

ಸಿದ್ಧಾಪುರ ತಾಲೂಕು,ಶಿರಸಿಕ್ಷೇತ್ರ ಉತ್ತರಕನ್ನಡ ಜಿಲ್ಲೆಯಾದ್ಯಂತ ಚುರುಕಾದ ಪೊಲೀಸರು ಅಕ್ರಮ ವ್ಯವಹಾರಿಗಳಿಗೆ ಸಿಂಹಸ್ವಪ್ನರಾದರೆ, ಶಿರಸಿ ಉಪವಿಭಾಗದಲ್ಲಿ ಪೊಲೀಸರ ಕಾರ್ಯಾಚರಣೆಯಿಂದ ಅಕ್ರಮ ವ್ಯವಹಾರಿಗಳು ನಡುಗುವಂತಾಗಿದೆ.
ಜಿಲ್ಲೆಯಲ್ಲಿ ಗಾಂಜಾ-ಅಫೀಮು ಮಾರಾಟಗಾರರ ಜಾಲದ ಬಗ್ಗೆ ಮೇಲಿಂದ ಮೇಲೆ ಸುದ್ದಿಯಾಗುತ್ತಿರುವಂತೆ ಶಿರಸಿಯಲ್ಲಿ ಉಪಪೊಲೀಸ್ ವರಿಷ್ಠ ಗೋಪಾಲಕೃಷ್ಣ ನಾಯಕ ಅಕ್ರಮವ್ಯವಹಾರಿಗಳನ್ನು ಮಟ್ಟಹಾಕುವಕಾರ್ಯಾಚರಣೆ ಕೈಗೊಂಡಿದ್ದಾರೆ.
ಶಿರಸಿಯಲ್ಲಿರುವ ಗಾಂಜಾ-ಅಫೀಮು ಮಾರಾಟಗಾರರು,ಶಂಕಿತರ ಪರೇಡ್ ನಡೆಸಿರುವ ಅವರು ಶಿರಸಿ ಉಪವಿಭಾಗದಲ್ಲಿ ಈ ವ್ಯವಹಾರ ಮತ್ತೆ ತಲೆ ಎತ್ತದಂತೆ ಕಡಕ್ ಎಚ್ಚರಿಕೆ ನೀಡಿದ್ದಾರೆ.
ಶಿರಸಿ ಸಿದ್ಧಾಪುರದಲ್ಲಿ ಸಕಲ ವ್ಯವಹಾರ,ಉದ್ದಿಮೆಗಳ ಮುಖವಾಡದ ಕೆಲವು ಕುಖ್ಯಾತ ಓ.ಸಿ. ಬುಕ್ಕಿಗಳು, ಇಸ್ಪೀಟ್ ಆಡಿಸುವ ಉದ್ಯಮಿಗಳು ಅಮಾಯಕರು, ಅಸಹಾಯಕರನ್ನು ಬಳಸಿ ಕಾನೂನು ಬಾಹೀರ ವ್ಯವಹಾರ ನಡೆಸುತಿದ್ದಾರೆ. ಇಂಥವರ ಕೈ ಕೆಳಗೆ ಕೆಲಸಮಾಡುವ ಅನೇಕರನ್ನು ತಿಂಗಳಿನಿಂದೀಚೆಗೆ ಬಂಧಿಸಿ, ಶಿಸ್ತುಕ್ರಮ ಜರುಗಿಸಿರುವ ಪೊಲೀಸರು ಅವರಿಂದ ನಗದು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಮದ್ಯದ ಅನೇಕ ಪ್ರಕರಣಗಳೂ ಶಿರಸಿ-ಸಿದ್ಧಾಪುರಗಳಲ್ಲಿ ಪತ್ತೆಯಾಗಿವೆ. ಡಿಸೆಂಬರ್, ಜನೇವರಿ ತಿಂಗಳಲ್ಲಿ ಶಿರಸಿ ಉಪವಿಭಾಗದಲ್ಲಿ ಅಕ್ರಮಮದ್ಯ, ಓ.ಸಿ., ಇಸ್ಪೀಟ್ ಗಳ ನೂರಾರು ಪ್ರಕರಣಗಳಲ್ಲಿ ಸಿದ್ಧಾಪುರದ್ದೇ ಸಿಂಹಪಾಲಾಗಿರುವುದು ವಿಶೇಶ.
ಇಲ್ಲಿಯ ಶಾಸಕರು, ಸಂಸದರ ಆಪ್ತ ಮುಖಂಡರು, ಉದ್ಯಮಿಗಳೇ ಇಂಥ ಕಾನೂನುಬಾಹೀರ ಚಟುವಟಿಕೆಗಳಲ್ಲಿರುವ ಬಗ್ಗೆ ಆರೋಪ ವ್ಯಕ್ತವಾಗಿತ್ತು. ಸ್ಥಳಿಯರ ಆಕ್ಷೇಪ, ಪಕ್ಷಗಳು, ಮುಖಂಡರ ವಿರೋಧದಿಂದ ಚುರುಕಾದ ಪೊಲೀಸರು ಶಿರಸಿ ಉಪವಿಭಾಗದಲ್ಲಿ ನೂರಾರು ಪ್ರಕರಣಗಳಲ್ಲಿ ಹಲವರನ್ನು ಬಂಧಿಸಿದ್ದಾರೆ.
ಬಂಧಿತ ಅನೇಕರು ಅಮಾಯಕರಾಗಿದ್ದರೂ ಅವರು ಉದ್ಯಮಿಗಳ ಮುಖವಾಡದ ಕೆಲವು ಅಕ್ರಮ ವ್ಯವಹಾರಿಗಳ ಕೈಕೆಳಗೆ ಕೆಲಸಮಾಡುವ ಜನರು ಎಂಬುದು ಸಾಬೀತಾಗಿದೆ. ಅಕ್ರಮವ್ಯಹಾರಗಳನ್ನು ಪೋಶಿಸಿ,ಉದ್ಯಮಿಗಳ ಮುಖವಾಡದಲ್ಲಿ ಮೆರೆಯುವ ಕೆಲವರನ್ನು ದಾಖಲೆಗಳೊಂದಿಗೆ ಬಂಧಿಸಿದರೆ ಸಿದ್ಧಾಪುರ, ಶಿರಸಿಕ್ಷೇತ್ರದ ಶಾಂತಿ-ಸುವ್ಯವಸ್ಥೆ, ಸ್ವಚ್ಛಂದ ಜನಜೀವನಕ್ಕೆ ಅನುಕೂಲವಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.ಉತ್ತರ ಕನ್ನಡದ ಪೊಲೀಸ್ ವರಿಷ್ಠ ಶಿವಪ್ರಸಾದ್‍ದೇವರಾಜ್ ಈ ಸವಾಲನ್ನು ಎದುರಿಸುವ ಬಗ್ಗೆ ಯಾವ ಅನುಮಾನಗಳೂ ಇಲ್ಲ.
