ಕೆ.ಆರ್. ಪ್ರಕಾಶರಿಗೆ ಸನ್ಮಾನ , ಚಿಕಿತ್ಸಕ ದೃಷ್ಟಿ ಬೆಳೆಸುವಲ್ಲಿ ಹವ್ಯಾಸಿ ನಾಟಕಗಳ ಕೊಡುಗೆ ಅಪಾರ

ನಾಟಕೋತ್ಸವ ಸಮಾರೋಪ- ಕೆ.ಆರ್. ಪ್ರಕಾಶರಿಗೆ ಸನ್ಮಾನ
ಚಿಕಿತ್ಸಕ ದೃಷ್ಟಿ ಬೆಳೆಸುವಲ್ಲಿ ಹವ್ಯಾಸಿ ನಾಟಕಗಳ ಕೊಡುಗೆ ಅಪಾರ
ಅಕಾಡೆಮಿಕ್ ಚಿಕಿತ್ಸಕ ದೃಷ್ಟಿ ಬೆಳೆಸುವಲ್ಲಿ ಹವ್ಯಾಸಿ ನಾಟಕಗಳ ಕೊಡುಗೆ ಅಪಾರ. ಅವು ಶಾಸ್ತ್ರ ಮತ್ತು ವಿಜ್ಞಾನ ಎರಡೂ ಕೂಡ. ನಮ್ಮ ಸಮಸ್ಯೆಗಳಿಗೆ ಪರಿಹಾರ ರೂಪಿಸಿಕೊಳ್ಳುವ ಶಕ್ತಿ ಅವುಗಳಿಂದ ಒದಗುತ್ತದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಎಚ್.ಎಂ.ನಾಗರಾಜರಾವ್ ಹೇಳಿದರು.
ಅವರು ಸಿದ್ಧಾಪುರ ಶಂಕರಮಠದಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಸ್ಥಳೀಯ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ ನಾಲ್ಕು ದಿನಗಳ ಹವ್ಯಾಸಿ ನಾಟಕೋತ್ಸವ-2020ರ ಸಮಾರೋಪ ಕಾರ್ಯಕ್ರಮದಲ್ಲಿ ಸಮಾರೋಪ ಮಾತುಗಳನ್ನಾಡಿದರು.
ಶಿಕ್ಷಣ ಪಡೆದುಕೊಂಡರೂ ನಮ್ಮಲ್ಲಿ ಅಹಂಕಾರ , ಇನ್ನೊಬ್ಬರನ್ನ ಅರ್ಥ ಮಾಡಿಕೊಳ್ಳದ ಸ್ಥಿತಿ ನಮ್ಮದಾಗಿದೆ.ಪರಸ್ಪರ ಬೆರೆಯುವ ಸ್ವಭಾವ ಕ್ಷೀಣಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿದ ಕಲೆಗಳು ಈಗಲೂ ಸರ್ವಶ್ರೇಷ್ಠ. ನಗರೀಕರಣದಲ್ಲಿ ಪ್ರತಿಷ್ಠಾಪನಾ ಸಂಸ್ಕೃತಿಯೇ ಹೆಚ್ಚುತ್ತ ಬಂತು. ಕಾಲ ಯಾವಾಗಲೂ ಸರಿಯಾಗಿರುವದಿಲ್ಲ. ಕಲೆಗಳು ನಮ್ಮ ಸರಿಗಳ ಪಟ್ಟಿಮಾಡುತ್ತವೆ. ಪರಿಪೂರ್ಣತೆಗೆ ಎಲ್ಲ ಕಲೆಗಳೂ ಸಹಕಾರಿಯಾಗಿವೆ. ಸಾಂಸ್ಕೃತಿಕ ಮತ್ತು ಬದುಕಿನ ಕಲೆ ಎರಡನ್ನೂ ಕಾಣುವುದು ರಂಗಕಲೆಗಳಿಂದ ಸಾಧ್ಯ. ಯಕ್ಷಗಾನ, ರಂಗಕಲೆಗಳು ಯಾವುದು ಅಗತ್ಯ ಎನ್ನುವದನ್ನು ತಿಳಿಸಿಕೊಡುತ್ತದೆ. ಮುಖ್ಯವಾಗಿ ನಮ್ಮಲ್ಲಿ ಸಾಂಸ್ಕೃತಿಕ ಪ್ರಜ್ಞೆ ರೂಪಿಸುವ ಪ್ರಜ್ಞೆ ಬೇಕು. ಅದು ಇಂಥ ನಾಟಕೋತ್ಸವಗಳಿಂದ ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಮಾತನಾಡಿ ಧಾರ್ಮಿಕ ಚಟುವಟಿಕೆಯಂತೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ಮಹತ್ವವಿದೆ. ಸಾಂಸ್ಕೃತಿಕತೆಯಿಂದ ಆನಂದ, ನೆಮ್ಮದಿ ದೊರೆಯುತ್ತದೆ. ಇಲ್ಲಿ ನಡೆದ ನಾಲ್ಕು ದಿನಗಳ ನಾಟಕೋತ್ಸವ ಅತ್ಯಂತ ಯಶಸ್ವಿಯಾಗಿ ನಡೆದಿದ್ದು ರಂಗಭೂಮಿಯ ಕುರಿತಾದ ಆಸಕ್ತಿ, ಪ್ರಜ್ಞೆಯನ್ನು ಪ್ರೇಕ್ಷಕರಲ್ಲಿ ಮೂಡಿಸಿದೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ, ನಾಟಕೋತ್ಸವದ ಸಂಯೋಜಕ ಕೆ.ಆರ್.ಪ್ರಕಾಶ್ ಸ್ವಾಗತಿಸಿದರು. ಪ್ರೊ| ಎಂ.ಕೆ.ನಾಯ್ಕ ಹೊಸಳ್ಳಿ ನಿರೂಪಿಸಿದರು. ಕೃಷ್ಣ ಪೂಜಾರಿ ವಂದಿಸಿದರು.
ಈ ಸಂದರ್ಭದಲ್ಲಿ ಕೆ.ಆರ್.ಪ್ರಕಾಶ್‍ರನ್ನು ಸ್ಥಳೀಯ ಸಂಘಟನೆಗಳ ಪರವಾಗಿ ಸನ್ಮಾನಿಸಲಾಯಿತು. ನಾಟಕೋತ್ಸವಕ್ಕೆ ಸಹಕಾರ ನೀಡಿದ ಸಂಘಟನೆಗಳ ಮುಖ್ಯಸ್ಥರಾದ ಗಣಪತಿ ಹೆಗಡೆ ಹುಲೀಮನೆ, ನಂದನ ಹೆಗಡೆ ಮಗೇಗಾರ, ಗಣಪತಿ ಹಿತ್ಲಕೈ, ಗಣಪತಿ ಹೆಗಡೆ ವಡ್ಡಿನಗದ್ದೆ, ಗಣಪತಿ ಗುಂಜಗೋಡ ಮುಂತಾದವರನ್ನು ಗೌರವಿಸಲಾಯಿತು.

ಲಲಿತಪ್ರಬಂಧ-
ನೋಡಿದ್ದೀರಾ..
ಜೋಗದ ಗುಂಡಿ
-ತಮ್ಮಣ್ಣ ಬೀಗಾರ್
ದೊಡ್ಡ ಕಲ್ಲುಬಂಡೆ, ಅದರ ಆಚೆಗಿನ ನೀರಿನ ಗುಂಡಿ ಎಲ್ಲ ಸಮೀಪ ಇದ್ದಂತೆ ಕಾಣುತ್ತಿತ್ತು. ಹಾಗೆ ಕಾಣಲು ತೊಡಗಿ ಐದು ನಿಮಿಷವೇ ಆಗಿರಬೇಕು. ಹಿಂದೆ ನೋಡಿದರೆ ಅಪ್ಪ ನನಗಿಂತ ಮೆಟ್ಟಿಲು ಹಿಂದೆ ಇದ್ದ. ನಿಲ್ಲು ನಿಲ್ಲು ಎಂದು ಸನ್ನೆ ಮಾಡುತ್ತ ದೊಡ್ಡದಾಗಿ ಕೂಗಿ ಹೇಳಿದ. ನಾನು ನಿಧಾನವಾಗಿ ಕೆಳಗೆ ಇಳಿಯುತ್ತಲೇ ಇದ್ದೆ.
ನನ್ನದು ಜೋಗ ಜಲಪಾತದಿಂದ ಹದಿನೈದು ಇಪ್ಪತ್ತು ಕಿಲೋಮೀಟರಿನಷ್ಟು ಸಮೀಪವೇ ಇರುವ ಊರು. ಬಹಳ ದೂರದ ಊರುಗಳಿಂದ ಜೋಗದ ಜಲಪಾತ ನೋಡಲು ಜನ ಬರುತ್ತಾರೆ ಎಂದು ಕೇಳಿದ್ದೆ. ನಾನೀಗ ಆರನೇ ತರಗತಿ ಓದುತ್ತಿದ್ದರೂ ಜೋಗಕ್ಕೆ ಬಂದಿರಲಿಲ್ಲ……..

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *