

ಸಿದ್ಧಾಪುರ ತಾಲೂಕಿನ ಪ್ರಸಿದ್ಧಿಗೆ ಬಾರದ ಜಲಪಾತವೊಂದು ಸಂಪರ್ಕ ರಸ್ತೆಯ ಕೊರತೆಯಿಂದ ನೇಪಥ್ಯದಲ್ಲಿರುವ ವಿದ್ಯಮಾನ ಬೆಳಕಿಗೆ ಬಂದಿದೆ. ಜೋಗ-ಸಿದ್ಧಾಪುರ ರಸ್ತೆಯಿಂದ ಮೆಣಸಿ,ಸಂಪಕಂಡ ಮಾರ್ಗದ ಮುಂಡ್ಗೆತಗ್ಗು ಬಳಿ ಸೋಮುನಕುಳಿ ಎನ್ನುವ ಗ್ರಾಮವಿದೆ. ಈ ಊರಿಗೆ ತೆರಳುವ ಮಾರ್ಗದಲ್ಲಿ ಜಲಪಾತವೊಂದಿದ್ದು ನೂರು
ಅಡಿಗಿಂತ ಎತ್ತರದಿಂದ ಜಾರುವ ನೀರು ನೋಡುಗರಿಗೆ ಮುದ ನೀಡುತ್ತದೆ.
ಸೋಮನಕುಳಿ ತೋಟ, ಗುಡ್ಡಗಳ ನಡುವೆ ಹರಿದುಬರುವ ನೀರು ಸೋಮುನಕುಳಿಗಿಂತ (ಮಾರ್ಗಮಧ್ಯ) ಮೊದಲೇ ಜಲಪಾತ ಒಂದನ್ನು ಸೃಷ್ಟಿಸಿದೆ. ಈ ಜಲಪಾತ ಜೂನ್ ನಿಂದ ಡಿಸೆಂಬರ್ ವರೆಗೆ ಸುಂದರವಾಗಿ ಕಾಣುತ್ತದೆ. ಹೊಸವರ್ಷದಲ್ಲಿ ಬಿಸಿಲು ಹೆಚ್ಚಾಗುತ್ತಲೇ ಕ್ಷೀಣವಾಗುವ ಈ ಜಲಧಾರೆ ವೀಕ್ಷಣೆಗೆ ಜುಲೈನಿಂದ ಡಿಸೆಂಬರ್ ಉತ್ತಮಸಮಯ. ಈ ಅವಧಿಯಲ್ಲೂ ಈ ಸೋಮುನಕುಳಿ ಜಲಪಾತಕ್ಕೆ ಹೋಗಲು ಸಂಪರ್ಕ ರಸ್ತೆಯ ವ್ಯವಸ್ಥೆ ಇಲ್ಲ. ಸಂಪಖಂಡ,ಚಂದ್ರಘಟಕಿ ರಸ್ತೆಯಿಂದ 2ಕಿ.ಮೀ. ದೂರದ ಈ ಜಲಪಾತಕ್ಕೆ ತೆರಳಲು ಮಣ್ಣಿನ ಕಚ್ಚಾ ರಸ್ತೆ ಇದೆಯಾದರೂ ವಾಹನಗಳು ಚಲಿಸುವುದು ಕಷ್ಟ.
ವರ್ಷದ ಆರು ತಿಂಗಳು ಸುರಿಯುವ ಸೋಮುನಕುಳಿ ಜಲಪಾತಕ್ಕೆ ತೆರಳಲು ಸರ್ವಋತು ರಸ್ತೆಯಾದರೆ ಜಲಪಾತ ನೋಡುವ ಪ್ರವಾಸಿಗರು ಮತ್ತು ಸ್ಥಳಿಯರಿಗೆ ಅನುಕೂಲವಾಗುತ್ತದೆ. ಕಾಡಿನ ನಡುವೆ ಅಡಿಕೆತೋಟದ ತುದಿಗೆ ಸೃಷ್ಟಿಯಾಗಿರುವ ಜಲಪಾತ ರಸ್ತೆ ಸಂಪರ್ಕದ ಕೊರತೆಯಿಂದ ತೆರೆಮರೆಗೆ ಸರಿದಿದೆ. ಹಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಈ ಜಲಪಾತ ಉತ್ತಮ ರಸ್ತೆ ನಿರ್ಮಾಣದಿಂದ ಪ್ರವಾಸಿಗರಿಗೆ ಸಮೀಪವಾಗುವ ಅವಕಾಶವಿದೆ.
ಖುಷಿ ಕೊಟ್ಟ
ಹವ್ಯಾಸಿ ನಾಟಕೋತ್ಸವ
ಸಿದ್ಧಾಪುರ ಶಂಕರಮಠದಲ್ಲಿ ಶನಿವಾರದಿಂದ ಮಂಗಳವಾರದ ವರೆಗೆ ನಡೆದ ನಾಟಕ ಅಕಾಡೆಮಿಯ ಹವ್ಯಾಸಿ ನಾಟಕೋತ್ಸವ ರಂಗಾಸಕ್ತರಿಗೆ ಭೂರಿಭೋಜನ ಉಣಿಸಿತು. ಮೊದಲ ದಿನದ ಉದ್ಘಾಟನಾ ಕಾರ್ಯಕ್ರಮದ ನಂತರ ಗಣಪತಿ ಹಿತ್ತಲಕೈ ನಿರ್ಧೇಶಿಸಿದ್ದ ಜಯಂತ ಕಾಯ್ಕಿಣಿ ಕಥೆಗಳ ರಂಗಪ್ರಸ್ತುತಿ ಸುಗ್ಗಿ ಮತ್ತು ಕೋಮಲ ಗಾಂಧಾರ ಕತೆ, ನಿರ್ಧೇಶನ ಒಂದೇ ವೇದಿಕೆಯಲ್ಲಿ ಎರಡು ಕತೆಗಳ ಕಾದಂಬರಿಯ ಕಥಾ ಪ್ರಸಂಗದಂಥ ರಂಗಪ್ರಸ್ತುತಿ ಕತೆ, ವಿನ್ಯಾಸ, ವಸ್ತ್ರ ವಿನ್ಯಾಸ, ಭಾಷೆಗಳ ಹಿನ್ನೆಲೆಯಲ್ಲಿ ಗಮನ ಸೆಳೆಯಿತು.



