

ಕಾರವಾರ ಶಾಸಕಿಯ ಆಪ್ತರಾದ ವಿಜಯ ನಾಯಕ್ ಎನ್ನುವವರು ಬೆಂಗಳೂರಿನ ಗುತ್ತಿಗೆದಾರರೊಬ್ಬರಿಂದ ಮುಖ್ಯಮಂತ್ರಿಗಳ ಕಚೇರಿಯ ಕಡತ ವಿಲೇವಾರಿಗೆ ಲಕ್ಷಾಂತರ ಹಣ ಪಡೆದಿದ್ದು ಅದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಜರುಗಿಸಲು
ಕರ್ನಾಟಕ ರಾಷ್ಟ್ರ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದೆ. ಈ ಬಗ್ಗೆ ಕರ್ನಾಟಕ ರಾಷ್ಟ್ರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ್ ನಾಯ್ಕ ಮನವಿ ನೀಡಿದ್ದು ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು ಕಾರವಾರದ ಬಿ.ಜೆ.ಪಿ. ಕಾರ್ಯಕರ್ತರೂ,ಶಾಸಕಿಯವರ ಆಪ್ತರೂ ಎನ್ನಲಾದ ವಿಜಯ ನಾಯ್ಕ ಬಿ.ಬಿ.ಎಂ.ಪಿ.ಗುತ್ತಿಗೆದಾರ ಸಿದ್ಧೇಶ್ವರರ 80 ಕೋಟಿ ಬಿಲ್ ಕಡತದ ವಿಲೇವಾರಿಗೆ ಲಕ್ಷಾಂತರ ಹಣ ಪಡೆದಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಕ್ರಮಕೈಗೊಳ್ಳಲು ಆಗ್ರಹಿಸಿದ್ದಾರೆ.ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ.ಯ ಹೊಸ ಸರ್ಕಾರದಲ್ಲಿ ಪ್ರತಿ ಕಡತಕ್ಕೂ ಲಂಚನೀಡಬೇಕಾದ ದುಸ್ಥಿತಿಯನ್ನು ಈ ಪ್ರಕರಣ ಬಹಿರಂಗಪಡಿಸಿದೆ ಎಂದು ಆರೋಪಿಸಿದ್ದಾರೆ.

ಮಂಗನಖಾಯಿಲೆ ನಿಯಂತ್ರಣಕ್ಕೆ ಸಕಲವೂ ಸಿದ್ಧ ಸರ್ವ ಸನ್ನದ್ಧ
- ವಿಶೇಶಚೇತನರಿಗೆ ತಾಲೂಕಾ ಆಸ್ಫತ್ರೆಯಲ್ಲಿಯೇ ಪ್ರಮಾಣಪತ್ರ ನೀಡಿಕೆ.
ಪ್ರತಿಮಂಗಳವಾರ ವಿಶೇಶಚೇತನರ ಪ್ರಮಾಣಪತ್ರ,ಚಿಕಿತ್ಸೆಗೆ ದಿನ ನಿಗದಿ - 2019 ರ ಆಗಸ್ಟ್ ನಿಂದಲೇ ಮಂಗನಕಾಯಿಲೆ ನಿರೋಧಕ ಲಸಿಕೆ ನೀಡಿಕೆ ಪ್ರಾರಂಭ,84 ಸಾವಿರ ಡೋಜ್ ಗುರಿ,58706 ಜನರಿಗೆ ಲಸಿಕೆ ನೀಡಲು ಯೋಜನೆ, ಈಗಾಗಲೇ 11 ಸಾವಿರ ಜನರಿಗೆ ನೀಡಿಕೆ.
- ಜನ,ಜಾನುವಾರುಗಳ ರಕ್ಷಣೆಗೆ ಹೈಪರ್ಮೆಟ್ರಿನ್ ಔಷಧಿ ಬಳಕೆ.
*ಫೆಬ್ರವರಿ ಅಂತ್ಯದ ಒಳಗೆ ಲಸಿಕೆ ನೀಡಿಕೆ ಸಮಯಮಿತಿ. - ಮಂಗನಕಾಯಿಲೆಯ ಸಂಪೂರ್ಣ ಚಿಕಿತ್ಸೆಗೆ ವ್ಯವಸ್ಥೆ, ಮೂರು ತುರ್ತು ವಾಹನ ವ್ಯವಸ್ಥೆ.
*ಅರಣ್ಯ ಪ್ರವೇಶಕ್ಕೆ ಆರೋಗ್ಯಇಲಾಖೆಯ ಗುರುತಿನ ಚೀಟಿ ಕಡ್ಡಾಯ. - ರಕ್ತ ಪರೀಕ್ಷಾ ವರದಿ 48 ಗಂಟೆಗಳೊಳಗೆ ಲಭ್ಯ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
