

ಮಕ್ಕಳ ಪಠ್ಯವನ್ನು ಪಾಲಕರು ಅರಿತು ಮಾರ್ಗದರ್ಶನ ಮಾಡಿದರೆ ಹೆಚ್ಚು ಅನುಕೂಲ. ಹಾಗೆಯೇ ಅವರು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಹಂತದಲ್ಲಿ ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ಅವರ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಸಾಧ್ಯವಾಗುತ್ತದೆ ಎಂದು ಸಮಾಜಮುಖಿ ಪತ್ರಿಕೆಯ ಸಂಪಾದಕ ಕನ್ನೇಶ್ ಕೋಲಶಿರ್ಸಿ ಹೇಳಿದರು.
ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಬಾಲಭವನ ಸೊಸೈಟಿ, ಶಿಶು ಅಭಿವೃದ್ಧಿ ಯೋಜನಾ ಕಛೇರಿ, ಆಧಾರ ಸಂಸ್ಥೆ ( ರಿ) ಗಳ ಆಶ್ರಯದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ 5 ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ನಡೆಸಿದ ಚಿತ್ರಕಲೆ ಹಾಗೂ ವೇಷಭೂಷಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಮಾತನಾಡಿ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಅನೇಕ ಸಂಗತಿಗಳ ಕುರಿತಾಗಿ ತಿಳಿದುಕೊಳ್ಳುವುದಕ್ಕೆ ಮಕ್ಕಳಿಗೆ ಸಾಧ್ಯವಾಗುತ್ತದೆ.ಹೆಚ್ಚು ಹೊಸ ವಿಚಾರಗಳ ಅರಿವು ಮೂಡುತ್ತದೆ. ನಮ್ಮಲ್ಲಿಯ ಕ್ರೀಯಾಶೀಲತೆ ಬೆಳೆಯುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಧಾರ ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಮಾತನಾಡಿ ಪ್ರತಿಯೊಂದು ಮಗುವಿನಲ್ಲಿಯೂ ಪ್ರತಿಭೆ ಇರುತ್ತದೆ. ಪಠ್ಯೇತರ ಚಟುವಟಿಕೆಯಲ್ಲಿ ಸಾಧನೆಯನ್ನು ಮಾಡುವುದರೊಂದಿಗೆ ನಮ್ಮಲ್ಲಿಯ ಕೀಳರಿಮೆ ಹೋಗುತ್ತದೆ.ಯಾವುದಾದರೂ ಆಸಕ್ತ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಹೊಂದಲು ಸಹಕಾರಿಯಾಗುತ್ತದೆ ಎಂದರು.
ವೇದಿಕೆಯಲ್ಲಿ ರಜಥಶಿಲ್ಪಿ ಪ್ರಶಾಂತ ಶೇಟ್, ಶಿಕ್ಷಣ ಇಲಾಖೆಯ ಬಿ.ಆರ್.ಪಿ ಗಳಾದ ಎಚ್.ಆರ್.ನಾಯ್ಕ, ,ಆಧಾರ ಸಂಸ್ಥೆಯ ಸಂಯೋಜಕ ಟಿ.ಕೆ.ಎಂ.ಆಜಾದ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಆಧಾರ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ಸಂಧ್ಯಾ ಡಿ.ಆಚಾರಿ ಸ್ವಾಗತಿಸಿದರು. ಶಿಕ್ಷಕಿ ನಮೃತಾ ವಿ. ಕಾರ್ಯಕ್ರಮ ನಿರ್ವಹಿಸಿದರು. ರೇಖಾ ಫರ್ನಾಂಡಿಸ್ ವಂದಿಸಿದರು.
ಸ್ಫರ್ಧಾ ವಿಜೇತರು; ಚಿತ್ರಕಲೆ 5 ರಿಂದ 8 ವರ್ಷದ ಮಕ್ಕಳ ವಿಭಾಗದಲ್ಲಿ ಕೋಲಶಿರ್ಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2 ನೇ ತರಗತಿಯ ವಿದ್ಯಾರ್ಥಿ ಬಿ.ಎನ್.ಪ್ರೇರಣ ( ಪ್ರಥಮ), ಪ್ರಶಾಂತಿ ವಿದ್ಯಾ ಕೇಂದ್ರದ 3 ನೇ ತರಗತಿ ವಿದ್ಯಾರ್ಥಿ ರಾಘವೇಂದ್ರ ಡಿ.ಶೆಟ್ಟಿ ( ದ್ವಿತೀಯ) ಇದೇ ಶಾಲೆಯ 3 ನೇ ತರಗತಿ ವಿದ್ಯಾರ್ಥಿ ವಿಶ್ವಾಸ ಸಿ.ಹೊಸೂರು ( ತೃತೀಯ)
9 ರಿಂದ 12 ರ ವಯೋಮಿತಿ ವಿಭಾಗದಲ್ಲಿ ಪಟ್ಟಣದ ಸಿದ್ಧಿವಿನಾಯಕ ಪ್ರಾಥಮಿಕ ಶಾಲೆಯ 5 ನೇ ತರಗತಿ ವಿದ್ಯಾರ್ಥಿ ಸುಹಾಸ್ ನಾಗರಾಜ ನಾಯ್ಕ (ಪ್ರಥಮ) ಕವಲಕೊಪ್ಪ ಹಿರಿಯ ಪ್ರಾಥಮಿಕ ಶಾಲೆಯ 6 ನೇ ತರಗತಿ ವಿದ್ಯಾರ್ಥಿ ಎಚ್.ಡಿ.ದೀಪಾ ( ದ್ವಿತೀಯ) ಪ್ರಶಾಂತಿ ವಿದ್ಯಾ ಕೇಂದ್ರದ 4 ನೇ ತರಗತಿ ವಿದ್ಯಾರ್ಥಿ ಎಸ್.ಆರ್.ಸಾನಿಕಾ ( ತೃತೀಯ) 13 ರಿಂದ 16 ವಯೋಮಾನದ ವಿಭಾಗದಲ್ಲಿ ಹಲಗೇರಿಯ ಕರ್ನಾಟಕ ಪ್ರೌಢ ಶಾಲೆ 9 ನೇ ತರಗತಿ ವಿದ್ಯಾರ್ಥಿ ಚಿನ್ಮಯ್ಯ ಜಿ.ನಾಯ್ಕ (ಪ್ರಥಮ) ಪಟ್ಟಣದ ಸಿದ್ಧಿವಿನಾಯಕ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿ ಮಾನ್ಯ ಎಚ್.ಎನ್ ( ದ್ವಿತೀಯ) ಹಲಗೇರಿಯ ಕರ್ನಾಟಕ ಪ್ರೌಢ ಶಾಲೆ 9 ನೇ ತರಗತಿ ವಿದ್ಯಾರ್ಥಿ ದೀಪಕ್ ಕೆ.ನಾಯ್ಕ ( ತೃತೀಯ) ಬಹುಮಾನ ಪಡೆದುಕೊಂಡಿದ್ದಾರೆ.
ವೇಷಭೂಷಣ ಸ್ಪರ್ಧೆಯಲ್ಲಿ 5 ರಿಂದ 7 ರ ವಯೋಮಿತಿಯ ವಿಭಾಗದಲ್ಲಿ ಪಟ್ಟಣದ ಪ್ರಶಾಂತಿ ಆಂಗ್ಲ ಮಾಧ್ಯಮ ಶಾಲೆಯ 1 ನೇ ತರಗತಿ ವಿದ್ಯಾರ್ಥಿ ತಪಸ್ಯ ತುಷಾರ ಚಂದ್ರಘಟಗಿ ( ಪ್ರಥಮ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 1 ನೇ ತರಗತಿ ವಿದ್ಯಾರ್ಥಿ ಮಾನ್ವಿ ಮೋಹನ ನಾಯ್ಕ (ದ್ವಿತೀಯ) ಸಿದ್ಧಿವಿನಾಯಕ ಪ್ರಾಥಮಿಕ ಶಾಲೆಯ 1 ನೇ ತರಗತಿಯ ವಿದ್ಯಾರ್ಥಿ ವಿವಾನ್ ಪ್ರಕಾಶ ನಾಯ್ಕ (ತೃತೀಯ).
8 ರಿಂದ 10 ರ ವಯೋಮಾನದ ವಿಭಾಗದಲ್ಲಿ ಸಿದ್ಧಿವಿನಾಯಕ ಪ್ರಾಥಮಿಕ ಶಾಲೆಯ 3 ನೇ ತರಗತಿ ವಿದ್ಯಾರ್ಥಿ ಆರುಷ ಆನಂದ ಶೇಟ್ ( ಪ್ರಥಮ). ಕವಲಕೊಪ್ಪ ಎಚ್.ಪಿ.ಎಸ್ 4 ನೇ ತರಗತಿ ವಿದ್ಯಾರ್ಥಿ ಮಧುರಾ ನಾಯ್ಕ ( ದ್ವಿತೀಯ) ಸಿದ್ದಾಪುರ ಎಚ್.ಪಿ.ಎಸ್ 3 ನೇ ತರಗತಿ ವಿದ್ಯಾರ್ಥಿ ಜಾಹ್ನವಿ ( ತೃತೀಯ) ಸ್ಥಾನವನ್ನು ಪಡೆದುಕೊಂಡರು.




