

ರಂಗನಿರ್ಧೇಶಕ, ನಟ ಪ್ರಕಾಶ ಸದಾ ವಿಭಿನ್ನತೆಯಿಂದ ಗಮನ ಸೆಳೆಯುವ ರಂಗಕರ್ಮಿ. ಈ ಬಾರಿ ಕೆ.ಆರ್.ಪಿ. ರಾಜ್ಯ ನಾಟಕ ಅಕಾಡೆಮಿ ಸದಸ್ಯರಾಗಿರುವುದು, ಸಿದ್ಧಾಪುರದಲ್ಲಿ ಹಿತ್ತಲಕೈ ಗಣಪತಿ ಹೆಗಡೆ (ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ)ಯವರೊಂದಿಗೆ ಅನೇಕ ಕಲಾವಿದರು, ಕಲಾಸಕ್ತರಿರುವುದು. ಈ ಎಲ್ಲಾ ಅಂಶಗಳನ್ನು ಕ್ರೋಢೀಕರಿಸಲು ಸಾಧ್ಯವಾಗಿರುವುದರಿಂದ ಈ ಹವ್ಯಾಸಿ ನಾಟಕೋತ್ಸವ ನಡೆದಿದೆ. ಇಂಥ ಉತ್ಸವಗಳಿಂದ ಸಿದ್ಧಾಪುರದ ಜನರಿಗೆ ರಂಗಾಸ್ವಾದನೆಗೆ ಅವಕಾಶವಾಗಿರುವುದು ವಿಶೇಶವಾಗಿದೆ.

ಸಿದ್ಧಾಪುರ ಶಂಕರಮಠದಲ್ಲಿ ಶನಿವಾರದಿಂದ ಮಂಗಳವಾರದ ವರೆಗೆ ನಡೆದ ನಾಟಕ ಅಕಾಡೆಮಿಯ ಹವ್ಯಾಸಿ ನಾಟಕೋತ್ಸವ ರಂಗಾಸಕ್ತರಿಗೆ ಭೂರಿಭೋಜನ ಉಣಿಸಿತು. ಮೊದಲ ದಿನದ ಉದ್ಘಾಟನಾ ಕಾರ್ಯಕ್ರಮದ ನಂತರ ಗಣಪತಿ ಹಿತ್ತಲಕೈ ನಿರ್ಧೇಶಿಸಿದ್ದ ಜಯಂತ ಕಾಯ್ಕಿಣಿ ಕಥೆಗಳ ರಂಗಪ್ರಸ್ತುತಿ ಸುಗ್ಗಿ ಮತ್ತು ಕೋಮಲ ಗಾಂಧಾರ ಕತೆ, ನಿರ್ಧೇಶನ ಒಂದೇ ವೇದಿಕೆಯಲ್ಲಿ ಎರಡು ಕತೆಗಳ ಕಾದಂಬರಿಯ ಕಥಾ ಪ್ರಸಂಗದಂಥ ರಂಗಪ್ರಸ್ತುತಿ ಕತೆ, ವಿನ್ಯಾಸ, ವಸ್ತ್ರ ವಿನ್ಯಾಸ, ಭಾಷೆಗಳ ಹಿನ್ನೆಲೆಯಲ್ಲಿ ಗಮನ ಸೆಳೆಯಿತು.
ಸುಗ್ಗಿ ಯಲ್ಲಿ ಗೌಡರ ತಾಕಲಾಟ, ಶಾಲಾ ಮಾಸ್ತರರ ಪರದಾಟ ಪ್ರೇಕ್ಷಕರ ಗಮನ ಸೆಳೆಯಿತು. ಸರ್ಕಾರಿ ಇಲಾಖೆಯ ಅನುಕೂಲದ ಆಸೆಯಿಂದ ಹಾಲಕ್ಕಿ ಕೊಪ್ಪಗಳಲ್ಲಾದ ವೈಚಿತ್ರ್ಯಗಳನ್ನು ಜಯಂತರ ಭಾಷೆಯಲ್ಲಿ ಹುಬೇಹುಬೇ ಎನ್ನುವಂತೆ ಕಟ್ಟಿಕೊಡುವ ತೊಂದರೆಗಳ ಮಧ್ಯೆ ರಂಗಪ್ರಯೋಗವಾಗಿಸುಗ್ಗಿ ಯಶಸ್ವಿಯಾಯಿತು.
ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗಣಪತಿ ಹಿತ್ತಲಕೈ ನಿರ್ಧೇಶನವಿದ್ದರೂ ಸುಗ್ಗಿ ಮತ್ತು ಕೋಮಲಗಾಂಧಾರದ ಎರಡು ವಿಭಿನ್ನ ಕಥಾ ಹಂದರವನ್ನು ನೋಡುವಾಗ ಪ್ರೇಕ್ಷಕ ಗೊಂದಲಕ್ಕೊಳಗಾದನೇನೋ ಎನ್ನಿಸುವಂತಿದ್ದರೂ ಒಟ್ಟಾರೆ ಪರಿಣಾಮದಲ್ಲಿ ಲೋಪವಾಗಲಿಲ್ಲ. ಎರಡನೆಯ ದಿವಸದ ಶಿರಸಿ ಅಂಕಸಂಸಾರದ ಅಂಧಯುಗ ಗಮನಸೆಳೆಯಿತು. ರಮಾನಂದ ಐನಕೈ ವಿನ್ಯಾಸ ಮತ್ತು ನಿರ್ಧೇಶನದಲ್ಲಿ ಪಾತ್ರಗಳು ಮನಮುಟ್ಟಿದವು. ಕೊನೆಯ ದಿವಸದ ದೇವದಾಸಿ ಪರಿಣಾಮಕಾರಿ ಪ್ರಯೋಗವಾಗಿ ಗಮನಸೆಳೆಯಿತು.ದಿ.ಹಿರಣ್ಯಯ್ಯ ವಿರಚಿತ ದೇವದಾಸಿ ಸಾಮಾಜಿಕ ನಾಟಕದಂತೆನಿಸಿದರೂ ಕ್ಲೈಮ್ಯಾಕ್ಸ್, ಮೆಲೋಡ್ರಾಮಾ ಹೊಸ ಅಲೆಯ ನಾಟಕದ ಆಶಯಗಳಿಗೆ ಪೂರಕವಾಗಿತ್ತು.ಈ ನಾಟಕಗಳ ಮಧ್ಯೆ ತನ್ನ ವಿಶಿಷ್ಟತೆ, ವಿಭಿನ್ನತೆ, ಪರಿಪೂರ್ಣತೆಗಳಿಂದ ಗಮನ ಸೆಳೆದಿದ್ದು ಚಿತ್ರಾ ನೃತ್ಯನಾಟಕ. ರವೀಂದ್ರನಾಥ ಠ್ಯಾಗೂರರ ಕತೆಯನ್ನಾಧರಿಸಿದ ಈ ನೃತ್ಯನಾಟಕವನ್ನು ಕನ್ನಡಕ್ಕೆ ತಂದವರು ಸುಧಾ ಅಡಕುಳಾ.ಉಡುಪಿಯ ನೃತ್ಯ ನಿಕೇತನ ಪ್ರಸ್ತುತಪಡಿಸಿದ ಈ ಚಿತ್ರಾ ನೃತ್ಯನಾಟಕ ಬಹುಅಂಶಗಳಿಂದ ಗಮನಸೆಳೆಯಿತು. ಶ್ರೀಪಾದ ಭಟ್ ನಿರ್ದೇಶನದ ಈ ರೂಪಕದ ಶಕ್ತಿಗಳೆಂದರೆ ನಟಿಯರು ಮತ್ತು ಸಾಂದರ್ಭಿಕ ನೈಸರ್ಗಿಕ ಶೆಟ್‍ಗಳು.ವಸ್ತ್ರವಿನ್ಯಾಸ, ಸಹಾಯಕ ವಿನ್ಯಾಸಗಳು ಒಟ್ಟಾರೆ ಈ ನೃತ್ಯ ನಾಟಕ ನೋಡಿದವರು ದೋಷ ಹುಡುಕಿದರೂ ಸಿಗದಷ್ಟು ಅದ್ಭುತವಾದ ಹೊಂದಾಣಿಕೆಯ ಎಲ್ಲಾ ಅಂಶಗಳು ಈ ನೃತ್ಯ ನಾಟಕವನ್ನು ಶ್ರೇಷ್ಠಗೊಳಿಸಿದವು. ಈ ನಾಟಕೋತ್ಸವದ ವಿಭಿನ್ನ, ವಿಶಿಷ್ಟ ಪ್ರಯೋಗವಾದ ಈ ನೃತ್ಯ ನಾಟಕ ಚಿತ್ರಾ ರಂಗಾಸಕ್ತರಿಗೆ ವಿಶೇಶ ಅನುಭೂತಿಯಾಗಿ ಕಾಡಿದ್ದಂತೂ ಸತ್ಯ.
ವೆಂಕಟೇಶ್ ರಂಗಪ್ಪ ನಾಯಕ ಬಿ.ಜೆ.ಪಿ. ಜಿಲ್ಲಾಧ್ಯಕ್ಷ
ಬಿ.ಜೆ.ಪಿ. ಉತ್ತರಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಕುಮಟಾದ ವೆಂಕಟೇಶ್ ನಾಯಕ್ ಆಯ್ಕೆ ಆಗಿದ್ದಾರೆ. ಕೆ.ಜಿ.ನಾಯ್ಕರ ಉತ್ತರಾಧಿಕಾರಿಯಾದ ಇವರು ಹಳಿಯಾಳದ ಸುನಿಲ್ ಹೆಗಡೆ, ಕಾರವಾರದ ನಾಗರಾಜ್ ನಾಯಕ್ ಜೊತೆ ಸ್ಫರ್ಧೆಯಲ್ಲಿದ್ದರು. ಹಿಂದಿನ ಅವಧಿಯಲ್ಲಿ ಕೂಡಾ ರೇಸ್‍ನಲ್ಲಿದ್ದ ಇವರು ಅಲ್ಫಸಂಖ್ಯಾತ ಗೌಡ ಸಾರಸ್ವತ ಸಮಾಜವನ್ನು ಪ್ರತಿನಿಧಿಸುತಿದ್ದಾರೆ. https://youtu.be/SECeqAzEVbY



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
