

ವಚನಗಳಿಂದ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಪ್ರತಿಪಾದಿಸಿರುವ ಪತ್ರಕರ್ತ ಕನ್ನೆಶ್ ಕೋಲಶಿರ್ಸಿ ವಚನಗಳ ಓದು, ವಚನಕಾರ ಶರಣರ ಸಾಮಾಜಿಕ ಕಾಳಜಿ,ಬದ್ಧತೆ ರೂಢಿಸಿಕೊಳ್ಳುವುದರಿಂದ ಸಮಸಮಾಜದ ನಿರ್ಮಾಣ ಸಾಧ್ಯ ಎಂದಿದ್ದಾರೆ.
ಇಲ್ಲಿನ ತಾ.ಪಂ. ಸಭಾಭವನದಲ್ಲಿ ಸಿದ್ಧಾಪುರ ತಾಲೂಕಾ ಆಡಳಿತ, ತಾ.ಪಂ. ಪಟ್ಟಣ ಪಂಚಾಯತ್ ಗಳು ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ, ಮಹಾಯೋಗಿ ವೇಮನ, ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಕಾರ್ಯಕ್ರಮದ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಅಂಬಿಗರ ಚೌಡಯ್ಯ ಕನ್ನಡ ನಾಡಿನಲ್ಲಿ, ವೇಮನ ತೆಲುಗುನಾಡಿನಲ್ಲಿ, ಸಿದ್ಧರಾಮೇಶ್ವರ ಮರಾಠಿ ನಾಡಿನಲ್ಲಿ ಅನುಭವಮಮಂಟಪದ ಆಶಯಗಳನ್ನು ಬಿತ್ತರಿಸುವ ಮೂಲಕ ಸಾಮಾಜಿಕ ಕ್ರಾಂತಿ ಮಾಡುತ್ತಲೇ ಭಾಷೆ, ಸಿದ್ಧಾಂತಗಳ ಬೆಳವಣಿಗೆಗೆ ಕಾರಣರಾದರು ಎಂದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‍ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಬಸವರಾಜ್ ಬಿಸನಾಳ ನಿರೂಪಿಸಿದರು.ಅಧ್ಯಕ್ಷತೆ ವಹಿಸಿದ್ದ ತಹಸಿಲ್ದಾರ ಮಂಜುಳಾ ಭಜಂತ್ರಿ ವಚನಗಳ ರಚನೆ ಮತ್ತು ಸಂರಕ್ಷಣೆ ಹಿನ್ನೆಲೆಯಲ್ಲಿ ಶರಣರ ಕೆಲಸ ಲೋಕಮಾನ್ಯವಾದುದು ಎಂದರು.
ಕೃ.ಸ.ನಿರ್ಧೇಶಕ ದೇವರಾಜ್ ಎಂ. ಪಶುವೈದ್ಯಾಧಿಕಾರಿ ಡಾ.ನಂದಕುಮಾರ ಪೈ ಸೇರಿದಂತೆ ಕೆಲವರು ವೇದಿಕೆಯಲ್ಲಿದ್ದರು.
ಕಾರವಾರ ಶಾಸಕಿಯ ಆಪ್ತರ ವಿರುದ್ಧ ಸೂಕ್ತ ಕ್ರಮಕ್ಕೆ ಕ.ರಾ.ಸ. ಯ ಮನವಿ
ಕಾರವಾರ ಶಾಸಕಿಯ ಆಪ್ತರಾದ ವಿಜಯ ನಾಯಕ್ ಎನ್ನುವವರು ಬೆಂಗಳೂರಿನ ಗುತ್ತಿಗೆದಾರರೊಬ್ಬರಿಂದ ಮುಖ್ಯಮಂತ್ರಿಗಳ ಕಚೇರಿಯ ಕಡತ ವಿಲೇವಾರಿಗೆ ಲಕ್ಷಾಂತರ ಹಣ ಪಡೆದಿದ್ದು ಅದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಜರುಗಿಸಲು
ಕರ್ನಾಟಕ ರಾಷ್ಟ್ರ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದೆ.

