

ಸ್ವಾತಂತ್ರ್ಯ ಹೋರಾಟದ ಕೆಚ್ಚು-ರೊಚ್ಚನ್ನು ಸಕಾರಾತ್ಮಕವಾಗಿ ಬಳಸಿಕೊಂಡ ಉತ್ತರ ಕನ್ನಡದ ಸ್ಫೂರ್ತಿ, ಅಭಿಮಾನ, ಪ್ರೀತಿಯನ್ನು ಇಲ್ಲಿಂದ ತೆಗೆದುಕೊಂಡು ಹೋಗುತ್ತೇನೆ.
-ಬಸವರಾಜ್ ಬೊಮ್ಮಾಯಿ
ಸಹಕಾರ ಮತ್ತು ಗೃಹ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆಯ ಅಗತ್ಯ ಪ್ರತಿಪಾದಿಸಿರುವ ರಾಜ್ಯ ಗೃಹ ಮತ್ತು ಸಹಕಾರ ಸಚಿವ ಬಸವರಾಜ್ ಬೊಮ್ಮಾಯಿ ಸಮಾನ ಹಂಚಿಕೆಯ ಕಮ್ಯುನಿಸಮ್ ಮತ್ತು ಉತ್ಫಾದಕರ ಹಿತ ಕಾಪಾಡುವ ಬಂಡವಾಳಶಾಹಿನೀತಿಗಳಿಗಿಂತ ಸಹಕಾರ (ಕೋಆಪರೇಟಿಸಮ್) ಹೆಚ್ಚು ಸ್ವೀಕಾರಾರ್ಹವಾಗಿದೆ ಎಂದು ಹೇಳಿದ್ದಾರೆ.
ಇಲ್ಲಿಯ ಟಿ.ಎಂ.ಎಸ್. ನಲ್ಲಿ ನಡೆದ ಅಮೃತ ಮಹೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸಹಕಾರ ಕ್ಷೇತ್ರದ ಮೇಲೆ ರಾಜಕೀಯ ಮತ್ತು ಸರ್ಕಾರದ ಹಸ್ತಕ್ಷೇಪ ನಡೆಯುತ್ತಿದೆ. ಇಂಥ ತೊಂದರೆಗಳನ್ನು ಮೆಟ್ಟಿನಿಂತ ಉತ್ತರ ಕನ್ನಡ ಜಿಲ್ಲೆಯ ಸಹಕಾರ ಕ್ಷೇತ್ರ ದೇಶಕ್ಕೆ ಮಾದರಿ ಎಂದರು.
ರಾಜ್ಯದ 21 ಲಕ್ಷ ರೈತರ ಸಾಲದಲ್ಲಿ 14 ಲಕ್ಷ ಜನರ ಸಾಲಮಾತ್ರ ಮನ್ನಾ ಮಾಡಲಾಗಿದೆ. ಪಹಣಿ ಪತ್ರಿಕೆ ಇರುವ ರೈತರೆಲ್ಲರಿಗೂ ಸಾಲಮನ್ನಾ ಅನುಕೂಲ ದೊರೆಯುವಂತೆ ಆಡಳಿತಾತ್ಮಕ ಮಂಜೂರಿ ನೀಡುವುದು ಸಹಕಾರಿ ಮತ್ತು ಗೃಹ ಇಲಾಖೆಯ ಅಮೂಲಾಗ್ರ ಬದಲಾವಣೆಗೆ ಪ್ರಯತ್ನಿಸುವುದು ನಮ್ಮ ಆದ್ಯತೆ ಎಂದರು.

