

ಸಿದ್ಧಾಪುರದ ಗ್ರೀನ್‍ವ್ಯಾಲಿ ಆರ್ಗ್ಯಾನಿಕ್ ಸ್ಫೈಸಿಸ್ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ.
ಕಳೆದ ದಶಕದಲ್ಲಿ ಸಣ್ಣ ಉದ್ದಿಮೆಯಾಗಿ ಪ್ರಾರಂಭವಾದ ಈ ಸಂಸ್ಥೆ ಒಂದು ದಶಕದ ಅವಧಿಯಲ್ಲಿ ನೂರಾರು ಜನರಿಗೆ ಉದ್ಯೋಗ ನೀಡುವ ಮೂಲಕ ರಾಜ್ಯಮಟ್ಟದ ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ.
ಸಿದ್ಧಾಪುರದಂಥ ಹಿಂದುಳಿದ ತಾಲೂಕು, ಉತ್ತರ ಕನ್ನಡ ಜಿಲ್ಲೆಯಂಥ
ಹಿಂದುಳಿದ ಜಿಲ್ಲೆಯಲ್ಲಿ ಹುಟ್ಟಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವಂಥ ಅನುಕೂಲ ಈ ಪ್ರದೇಶದವರಿಗಿಲ್ಲ ಆದರೆ ಸಿದ್ಧಾಪುರದ ಗ್ರೀನ್‍ವ್ಯಾಲಿ ಸ್ಫೈಸಿಸ್ ಹಸಿರು ಕಣಿವೆಯಲ್ಲಿ ಕುಳಿತು ಅಂತರಾಷ್ಟ್ರೀಯ ನಕ್ಷೆಯಲ್ಲಿ ಮಿನುಗುತ್ತಿದೆ.
ಒಂದು ಕಾಲದಲ್ಲಿ ಕಾಳುಮೆಣಸಿನ ನಾಡು ಎನ್ನಲಾಗುತಿದ್ದ ಉತ್ತರ ಕನ್ನಡ ಕ್ರಮೇಣ ಆ ವಿಶೇಷಣಕ್ಕೆ ಅಪವಾದದಂತಿತ್ತು.
ಇಂಥ ಪ್ರತಿಕೂಲ ಸ್ಥಿತಿಯಲ್ಲಿ ಸಿದ್ಧಾಪುರದ ಕೆಲವು ಯುವಕರ ಪ್ರಯತ್ನ, ಕನಸಿನ ಸಂಸ್ಥೆಯಾಗಿ ಕಾರ್ಯಾರಂಭ ಮಾಡಿತು ಗ್ರೀನ್‍ವ್ಯಾಲಿ ಆರ್ಗ್ಯಾನಿಕ್ ಸ್ಫೈಸಿಸ್. ಅನ್ಯರಿಗಿರಲಿ ಸ್ವಯಂ ಈ ಸಂಸ್ಥೆಯ ಪ್ರಮುಖರಿಗೆ ಗ್ರೀನ್ ವ್ಯಾಲಿ ಸೃಷ್ಟಿಸಲಿರುವ ಜಾದು ಬಗ್ಗೆ ನಂಬಿಕೆ ಇರಲಿಲ್ಲ. ಆದರೆ ಶ್ರಮ, ಬದ್ಧತೆ, ಕನಸುಗಳೆಲ್ಲಾ ಮೇಳೈಸಿದ ಯುವಕರ ತಂಡ ಪ್ರಯೋಗ ಮಾಡುತ್ತಾ ಹೊರಟದ್ದೇ ಆರಂಭ ಒಂದೊಂದು ಪ್ರಯೋಗಗಳೂ ಫಲ ಕೊಟ್ಟು ಈಗ ಸಂಸ್ಥಾಪಕರ ನಿರೀಕ್ಷೆ ಮೀರಿ ಬೆಳೆದಿರುವ ಗ್ರೀನ್‍ವ್ಯಾಲಿ ಸ್ಫೈಸಿಸ್ ನೂರಾರು ಜನರಿಗೆ ಉದ್ಯೋಗ ನೀಡಿದ ಕೀರ್ತಿಗೆ ಪಾತ್ರವಾಗಿದೆ.
ಸಿದ್ಧಾಪುರದಲ್ಲಿ ಪ್ರಧಾನಕಛೇರಿ ಹೊಂದಿರುವ ಈ ಸಂಸ್ಥೆಯ ಕಛೇರಿಗಳು, ಪಾಲುದಾರ ಸಂಸ್ಥೆಗಳು ಉತ್ತರಕನ್ನಡದಿಂದ ಜಗತ್ತಿನಾದ್ಯಂತ ವಿಸ್ತರಿಸಿವೆ. ಈ ಪ್ರಗತಿ-ವಿಸ್ತಾರ ಗಮನಿಸಿದ ರಾಜ್ಯ ಸರ್ಕಾರ ಕೈಗಾರಿಕಾ ಇಲಾಖೆಯ ಮೂಲಕ 2014-15 ಮತ್ತು 17-18 ರಲ್ಲಿ ಎರಡುಬಾರಿ ರಾಜ್ಯಶ್ರೇಷ್ಠ ರಫ್ತು ಪ್ರಶಸ್ತಿ ನೀಡಿ ಗೌರವಿಸಿದೆ.
ಕೆಲವೇ ಸ್ನೇಹಿತರ ಗ್ರೀನ್‍ವ್ಯಾಲಿ, ಕಂಪನಿಯಾಗಿ,ರೈತಉತ್ಫಾದಕ ಕಂಪನಿಯಾಗಿ ರಾಜ್ಯಸರ್ಕಾರದ ಪ್ರಶಸ್ತಿ, ಗೌರವಕ್ಕೆ ಪಾತ್ರವಾಗಿರುವ ಸಂಸ್ಥೆ ಜಿಲ್ಲೆಯ ಕಾಳುಮೆಣಸು, ಏಲಕ್ಕಿ, ಅರಿಶಿಣ, ರಾಜ್ಯದ ಕಾಫಿ ಸೇರಿದಂತೆ ಅನೇಕ ಉತ್ಫನ್ನಗಳ ಸಂಸ್ಕರಣಾ ಘಟಕ ಮತ್ತು ಮಾರಾಟ ಸಂಸ್ಥೆಯಾಗಿ ಹೆಸರುಮಾಡುತ್ತಿದೆ.
ತಿತಿತಿ.suಡಿvಚಿm.ಟಿeಣ ನಲ್ಲಿ ಲಭ್ಯವಿರುವ ಈ ಸಂಸ್ಥೆಯ ಮಾಹಿತಿ ಅದರ ಆಳ, ವಿಸ್ತಾರಗಳನ್ನು ತಿಳಿಸುತ್ತಿದೆ.
ಈ ಸಂಸ್ಥೆಯ ಪ್ರಮುಖ ರಾಘವೇಂದ್ರ ಶಾಸ್ತ್ರಿ ಇಂಜಿನಿಯರಿಂಗ್ ಪದವಿಧರರಾಗಿದ್ದು ತಂದೆಯ ನಿಧನನಂತರ ಸಿದ್ಧಾಪುರದಲ್ಲಿರಬೇಕಾದ ಅನಿವಾರ್ಯತೆಯನ್ನು ಅವಕಾಶವನ್ನಾಗಿ ಬಳಸಿಕೊಂಡ ಶಾಸ್ತ್ರಿ ತಮ್ಮ ನಾಚಿಕೆ ಸ್ವಭಾವದ ಒಳಗೆ ಇರುವ ಕನಸುಗಾರ ಎಂಥಾ ಪ್ರಚಂಡ ಎಂಬುದನ್ನು ಈ ಸಂಸ್ಥೆಯ ಸಾಧನೆಯೇ ಹೇಳುತ್ತದೆ.
ಇವರೊಂದಿಗಿರುವ ಇನ್ನೊಬ್ಬ ಸಹವರ್ತಿ ಶಿರಸಿ ಟಿ.ಎಸ್.ಎಸ್. ನ ನಿರ್ದೇಶಕ ರಾಮಕೃಷ್ಣ ಹೆಗಡೆ ಅಳಗೋಡು ಇವರೊಂದಿಗಿರುವ ಅನೇಕ ಸಮಾನಮನಸ್ಕರ ತಂಡ ಸಿದ್ಧಾಪುರದಿಂದಲೂ ಅಂತರಾಷ್ಟ್ರೀಯ ವ್ಯಾಪಾರ, ವ್ಯವಹಾರ ಮಾಡಬಹುದೆಂಬುದನ್ನು ತೋರಿಸಿದ ಛಲಗಾರರ ಗುಂಪು. ಜಗತ್ತೇ ಹಳ್ಳಿಯಂತಾಗಿರುವ ಇಂದಿನ ವಾತಾವರಣದಲ್ಲಿ ಹಳ್ಳಿಯನ್ನು ಜಗತ್ತಿನ ಸಂಪರ್ಕಕ್ಕೆ ಜೋಡಿಸುವ ಮೂಲಕ ಸಿದ್ಧಾಪುರದ ಸಾಂಬಾರು ಉತ್ಫನ್ನಗಳ ಘಮವನ್ನು ಜಗತ್ತಿಗೆ ಸ್ಫುರಿಸಿದೆ.ಸಾಗರವನ್ನು ನೀನಾಸಂ ಮೂಲಕ ಜಗತ್ತಿಗೆ ಪರಿಚಯಿಸಿದಂತೆ ಸಾಂಬಾರು ಉತ್ಫನ್ನಗಳ ಮೂಲಕ ಸಿದ್ಧಾಪುರ, ಉತ್ತರಕನ್ನಡವನ್ನು ಜಗತ್ತಿನಸಾಂಬಾರು ಉತ್ಫನ್ನಗಳ ಹೆಬ್ಬಾಗಿಲಿಗೆ ತಂದು ನಿಲ್ಲಿಸಿರುವ ಗ್ರೀನ್‍ವ್ಯಾಲಿ ಸ್ಫೈಸಿಸ್ ನ ಸರ್ವಂ ತಂಡಕ್ಕೆ ಸಮಾಜಮುಖಿ ಸಲಾಂ.


