

ಭಾರತ, ಅಮೇರಿಕ, ಆಸ್ಟ್ರೇಲಿಯಾ, ಚೀನಾ, ಯುನೈಟೆಡ್ ಕಿಂಗಡಂ ಸೇರಿದಂತೆ ಪ್ರಪಂಚದ 178 ನಗರದಲ್ಲಿ ನಡೆಯುವ
ಅಂತರಾಷ್ಟ್ರೀಯ ಗುಣಮಟ್ಟದ ಸಿಎಫ್‍ಎ (ಚಾರ್ಟೆಡ್ ಫೈನಾನ್ಸಿಯಲ್ ಅನಾಲಿಸ್ಟ) ಪರೀಕ್ಷೆಯಲ್ಲಿ ಶಿರಸಿತಾಲೂಕಿನ ಹುಳಗೋಳದ ರಾಧಿಕಾ ಹೆಗಡೆ ತೇರ್ಗಡೆ ಆಗಿದ್ದಾಳೆ.
ಕಳೆದ ಡಿಸೆಂಬರನಲ್ಲಿ ಮುಂಬಯಿ ಸೇರಿದಂತೆ ಏಕಕಾಲಕ್ಕೆ ಪ್ರಪಂಚದ ವಿವಿಧಡೆ ಈ ಪರೀಕ್ಷೆ ನಡೆದಿದ್ದು, ಕೇವಲ ಶೇ.42ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ. ಕಳೆದ ಏಳು ವರ್ಷದಲ್ಲಿ ಇದೇ ಪ್ರಥಮ ಬಾರಿಗೆ ಇಷ್ಟು ಕಡಿಮೆ ಫಲಿತಾಂಶ ಬಂದಿದೆ. ಪ್ರತೀ ವರ್ಷ ಬದಲಾಗುವ ಪರೀಕ್ಷಾ ಮಾದರಿ ಇದಾಗಿದ್ದು, ಇದನ್ನು ಎದುರಿಸಲು ವಿದ್ಯಾರ್ಥಿ ಕನಿಷ್ಠ 300 ತಾಸು ಓದಲೇಬೇಕಾಗುತ್ತದೆ. ಕೇವಲ ಇಂಗ್ಲೀಷ ಭಾಷೆಯಲ್ಲಿ ಬರೆಯಬೇಕಾದ ಪರೀಕ್ಷೆ ವಾಣಿಜ್ಯ, ಆರ್ಥಿಕ ವಿಷಯಕ್ಕೆ
ಸಂಬಂಧಿಸಿದ್ದಾಗಿದೆ. ಪರೀಕ್ಷೆ ಬರೆಯಬೇಕಾದರೆ ಒಬ್ಬ ವಿದ್ಯಾರ್ಥಿ 1150 ಡಾಲರ್ ಮೊತ್ತ ತುಂಬಬೇಕಾಗುತ್ತದೆ. ಈ ಪರೀಕ್ಷಾ ತೇರ್ಗಡೆ ಆದವರಿಗೆ ಪ್ರಪಂಚದ ಯಾವುದೇ ದೇಶದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ಸಿಗಲಿದೆ.
ರಾಧಿಕಾ ಹೆಗಡೆ ಜಿಲ್ಲೆಯ ಪ್ರಸಿದ್ಧ ಸಹಕಾರಿ ಹುಳಗೋಳದ ಜಿ.ಎಂ.ಹೆಗಡೆ ಹಾಗೂ ರಾಧಾ ಹೆಗಡೆ ಮೊಮ್ಮಗಳು. ಪೂನಾದ ಕೃಷಿ ತಜ್ಣ ಡಾ. ಸತೀಶ ಹೆಗಡೆ ಹಾಗೂ ಆರತಿ ಹೆಗಡೆ ಪುತ್ರಿ.
ಪ್ರಕೃತಿಯೆಂಬುದು ನಮಗೆ ತಂತಾನೇ ದಕ್ಕಿದ ಬಹುಮಾನ!
ಆತ್ಮೀಯ ಬರಹಗಾರ ರಸ್ಕಿನ್ ಬಾಂಡ್‍ನ ಜೀವನ ದೃಷ್ಟಿ
- ಡಿ. ರಾಮಪ್ಪ ಸಿರಿವಂತೆ, ಅಂಕೋಲಾ
ಬ್ರಿಟಿಷ್ ದಂಪತಿಗಳಿಗೆ ಹುಟ್ಟಿ, ಭಾರತೀಯರಲ್ಲಿ ಭಾರತಿಯನಾಗಿ ಬದುಕುತ್ತಿರುವ ರಸ್ಕಿನ್ ಬಾಂಡ್, ತನ್ನ ಭಾರತೀಯತೆಯ ಬಗ್ಗೆ – ಜನಾಂಗದ ಹೆಸರಿನಿಂದಾಗಲೀ, ಧರ್ಮದ ಹೆಸರಿನಿಂದಾಗಲೀ ತಾನು ಭಾರತೀಯನಾಗಲಿಲ್ಲ; ಬದಲಿಗೆ, ಚರಿತ್ರೆಯ ಮೂಲಕ ಭಾರತೀಯನಾದೆ ಎಂದು – ಎಂದೋ ಹೇಳಿದ ಮಾತು ಇಂದಿನ ಸಂದರ್ಭದಲ್ಲಿ ಎಷ್ಟು ಮಾರ್ಮಿಕ!.
