

ಕಾರವಾರದ ವಾಣಿಜ್ಯ ಬಂದರು ಅಭಿವೃದ್ಧಿ ಹಿನ್ನೆಲೆಯಲ್ಲಿ ಟ್ಯಾಗೂರ್ ಕಡಲತೀರ ಕಬಳಿಸುತ್ತಿರುವ ಸಾಗರ ಮಾಲಾ ಯೋಜನೆಗೆ ತೀವೃ ವಿರೋಧ ವ್ಯಕ್ತವಾಗಿದೆ.
ಸೋಮವಾರ ಸಾಗರದೋಪಾದಿಯಲ್ಲಿ ಬಂದು ಪ್ರತಿಭಟಿಸಿದ್ದ ಮೀನುಗಾರರು ಮಹಿಳೆಯರಿಂದ ಸಂಸದ ಅನಂತಕುಮಾರ ಹೆಗಡೆ ಮತ್ತು ಶಾಸಕಿ ರೂಪಾಲಿ ನಾಯ್ಕ ಪ್ರತಿಕ್ರತಿಗಳಿಗೆ ಪಾದರಕ್ಷೆಗಳಿಂದ ಹೊಡೆಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.
ಕಾರವಾರದಲ್ಲಿ ಈಗಾಗಲೇ 38 ಕಿ.ಮೀ. ಕಡಲು ಆಕ್ರಮಿಸಿರುವ ಸೀಬರ್ಡ್, ನೌಕಾನೆಲೆ ಯೋಜನೆ ಮೀನುಗಾರರ ದುಡಿಮೆ ಅನ್ನ ಕಸಿದಿತ್ತು. ಹೀಗೆ ಜೀವನಾಧಾರ ಕಡಲನ್ನು ಕಳೆದುಕೊಂಡು ನಿರುದ್ಯೋಗಿಗಳಾದ ಮೀನುಗಾರರ ಸ್ವಾಭಿಮಾನ ಕೆಣಕುವಂತೆ ಎರಡುವಾರಗಳ ಹಿಂದೆ ಸಂಸದ ಅನಂತಕುಮಾರ ಹೆಗಡೆ ಮೀನುಗಾರರಿರಲಿ ಯಾರೇ ಇರಲಿ ಏನೇ ವಿರೋಧ ಮಾಡಿದರೂ ಸಾಗರಮಾಲಾ ಯೋಜನೆ ನಿಲ್ಲಿಸುವುದಿಲ್ಲ ಎಂದು ಉಡಾಫೆಯ ಮಾತನಾಡಿದ್ದರು.
ನಾಗರಿಕ ಪೌರತ್ವ ಮಸೂದೆ, ಜನಸಂಖ್ಯಾ ನೋಂದಣಿ ಮಸೂದೆ ಸೇರಿದಂತೆ ಜನವಿರೋಧಿ ಕಾರ್ಯಕ್ರಮಗಳಿಂದ ಜನರನ್ನು ಕೆಣಕಿದ್ದ ಕೇಂದ್ರ ಸರ್ಕಾರ ಮತ್ತು ಬಿ.ಜೆ.ಪಿ. ಈಗ ಸಾಗರಮಾಲಾ ಯೋಜನೆಯಿಂದಾಗಿ ಜನರನ್ನು ಕೆರಳಿಸಿದ ಈ ಸ್ಥಿತಿಯಲ್ಲಿ ಜಾರುನಾಲಿಗೆಯ ತನ್ನ ಲಾಗಾಯ್ತಿನ ಬಡಬಡಿಕೆಯಿಂದ ಅನಂತಕುಮಾರ ಹೆಗಡೆ ಕಾರವಾರ ಜನರ ಆಕ್ರೋಶಕ್ಕೆ ಬಲಿಯಾದಂತಾಗಿದೆ.
ಬೈಕ್‍ಗೆ ಬಡಿದ ಕಾಡುಪ್ರಾಣಿ, ಸವಾರ ಸ್ಥಳದಲ್ಲೇ ಮೃತ್ಯು
ಕಾಡುಪ್ರಾಣಿ ದ್ವಿಚಕ್ರವಾಹನಕ್ಕೆ ಸಿಕ್ಕು ಹಿಡಿತ ತಪ್ಪಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಹೇರೂರು ಬಳಿ ನಡೆದಿದೆ. ಮೃತ ಬಾಳೆಕೊಪ್ಪದ ವಿನಯ ದೇವರು ಹೆಗಡೆ ಎಂದು ಗುರುತಿಸಲಾಗಿದ್ದು ಇವರು ಅಂಚೆಕಛೇರಿಯ ನೌಕರರಾಗಿದ್ದರು ಎನ್ನಲಾಗಿದೆ.
ಸಾಗರಮಾಲಾ ಮೀನುಗಾರರ ಹಿತರಕ್ಷಣೆ ವಿಷಯದಲ್ಲಿ ಸೂಕ್ಷ್ಮಜ್ಞತೆಯಿಂದ ಕೆಲಸಮಾಡಲು ಆಸ್ನೋಟಿಕರ್ ಸೂಚನೆ
ಕಾರವಾರದ ಸಾಗರಮಾಲಾ ಯೋಜನೆ ಅನುಷ್ಠಾನ ಸಂಘರ್ಷಕ್ಕೆಡೆಮಾಡಿದ್ದು ಮೀನುಗಾರರ ಹಿತರಕ್ಷಿಸಿ,ವಿಶ್ವಾಸದಿಂದ ಕೆಲಸಮಾಡಲು ಮಾಜಿ ಸಚಿವ ಆನಂದ ಅಸ್ನೋಟಿಕರ್ ಸಲಹೆ ನೀಡಿದ್ದಾರೆ.
ಸಮಾಜಮುಖಿಯೊಂದಿಗೆ ಮಾತನಾಡಿದ ಅವರು ಕೇಂದ್ರಸರ್ಕಾರದ ಈ ಯೋಜನೆ ಅನುಷ್ಠಾನದಲ್ಲಿ ಮೀನುಗಾರರ ವಿಶ್ವಾಸ ಪಡೆಯುವ ಪ್ರಯತ್ನ ಮಾಡಿಲ್ಲ. ಬಿ.ಜೆ.ಪಿ. ಕೂಡಾ ಇಂಥ ವಿಷಯದಲ್ಲಿ ಸೂಕ್ಷ್ಮಜ್ಞತೆಯಿಂದ ವರ್ತಿಸಬೇಕಿದ್ದು. ಮೀನುಗಾರರ ವಿಷಯದಲ್ಲಿ ದುಡುಕುವುದು, ಅಸೂಕ್ಷ್ಮತೆಯಿಂದ ವರ್ತಿಸುವುದು ಅಕ್ಷಮ್ಯ.


