ಸಿದ್ಧಾಪುರ ತಾಲೂಕಿನ ಬಿಳಗಿ ಸೇವಾ ಸಹಕಾರಿ ಸಂಘದ ನಿರ್ಧೇಶಕ ಮಂಡಳಿಗೆ ನಡೆದ ಚುನಾವಣೆಯಲ್ಲಿ 2020 ರಿಂದ 2025 ರ ಅವಧಿಗೆ ಭಾರಿ ಬಹುಮತದಿಂದ ಸುಲೋಚನಾ ಶಾಸ್ತ್ರೀ ಬಿಳಗಿ ನೇತೃತ್ವದ ಎಲ್ಲಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಸುಲೋಚನಾ ಶಾಸ್ರ್ತೀ ನಾಲ್ಕನೇ ಬಾರಿ ಆಯ್ಕೆಯಾಗಿದ್ದು ಅವರ ನೇತೃತ್ವದಲ್ಲೇ ಹೆಚ್ಚು ನಿರ್ಧೇಶಕರು ಆಯ್ಕೆ ಆಗಿರುವುದರಿಂದ ಮತ್ತೆ ಅವರೇ ಅಧ್ಯಕ್ಷರಾಗುವ ಸಾಧ್ಯತೆ ನಿಚ್ಚಳವಾಗಿದೆ.
ಆಯ್ಕೆ ಆದ ಸದಸ್ಯರ ವಿವರ ಈ ಕೆಳಗಿನಂತಿದೆ.
ಸಾಲಗಾರ ಸಾಮಾನ್ಯ ಕ್ಷೇತ್ರಗಳಿಂದ
- ಸುಲೋಚನಾ ಪಿ ಶಾಸ್ತ್ರೀ, ಬಿಳಗಿ
- ಈಶ್ವರ ಕನ್ನಾ ಗೌಡ, ಕಿಲವಳ್ಳಿ
- ತಿಮ್ಮಾ ಮಲ್ಲಾ ಗೌಡ, ಕಟ್ಟೆಕೈ
- ರಾಜು ಕರಿಯಾ ನಾಯ್ಕ, ಕಬ್ಗಾರ್
- ಸಿದ್ದೇಶ್ವರ್ ಬಂಗರಪ್ಪ ನಾಯ್ಕ, ಕಳೂರ್
ಸಾಲಗಾರ ಅ ವರ್ಗದಿಂದ - ಗಣಪತಿ ನಾರಾಯಣ ಮಡಿವಾಳ, ಬಿಳಗಿ
- ಮಂಜುನಾಥ ಕನ್ನಾ ನಾಯ್ಕ, ಹೊಸಮಂಜಿ
ಸಾಲಗಾರ ಮಹಿಳೆ ಕ್ಷೇತ್ರದಿಂದ - ವಿಜಯಲಕ್ಷ್ಮೀ ಶಾಂತಾರಾಮ್ ಭಟ್, ಬಿಳಗಿ
- ಸುಲೋಚನಾ ದಾಮೋದರ ಗೌಡ, ಕುರವಂತೆ
ಗೋವಿಂದ ರಾಠೋಡ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಮೋಸ-ವಂಚನೆಯ ಆರೋಪಿ ಸೆರೆ
ಸರ್ಕಾರೇತರ ಸಂಸ್ಥೆಯೊಂದಕ್ಕೆ ಮೋಸಮಾಡಿ 8 ಲಕ್ಷ ವಂಚಿಸಿದ್ದ ಅವರಗುಪ್ಪಾದ ಸಂತೋಷ ಎನ್ನುವ ವ್ಯಕ್ತಿಯೊಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಿರುವ ಸಿದ್ಧಾಪುರ ಪೊಲೀಸರು ಇಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಶಿರಸಿಯ ಸರ್ಕಾರೇತರ ಸಂಸ್ಥೆಗೆ ವಂಚಿಸಿದ್ದ ಈತ ಕಳೆದ ಕೆಲವು ವರ್ಷಗಳಿಂದಲೇ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಮಿಶ್ರ ಕೃಷಿಯಲ್ಲಿ ಲಾಭ ಪಡೆಯುತ್ತಿರುವ ಸುನಿಲ್‍ಕುಮಾರ
ಆಧುನಿಕ ಅನುಕೂಲ, ತಂತ್ರಜ್ಞಾನಕ್ಕಾಗಿ ಮಹಾನಗರಕ್ಕೆ ಹೋಗಬೇಕು, ಕೃಷಿಗೆ ಗ್ರಾಮ ಸೇರಬೇಕು ಎನ್ನುವ ಸಾಮಾನ್ಯ ಗ್ರಹಿಕೆಯೊಂದಿದೆ. ಆದರೆ ಕಾಲ ಈ ಗೃಹಿಕೆ,ಗಾದೆ,ಪರಿಸ್ಥಿತಿಗಳನ್ನು ಬದಲಿಸುತ್ತಿದೆ. ನಗರದಲ್ಲಿ, ನಗರದ ಮನೆಯ ಟಾರಸಿಮೇಲೆ ಕೃಷಿ ಮಾಡಿ ಲಾಭ ಕಂಡವರಿದ್ದಾರೆ. ಗ್ರಾಮೀಣ ಪರಿಸರದಲ್ಲಿದ್ದೂ ಎಲ್ಲಾ ಆಧುನಿಕ ಅನುಕೂಲಗಳೊಂದಿಗೆ ಸುಖವಾಗಿದ್ದವರಿದ್ದಾರೆ. ಇಂಥ ಅಪವಾದಗಳಲ್ಲಿ ಸಂಪಕಂಡದ ಸುನಿಲ್ ನಾಯ್ಕ ಒಬ್ಬರು. ಆಟೋಮೊಬೈಲ್ ಡಿಪ್ಲೊಮಾ ಓದಿ ವಿಜ್ಞಾನ, ತಂತ್ರಜ್ಞಾನ ಎಂದು ನಗರ ಸೇರದೆ, ಹುಟ್ಟೂರಲ್ಲೇ ಕೃಷಿಯಲ್ಲಿ ಖುಷಿ ಕಂಡಿದ್ದಾರೆ.