

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯ,ರಾಷ್ಟ್ರಮಟ್ಟದಲ್ಲಿ ಪತ್ರಿಕೋದ್ಯಮ ಉಳ್ಳವರು, ಮೇಲ್ವರ್ಗದ ಸ್ವತ್ತಾಗಿದೆ. ವಿದ್ಯೆ, ಸಂಪರ್ಕ, ಅನುಕೂಲ, ವಸೂಲಿಬಾಜಿ ಮೂಲಕ ಮಾಧ್ಯಮಕ್ಷೇತ್ರ ಆಳುತ್ತಿರುವ ಮೇಲ್ವರ್ಗ ಬಾಹುಳ್ಯದ ಬಲಪಂಥೀಯ ಬೌದ್ಧಿಕತೆ ತನ್ನ ಲಾಗಾಯ್ತಿನ ಜಮೀನ್ಧಾರಿ ಸ್ವಭಾವ, ಮೇಲ್ವರ್ಗ,ಮೇಲ್ಜಾತಿ ಅಹಂ ಆಧಾರಿತ ಮೇಲರಿಮೆಯಿಂದ ಬಳಲುತ್ತಿದೆ.
ಇಂಥ ಶೋಷಕ,ಅಮಾನವೀಯ ವೈದಿಕತೆಯ ಚಹರೆಯ ಪತ್ರಿಕೋದ್ಯಮವನ್ನು ಅಂತರಾಷ್ಟ್ರೀಯ,ರಾಷ್ಟ್ರೀಯ ಮಟ್ಟದಲ್ಲಿ ಅಲುಗಾಡಿಸಿದ ಅನೇಕ ಪ್ರತಿಭಾವಂತರಿದ್ದಾರೆ. ಆದರೆ ಕನ್ನಡದ ಸಂದರ್ಭದಲ್ಲಿ ಮುಂಗಾರಿನ ರಘುರಾಮ ಶೆಟ್ಟರು, ಜನವಾಹಿನಿ ಸಂಪಾದಕೀಯ ಮಂಡಳಿ, ಲಂಕೇಶ್ ಸೇರಿದಂತೆ ಅನೇಕರು ತಮ್ಮ ಕನಸು, ಗಟ್ಟತನ,ಸೈದ್ಧಾಂತಿಕ ಬದ್ಧತೆ,ಸಾಹಸ ಹುಂಬತನಗಳಿಂದ ಈ ಸಾಂಪ್ರದಾಯಿಕ ಭಟ್ಟಂಗಿ ಪತ್ರಕರ್ತರು ಅವರ ತಿಥಿ-ಕರ್ಮ,ಬೊಜ್ಜ ಆಧಾರಿತ ಪತ್ರಿಕೋದ್ಯಮಕ್ಕೆ ಸೆಡ್ಡುಹೊಡೆದು ವಿಜೃಂಬಿಸಿದ್ದಾರೆ.
ಅಂಥ ವಿರಳ ಸಾಧಕರ ಸಾಲಿನಲ್ಲಿ ನಿಲ್ಲುವ ಹೆಸರು ಅಂಕೋಲಾ ಮೂಲದ ಕಾರವಾರದ ಗಂಗಾಧರ ಹಿರೇಗುತ್ತಿ.
ಗಂಗಾಧರ ಹಿರೇಗುತ್ತಿ 80 ರ ದಶಕದಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟಾಗ ಬಲಪಂಥೀಯ ಬೌದ್ಧಿಕತೆ ಇಷ್ಟು ಅಸಹ್ಯದ ಮಟ್ಟ ಮುಟ್ಟಿರಲಿಕ್ಕಿಲ್ಲ. ಆದರೆ ಕುಮಟಾ ಹಿರೇಗುತ್ತಿಯಿಂದ ಬಂದಿದ್ದ ಅಂದಿನ ಶೂದ್ರ ಗಂಗಾಧರರನ್ನು ಜನಿವಾರದ ಪತ್ರಿಕೋದ್ಯಮ ಉಪೇಕ್ಷಿಸಿತ್ತು. ಹಿರೇಗುತ್ತಿ ಪತ್ರಿಕೆ ಹಂಚುತ್ತಾ, ಲೋಕಧ್ವನಿ, ಮುಂಗಾರುಗಳಿಗೆ ಬರೆಯುತ್ತಾ ಪ್ರಸಿದ್ಧರಾಗುತಿದ್ದಾಗ ಅವಮಾನಿಸಿದವರು, ಹಳಿದವರು,ತೊಂದರೆ ಮಾಡಿದವರು ಬಹುತೇಕ ಎಲ್ಲರೂ ಮೇಲ್ವರ್ಗ, ಮೇಲ್ಜಾತಿ ಬ್ರಾಹ್ಮಣರಾಗಿದ್ದುದು ಕಾಕತಾಳೀಯವೇನಲ್ಲ.
2000 ದಶಕದ ನಂತರ ಗಂಗಾಧರ ಹಿರೇಗುತ್ತಿಯವರ ಕರಾವಳಿ ಮುಂಜಾವು ಜಿಲ್ಲೆಯ ಏಕಮೇವಾದ್ವಿತಿಯ ಪತ್ರಿಕೆಯಾಗಿ ಹೆಸರು ಮಾಡುತಿದ್ದಾಗ. ಗಂಗಾಧರರೊಂದಿಗೆ ಶೂದ್ರ ಪತ್ರಕರ್ತರನ್ನು ಹಳಿದ, ಹಂಗಿಸಿದ ಪತ್ರಿಕೋದ್ಯಮದ ಅಸಹ್ಯ ಜಾತಿಹುಳುಗಳು ನೇಪಥ್ಯಕ್ಕೆ ಸರಿಯುತ್ತಾ ಈಗ ಅಪ್ರಸ್ತುತರಾಗಿದ್ದಾರೆ.
ಈ ಚರಿತ್ರೆ ಯಾಕೆ ದಾಖಲಾರ್ಹ ಎಂದರೆ…..
ಗಂಗಾಧರ ಹಿರೇಗುತ್ತಿ ಮತ್ತು ಅವರ ಕರಾವಳಿ ಮುಂಜಾವು ಈ ನಂಜಿನ ಶೋಷಕರೆದುರು ತಲೆ ಎತ್ತಿ ನಿಂತಿದ್ದಾರೆ.ಕನ್ನಡ ಮುದ್ರಣ ಮಾಧ್ಯಮಕ್ಷೇತ್ರ ಬಾಗಿಲುಹಾಕಿಕೊಳ್ಳುವ ಸವಾಲಿನ ಸಂದರ್ಭದಲ್ಲೂ ಜಿಲ್ಲೆಯ ಪತ್ರಿಕೆಗಳ ರಾಜ ಎನಿಸಿಕೊಂಡಿದ್ದಾರೆ. ಈ ಕರಾವಳಿ ಮುಂಜಾವು ಮತ್ತು ಗಂಗಾಧರ ಹಿರೇಗುತ್ತಿಯವರಿಗೆ ಅನೇಕ ಗೌರವ-ಪುರಸ್ಕಾರಗಳು ಹುಡುಕಿ ಬಂದಿವೆ. ಈಗ ಸಿದ್ಧಾಪುರದ ಸಂಸ್ಕøತಿ ಸಂಪದ ತನ್ನ ಗಣೇಶ್ ಹೆಗಡೆ ಸ್ಮøತಿಪುರಸ್ಕಾರವನ್ನು ಗಂಗಾಧರ ಹಿರೇಗುತ್ತಿಯವರಿಗೆ ನೀಡುವ ಮೂಲಕ ಸಂಸ್ಕøತಿ ಸಂಪದ ಮತ್ತು ಅದರ ಪ್ರಮುಖರು ತಮ್ಮ ಘನತೆ ಹೆಚ್ಚಿಸಿಕೊಂಡಿದ್ದಾರೆ.
ಪತ್ರಿಕೋದ್ಯಮ ಶಿಕ್ಷಣ,ತರಬೇತಿಗಳಿಲ್ಲದ ಗಂಗಾಧರ ಹಿರೇಗುತ್ತಿ ಉತ್ತಮ ಪತ್ರಿಕೆ ಕಟ್ಟುವ ಮೂಲಕ ಜಿಲ್ಲೆಯ ಪ್ರಮುಖ,ಸಾಧಕ ಪತ್ರಿಕೋದ್ಯಮಿಯಾಗಿ ಹೆಸರು ಮಾಡಿದ್ದಾರೆ.ಅವರನ್ನು ಅಭಿನಂದಿಸುತ್ತಾ ಪತ್ರಿಕೋದ್ಯಮವೆಂದರೆ ವೈದಿಕತೆ,ಮನುವಾದಪೋಷಣೆ, ತಿಥಿ-ಕರ್ಮ,ಭಟ್ಟಂಗಿತನ ಮೂಢತನ,ಮೂರ್ಖತನಗಳಷ್ಟೇ ಅಲ್ಲ ಎಂದು ಸಾರಿದ ಅವರ ತಂಡಕ್ಕೂ ಧನ್ಯವಾದ ಹೇಳಲು ಇದು ಸುಸಮಯ.
ಅಂದಹಾಗೆ, ತಮ್ಮ ಪ್ರಮಾದ ದೋಷಗಳನ್ನು ಉಪಾಯದಿಂದ ಮುಚ್ಚಿಕೊಳ್ಳುತ್ತಾ ಇತರರ ತಪ್ಪು, ದೋಷಗಳನ್ನು ಎತ್ತಿ ಎಣಿಸುತ್ತಾ ಪತ್ರಿಕೋದ್ಯಮವನ್ನು ಜಾತಿ-ಧರ್ಮಗಳ ಕೊಂಪೆಗಳನ್ನಾಗಿಸಿದ ಪತ್ರಕರ್ತರು ಒಂದು ಕಾಲದಲ್ಲಿ ಮುಂಜಾವು,ಗಂಗಾಧರರೆಂದರೆ ಅಸ್ಫಶ್ಯರಂತೆ ಕಾಣುತಿದ್ದವರು ಇಂದು ಅವರೊಳಗಿನ ಕೆಲವು ಒಳ್ಳೆ ಮನಸ್ಸುಗಳು ಗುಣಗ್ರಾಹಿಯಾಗಿ ಗಂಗಾಧರರನ್ನು ಆಯ್ಕೆ ಮಾಡಿರುವುದಕ್ಕೂ ಹೊಟ್ಟೆಉರಿಸಿಕೊಂಡರೆ ಅದಕ್ಕೆ ಉತ್ತರ ಕೊಡಬೇಕೆಂದೇನಿಲ್ಲ.
ಬರಗಾಲ ಜಾತ್ರೆ ಪ್ರಾರಂಭ, ಮುಗಿದ ಅಯ್ಯಪ್ಪ ಸ್ವಾಮಿ ಜಾತ್ರಾ ಮಹೋತ್ಸವ
ಸಿದ್ಧಾಪುರ ತಾಲೂಕಿನ ಬಾಲಿಕೊಪ್ಪದ ಅಯ್ಯಪ್ಪಸ್ವಾಮಿ ಜಾತ್ರೆ ಮತ್ತು ಲಂಬಾಪುರ ಬರಗಾಲ ಜಾತ್ರೆಗಳು ಸಂಭ್ರಮದಿಂದ ನಡೆದವು. ನಗರದ ಬಾಲಿಕೊಪ್ಪದ ಅಯ್ಯಪ್ಪಸ್ವಾಮಿ ಜಾತ್ರೆ ಜ.10ರಿಂದ ಪ್ರಾರಂಭವಾಗಿ 14 ರ ಅಂಬಾರಿ ಮೆರವಣಿಗೆಯೊಂದಿಗೆ ಸಂಪನ್ನಗೊಂಡಿತು.
ತುಸುವಿಳಂಬವಾಗಿ ಪ್ರಾರಂಭವಾದ ಮೆರವಣಿಗೆಯನ್ನು ನೋಡಿ ಆನಂದಿಸಲು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು.
