ಕಾಡುಪ್ರಾಣಿ ದ್ವಿಚಕ್ರವಾಹನಕ್ಕೆ ಸಿಕ್ಕು ಹಿಡಿತ ತಪ್ಪಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಹೇರೂರು ಬಳಿ ನಡೆದಿದೆ. ಮೃತ ಬಾಳೆಕೊಪ್ಪದ ವಿನಯ ದೇವರು ಹೆಗಡೆ ಎಂದು ಗುರುತಿಸಲಾಗಿದ್ದು ಇವರು ಅಂಚೆಕಛೇರಿಯ ನೌಕರರಾಗಿದ್ದರು ಎನ್ನಲಾಗಿದೆ.
ಸಾಗರಮಾಲಾ ಮೀನುಗಾರರ ಹಿತರಕ್ಷಣೆ ವಿಷಯದಲ್ಲಿ ಸೂಕ್ಷ್ಮಜ್ಞತೆಯಿಂದ ಕೆಲಸಮಾಡಲು ಆಸ್ನೋಟಿಕರ್ ಸೂಚನೆ
ಕಾರವಾರದ ಸಾಗರಮಾಲಾ ಯೋಜನೆ ಅನುಷ್ಠಾನ ಸಂಘರ್ಷಕ್ಕೆಡೆಮಾಡಿದ್ದು ಮೀನುಗಾರರ ಹಿತರಕ್ಷಿಸಿ,ವಿಶ್ವಾಸದಿಂದ ಕೆಲಸಮಾಡಲು ಮಾಜಿ ಸಚಿವ ಆನಂದ ಅಸ್ನೋಟಿಕರ್ ಸಲಹೆ ನೀಡಿದ್ದಾರೆ.
ಸಮಾಜಮುಖಿಯೊಂದಿಗೆ ಮಾತನಾಡಿದ ಅವರು ಕೇಂದ್ರಸರ್ಕಾರದ ಈ ಯೋಜನೆ ಅನುಷ್ಠಾನದಲ್ಲಿ ಮೀನುಗಾರರ ವಿಶ್ವಾಸ ಪಡೆಯುವ ಪ್ರಯತ್ನ ಮಾಡಿಲ್ಲ. ಬಿ.ಜೆ.ಪಿ. ಕೂಡಾ ಇಂಥ ವಿಷಯದಲ್ಲಿ ಸೂಕ್ಷ್ಮಜ್ಞತೆಯಿಂದ ವರ್ತಿಸಬೇಕಿದ್ದು. ಮೀನುಗಾರರ ವಿಷಯದಲ್ಲಿ ದುಡುಕುವುದು, ಅಸೂಕ್ಷ್ಮತೆಯಿಂದ ವರ್ತಿಸುವುದು ಅಕ್ಷಮ್ಯ.
ಮೀನುಗಾರರಿಗೆ ತೊಂದರೆ ಆಗದಂತೆ ಬಾವಟಿಕಟ್ಟಾ ನದಿ ಹೊರತು ಪಡಿಸಿ, ಮೂರು ಹಡಗು ನಿಲ್ದಾಣಗಳ ಬದಲು ಒಂದನ್ನೇ ನಿರ್ಮಿಸುವ ಮೂಲಕ ತಡೆಗೋಡೆ ಲಾಭ-ನಷ್ಟ, ನೋಡಿ, ಕಾರವಾರದ ಕಡಲತೀರ, ಮೀನುಗಾರರ ಜೀವನೋಪಾಯ ಯಾವುದಕ್ಕೂ ತೊಂದರೆಯಾಗದಂತೆ,ಸಂಘರ್ಷಕ್ಕೆಡೆಯಾಗದಂತೆ ಎಲ್ಲರ ವಿಶ್ವಾಸದಿಂದ ಕೆಲಸಮಾಡಬೇಕು. ಮೀನುಗಾರರನ್ನು ಬಂಧಿಸುವುದು, ಅವರ ಮೇಲೆ ದೌರ್ಜನ್ಯ ನಡೆಸುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.