

ದೇಶದಲ್ಲಿ ಶ್ರೀಮಂತ ಹಿತಾಸಕ್ತರು ಕಟ್ಟಿಕೊಳ್ಳುವ ಕಾರ್ಪೋರೇಟ್ ಸಂಸ್ಥೆಗಳಿಗೆ ಮತ್ತು ಜನಸಾಮಾನ್ಯರ ಸಹಕಾರಿ ಸಂಘಗಳಿಗೆ ಸಮಾನ ಜಿ.ಎಸ್.ಟಿ. ವಿಧಿಸಿ ನಂತರ ಕಾರ್ಪೋರೇಟ್ ಕ್ಷೇತ್ರಕ್ಕೆ 10% ರಿಯಾಯತಿ ನೀಡಿ ಸಹಕಾರಿ ಕ್ಷೇತ್ರಕ್ಕೆ 30% ಜಿ.ಎಸ್.ಟಿ. ಹೇರಲಾಗಿದೆ.
ಈ ತಾರತಮ್ಯ ಸರ್ಕಾರ ಯಾರ ಪರ ಇದೆ ಎನ್ನುವುದಕ್ಕೆ ಉದಾಹರಣೆ. ಸಹಕಾರಿ ಕ್ಷೇತ್ರದ ಪ್ರಮುಖರು ಕೆಲವು ಜನಪ್ರತಿನಿಧಿಗಳನ್ನು ನಿಲ್ಲಿಸಿ ಕೇಳುವ ಶಕ್ತಿ-ಸಂಪರ್ಕ ಹೊಂದಿದ್ದಾರೆ. ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ಮಾಡಬೇಕು. ನಾನಂತೂ ಸಹಕಾರಿ ಕ್ಷೇತ್ರಕ್ಕೆ ಈಗಿರುವ 30% ನಿಂದ ಕನಿಷ್ಟ 50% ರಿಯಾಯತಿ ನೀಡಬೇಕು ಎಂದು ಕೇಂದ್ರವನ್ನು ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತೇನೆ. – ಎಚ್.ಕೆ.ಪಾಟೀಲ್
ಸರ್ಕಾರ, ಖಾಸಗಿಕ್ಷೇತ್ರಗಳಿಗಿಂತ ಹೆಚ್ಚಿನ ಉತ್ತರದಾಯಿತ್ವ ಹೊಂದಿರುವ ಸಹಕಾರಿ ಕ್ಷೇತ್ರದ ಮೇಲೆ ಸರ್ಕಾರದ ಕೆಂಗಣ್ಣಿದ್ದು ಅಸಂಘಟಿತ ಕಾರ್ಮಿಕರಾಗಿರುವ ರೈತರು, ಕಾರ್ಮಿಕರ ಹಿತರಕ್ಷಿಸುವ ಸಹಕಾರಿ ಕ್ಷೇತ್ರವನ್ನು ಉಳಿಸಿ ಬೆಳೆಸುವ ಹೊಣೆ ಜನಸಾಮಾನ್ಯರ ಮೇಲಿದೆ ಎಂದು ಹೇಳಿರುವ ಮಾಜಿ ಸಚಿವ ಎಚ್. ಕೆ ಪಾಟೀಲ್ ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಹಕಾರಿ ಕ್ಷೇತ್ರ ದೇಶಕ್ಕೇ ಮಾದರಿಯಾಗಿದೆ ಎಂದು ಶ್ಲಾಘಿಸಿದ್ದಾರೆ.
ಇಲ್ಲಿಯ ಟಿ.ಎಂ.ಎಸ್. ಅಮೃತಮಹೋತ್ಸವದಲ್ಲಿ ಮಾತನಾಡಿದ ಅವರು ಯಾವುದೇ ವಸ್ತುವಿಗೆ ಉತ್ಫಾದಕ ಬೆಲೆ ನಿಗದಿಪಡಿಸಬೇಕು ಆದರೆ ರೈತರ ಬೆಳೆ, ಮಹಸೂಲಿಗೆ ಗ್ರಾಹಕರು ಬೆಲೆ ಕಟ್ಟುತ್ತಾರೆ. ಈ ಶೋಷಣೆ ತಡೆಯಲು ರೈತರು ಬೆಳೆದ ಬೆಳೆಗೆ ಸಹಕಾರಿ ಕ್ಷೇತ್ರದ ಮೂಲಕ ರೈತರೇ ಬೆಲೆ ನಿರ್ಧರಿಸುವಂತಾದರೆ ಉತ್ತಮ ಎಂದರು.
ಅಯ್ಯಪ್ಪ ಜಾತ್ರೆ ನಾಳೆ ಮುಕ್ತಾಯ,ಆನೆ-ಅಂಬಾರಿ ಮೆರವಣಿಗೆಯೊಂದಿಗೆ ಸಮಾಪ್ತಿ
ಸಿದ್ಧಾಪುರ ತಾಲೂಕಿನ ವಿಶಿಷ್ಟ ಜಾತ್ರೆ ಅಯ್ಯಪ್ಪಸ್ವಾಮಿ ಜಾತ್ರಾಮಹೋತ್ಸವ ಮಂಗಳವಾರ ಮುಕ್ತಾಯವಾಗಲಿದೆ. ಜ.15 ರಂದು ಎಂದಿನಂತೆ ಪೂಜೆ,ಪುನಸ್ಕಾರಗಳಿಗೆ ಅವಕಾಶವಿದೆಯಾದರೂ ಜ.14 ರ ಸಂಜೆಯ ಅಯ್ಯಪ್ಪ ಶೋಭಾಯಾತ್ರೆಯ ಆನೆಯ ಮೇಲೆ ಅಯ್ಯಪ್ಪ,ಅಂಬಾರಿ ಮೆರವಣಿಗೆಯೊಂದಿಗೆ ಜ.10 ರಿಂದ ಪ್ರಾರಂಭವಾದ ಈ ಜಾತ್ರೆ ತಾಂತ್ರಿಕವಾಗಿ ಜ.15 ರಂದು ಮುಕ್ತಾಯವಾದರೂ ವಿದ್ಯುಕ್ತವಾಗಿ ಜ.14 ರಂದೇ ಮುಗಿಯಲಿದೆ.
ಉತ್ತರ ಕನ್ನಡ ಸೇರಿದಂತೆ ರಾಜ್ಯದಲ್ಲೆಲ್ಲೂ ಕಾಣದ ಶಬರಿಮಲೆ ಮಾದರಿಯ ಅಯ್ಯಪ್ಪ ದೇಗುಲ ಇದಾಗಿದ್ದು ಇಲ್ಲಿ ಸ್ಥಳಿಯರು, ಅಯ್ಯಪ್ಪ ಭಕ್ತರಿಗೆ ಸಕಲ ಅನುಕೂಲಗಳನ್ನು ಒದಗಿಸಲಾಗಿದೆ. ಇಂಥ ವೈಶಿಷ್ಟ್ಯದ ಈ ಜಾತ್ರೆ ಸಮಯದಲ್ಲಿ ಅನೇಕ ಶೃದ್ಧಾಳುಗಳು,ಪ್ರಮುಖರು, ರಾಜಕೀಯ ನಾಯಕರು
ಭೇಟಿ ನೀಡಿದ್ದಾರೆ. ಧಾರ್ಮಿಕ ಆಚರಣೆಗಳು ಅಂಗಡಿ ಮುಂಗಟ್ಟುಗಳು, ಮನೋರಂಜನಾ ಸಾಧನಗಳು ರಂಜಿಸಿದ ಈ ಜಾತ್ರೆ 2020 ರ ವರ್ಷಕ್ಕೆ ಜ. 15 ಕ್ಕೆ ಮುಗಿಯಲಿದೆ.ಜಾತ್ರೆಯ ವೇಳೆ ಅನೇಕರು ಬಂದು ಇಲ್ಲಿಯ ವಿಶೇಶ,ಅಲಂಕಾರಗಳನ್ನು ನೋಡಿ ಸಂಬ್ರಮಿಸುವುದು ಕಳೆದ ಕೆಲವು ವರ್ಷಗಳಿಂದ ಸಂಪ್ರದಾಯವಾದಂತಾಗಿದೆ.
ನಾಡಿನ ಸಮಸ್ತರಿಗೆ ಮಕರ ಸಂಕ್ರಾಂತಿ ಶುಭಾಶಯಗಳು,
ಇಂದಿನ ಅಯ್ಯಪ್ಪ ಅಂಬಾರಿ ಮೆರವಣಿಗೆಗೆ ಸರ್ವರಿಗೂ ಸ್ವಾಗತ, ತಾಲೂಕಿನ ಗ್ರಾಮೀಣ ಜನರ ಸಂಬ್ರಮದ ಸಂಕ್ರಾಂತಿ ಮತ್ತು ಬರಗಾಲ ವಾರ್ಷಿಕ ಜಾತ್ರೆಯ ಶುಭಾಶಯಗಳೊಂದಿಗೆ
ಸುದರ್ಶನ ಪಿಳ್ಳೆ & ಕುಟುಂಬ
ಅನೂಪ್‍ಗ್ರೂಪ್ ಸಿದ್ಧಾಪುರ (ಉ.ಕ.)
ನಾಡಿನ ಸಮಸ್ತರಿಗೆ ಮಕರ ಸಂಕ್ರಾಂತಿ ಶುಭಾಶಯಗಳು,
ಇಂದಿನ ಅಯ್ಯಪ್ಪ ಅಂಬಾರಿ ಮೆರವಣಿಗೆಗೆ ಸರ್ವರಿಗೂ ಸ್ವಾಗತ, ತಾಲೂಕಿನ ಗ್ರಾಮೀಣ ಜನರ ಸಂಬ್ರಮದ ಸಂಕ್ರಾಂತಿ ಮತ್ತು ಬರಗಾಲ ವಾರ್ಷಿಕ ಜಾತ್ರೆಯ ಶುಭಾಶಯಗಳೊಂದಿಗೆ ಸುನಿಲ್‍ಕುಮಾರ
ನಾಯ್ಕ,
ಸಂಪಖಂಡ
& ಕುಟುಂಬವರ್ಗ
ಪ್ರಗತಿಪರ ಕೃಷಿಕರು,
ಸಿದ್ಧಾಪುರ (ಉ.ಕ.) 9448576017


