೇಲೆ ಅಯ್ಯಪ್ಪ,ಅಂಬಾರಿ ಮೆರವಣಿಗೆಯೊಂದಿಗೆ ಜ.10 ರಿಂದ ಪ್ರಾರಂಭವಾದ ಈ ಜಾತ್ರೆ ತಾಂತ್ರಿಕವಾಗಿ ಜ.15 ರಂದು ಮುಕ್ತಾಯವಾದರೂ ವಿದ್ಯುಕ್ತವಾಗಿ ಜ.14 ರಂದೇ ಮುಗಿಯಲಿದೆ.
ಉತ್ತರ ಕನ್ನಡ ಸೇರಿದಂತೆ ರಾಜ್ಯದಲ್ಲೆಲ್ಲೂ ಕಾಣದ ಶಬರಿಮಲೆ ಮಾದರಿಯ ಅಯ್ಯಪ್ಪ ದೇಗುಲ ಇದಾಗಿದ್ದು ಇಲ್ಲಿ ಸ್ಥಳಿಯರು, ಅಯ್ಯಪ್ಪ ಭಕ್ತರಿಗೆ ಸಕಲ ಅನುಕೂಲಗಳನ್ನು ಒದಗಿಸಲಾಗಿದೆ. ಇಂಥ ವೈಶಿಷ್ಟ್ಯದ ಈ ಜಾತ್ರೆ ಸಮಯದಲ್ಲಿ ಅನೇಕ ಶೃದ್ಧಾಳುಗಳು,ಪ್ರಮುಖರು, ರಾಜಕೀಯ ನಾಯಕರು
ಭೇಟಿ ನೀಡಿದ್ದಾರೆ. ಧಾರ್ಮಿಕ ಆಚರಣೆಗಳು ಅಂಗಡಿ ಮುಂಗಟ್ಟುಗಳು, ಮನೋರಂಜನಾ ಸಾಧನಗಳು ರಂಜಿಸಿದ ಈ ಜಾತ್ರೆ 2020 ರ ವರ್ಷಕ್ಕೆ ಜ. 15 ಕ್ಕೆ ಮುಗಿಯಲಿದೆ.ಜಾತ್ರೆಯ ವೇಳೆ ಅನೇಕರು ಬಂದು ಇಲ್ಲಿಯ ವಿಶೇಶ,ಅಲಂಕಾರಗಳನ್ನು ನೋಡಿ ಸಂಬ್ರಮಿಸುವುದು ಕಳೆದ ಕೆಲವು ವರ್ಷಗಳಿಂದ ಸಂಪ್ರದಾಯವಾದಂತಾಗಿದೆ.
ನಾಡಿನ ಸಮಸ್ತರಿಗೆ ಮಕರ ಸಂಕ್ರಾಂತಿ ಶುಭಾಶಯಗಳು,
ಇಂದಿನ ಅಯ್ಯಪ್ಪ ಅಂಬಾರಿ ಮೆರವಣಿಗೆಗೆ ಸರ್ವರಿಗೂ ಸ್ವಾಗತ, ತಾಲೂಕಿನ ಗ್ರಾಮೀಣ ಜನರ ಸಂಬ್ರಮದ ಸಂಕ್ರಾಂತಿ ಮತ್ತು ಬರಗಾಲ ವಾರ್ಷಿಕ ಜಾತ್ರೆಯ ಶುಭಾಶಯಗಳೊಂದಿಗೆ
ಸುದರ್ಶನ ಪಿಳ್ಳೆ & ಕುಟುಂಬ
ಅನೂಪ್‍ಗ್ರೂಪ್ ಸಿದ್ಧಾಪುರ (ಉ.ಕ.)
ನಾಡಿನ ಸಮಸ್ತರಿಗೆ ಮಕರ ಸಂಕ್ರಾಂತಿ ಶುಭಾಶಯಗಳು,
ಇಂದಿನ ಅಯ್ಯಪ್ಪ ಅಂಬಾರಿ ಮೆರವಣಿಗೆಗೆ ಸರ್ವರಿಗೂ ಸ್ವಾಗತ, ತಾಲೂಕಿನ ಗ್ರಾಮೀಣ ಜನರ ಸಂಬ್ರಮದ ಸಂಕ್ರಾಂತಿ ಮತ್ತು ಬರಗಾಲ ವಾರ್ಷಿಕ ಜಾತ್ರೆಯ ಶುಭಾಶಯಗಳೊಂದಿಗೆ ಸುನಿಲ್‍ಕುಮಾರ
ನಾಯ್ಕ,
ಸಂಪಖಂಡ
& ಕುಟುಂಬವರ್ಗ
ಪ್ರಗತಿಪರ ಕೃಷಿಕರು,
ಸಿದ್ಧಾಪುರ (ಉ.ಕ.) 9448576017




