ಸಿದ್ಧಾಪುರ ತಾಲೂಕಿನ ಬಾಲಿಕೊಪ್ಪದ ಅಯ್ಯಪ್ಪಸ್ವಾಮಿ ಜಾತ್ರೆ ಮತ್ತು ಲಂಬಾಪುರ ಬರಗಾಲ ಜಾತ್ರೆಗಳು ಸಂಭ್ರಮದಿಂದ ನಡೆದವು. ನಗರದ ಬಾಲಿಕೊಪ್ಪದ ಅಯ್ಯಪ್ಪಸ್ವಾಮಿ ಜಾತ್ರೆ ಜ.10ರಿಂದ ಪ್ರಾರಂಭವಾಗಿ 14 ರ ಅಂಬಾರಿ ಮೆರವಣಿಗೆಯೊಂದಿಗೆ ಸಂಪನ್ನಗೊಂಡಿತು.
ತುಸುವಿಳಂಬವಾಗಿ ಪ್ರಾರಂಭವಾದ ಮೆರವಣಿಗೆಯನ್ನು ನೋಡಿ ಆನಂದಿಸಲು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು.
ಲಂಬಾಪುರದ ಬರಗಾಲ ಜಾತ್ರೆ ಜ.15 ರಿಂದ ಪ್ರಾರಂಭವಾಗಿ20ರ ವರೆಗೆ ನಡೆಯಲಿದೆ. ಬುಧವಾರ ಸೇರಿದ ಸಾವಿರಾರು ಭಕ್ತರು ಕಾಳಬೈರವನಿಗೆ ಹರಕೆಒಪ್ಪಿಸಿ ಹಣ್ಣುಕಾಯಿ ಅರ್ಪಿಸಿದರು.
ಇಂದಿನಿಂದ ವಾರ ಪರ್ಯಂತ ಈ ಭಾಗದಲ್ಲಿ ಮಾಂಸದ ಅಡಿಗೆಯ ಆತಿಥ್ಯ ನೀಡುವುದು ವಿಶೇಶ.