

ಮಂಗಳೂರಿನ ಘಟನೆಯಲ್ಲಿ ಪೊಲೀಸ್ ವೈಫಲ್ಯ ಆಗಿಲ್ಲ ಹೀಗೆ ಪೊಲೀಸರ ಮೇಲೆ ಗೂಬೆ ಕೂಡ್ರಿಸುವವರಿಂದ ಪೊಲೀಸರ ನೈತಿಕ ಸ್ಥೈರ್ಯ ಕುಸಿಯುವ ಅಪಾಯವಿದೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.
ಕೊರ್ಲಕೈ ಗ್ರಾಮ ಪಂಚಾಯತ್ ಕಟ್ಟಡ ಉದ್ಘಾಟನೆ ವೇಳೆ ಮಾತನಾಡಿದ ಅವರು ಗೊಂದಲ ಹುಟ್ಟಿಸುವ ಉದ್ದೇಶದ ಕೆಲವರು ಇಂಥ ಕೃತ್ಯಗಳಲ್ಲಿ ತೊಡಗಿದ್ದಾರೆ ಅವರ ಹುಟ್ಟಡಗಿಸಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಜವಾಬ್ಧಾರಿ ನಮ್ಮ ಮೇಲಿದೆ ಎಂದರು.
ಪ್ರಭಾಕರ ಭಟ್ ಮಾತಿಗೆ ಹೆಚ್ಚಿನಮಹತ್ವವಿಲ್ಲ- ಸದ್ಯದಲ್ಲೇ ಯಡಿಯೂರಪ್ಪ ನಿವೃತ್ತಿ ಘೋಶಿಸುತ್ತಾರೆ ಎಂದಿರುವ ಆರ್.ಎಸ್.ಎಸ್. ಮುಖಂಡ ಪ್ರಭಾಕರ ಭಟ್ ಮಾತಿಗೆ ಹೆಚ್ಚಿನ ಮಹತ್ವವಿಲ್ಲ. ಅವರ ಹೇಳಿಕೆಗೆ ಯಾರೂ ಮಹತ್ವ ನೀಡುವುದಿಲ್ಲ ಎಂದರು.
ಶರಣರ ವಚನ ಸಾಹಿತ್ಯ ಈಗ ಹೆಚ್ಚು ಪ್ರಸ್ತುತ
ಸಾಮಾಜಿಕ, ಆರ್ಥಿಕ ಸಂಕಷ್ಟದ ಕಾಲದಲ್ಲಿ ಸರಳ ಭಾಷೆಯಲ್ಲಿ ಸಾಹಿತ್ಯ ರಚಿಸಿ ಸಮಾಜ ಸುಧಾರಣೆಗೆ ಶ್ರಮಿಸಿದ ಶರಣರ ವಚನಗಳು, ವಚನಗಳ ಆಶಯ ಈಗಲೂ ಪ್ರಸ್ತುತ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‍ರಾವ್ ಹೇಳಿದ್ದಾರೆ.
