

ಸಿದ್ಧಾಪುರ ಅಡಿಕೆ ವರ್ತಕರ ಸಂಘ ಇಲ್ಲಿಯ ಪೊಲೀಸ್‍ಠಾಣೆಗೆ ಗಣಕಯಂತ್ರ ಒಂದನ್ನು ದೇಣಿಗೆ ನೀಡಿದೆ.
ಕಂಪ್ಯೂಟರ್ ಅಗತ್ಯದ ಬಗ್ಗೆ ಮನವರಿಕೆಯಾಗಿ ಪೊಲೀಸ್‍ಠಾಣೆಗೆ ಈ ದೇಣಿಗೆ ನೀಡಲು ಅ.ವ.ಸಂಘ ಈ ಹಿಂದೆ ನಿರ್ಣಯಿಸಿತ್ತು. ಇಂದು ಪೊಲೀಸ್ ಅಧಿಕಾರಿಗಳಿಗೆ ಗಣಕಯಂತ್ರ ಹಸ್ತಾಂತರಿಸುವ ವೇಳೆ ಸಂಘದ ಅಧ್ಯಕ್ಷ ಪ್ರಕಾಶ ಹೆಗಡೆ ಗುಂಜಗೋಡು, ಇತರ ಸದಸ್ಯರು ಉಪಸ್ಥಿತರಿದ್ದರು.
ಚುರುಕಾದ ಪೊಲೀಸರು: ಮಿಂಚಿನ ಕಾರ್ಯಾಚರಣೆಗೆ ಸಿಕ್ಕು ಕಂಗಾಲಾದ ದಂದೆಕೋರರು
ಸಿದ್ಧಾಪುರ ತಾಲೂಕು,ಶಿರಸಿಕ್ಷೇತ್ರ ಉತ್ತರಕನ್ನಡ ಜಿಲ್ಲೆಯಾದ್ಯಂತ ಚುರುಕಾದ ಪೊಲೀಸರು ಅಕ್ರಮ ವ್ಯವಹಾರಿಗಳಿಗೆ ಸಿಂಹಸ್ವಪ್ನರಾದರೆ, ಶಿರಸಿ ಉಪವಿಭಾಗದಲ್ಲಿ ಪೊಲೀಸರ ಕಾರ್ಯಾಚರಣೆಯಿಂದ ಅಕ್ರಮ ವ್ಯವಹಾರಿಗಳು ನಡುಗುವಂತಾಗಿದೆ.
ಜಿಲ್ಲೆಯಲ್ಲಿ ಗಾಂಜಾ-ಅಫೀಮು ಮಾರಾಟಗಾರರ ಜಾಲದ ಬಗ್ಗೆ ಮೇಲಿಂದ ಮೇಲೆ ಸುದ್ದಿಯಾಗುತ್ತಿರುವಂತೆ ಶಿರಸಿಯಲ್ಲಿ ಉಪಪೊಲೀಸ್ ವರಿಷ್ಠ ಗೋಪಾಲಕೃಷ್ಣ ನಾಯಕ ಅಕ್ರಮವ್ಯವಹಾರಿಗಳನ್ನು ಮಟ್ಟಹಾಕುವಕಾರ್ಯಾಚರಣೆ ಕೈಗೊಂಡಿದ್ದಾರೆ.
