

ಜಿ.ಜಿ.ಹೆಗಡೆಯವರ ಪುಸ್ತಕ ಬಿಡುಗಡೆ
ಪರಿಸರ ರಕ್ಷಣೆಯ ಜನಜಾಗೃತಿಗೆ ಸಲಹೆ
ಮನುಷ್ಯನ ಅತಿ ಆಸೆಯೇ ಪರಿಸರ ನಾಶಕ್ಕೆ ಕಾರಣವಾಗಿದ್ದು ಪರಿಸರ ಉಳಿಸುವ ಬಗ್ಗೆ ಜನಜಾಗೃತಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದು ಸಾಹಿತಿ ತಮ್ಮಣ್ಣ ಬೀಗಾರ್ ಹೇಳಿದ್ದಾರೆ.
ಅವರು ಇಲ್ಲಿಯ ಟಿ.ಎಂ.ಎಸ್. ನವೀಕೃತ ಸಭಾಭವನದಲ್ಲಿ ನಡೆದ ಜಿ.ಜಿ. ಹೆಗಡೆಯವರ ಪಶ್ಚಿಮಘಟ್ಟಗಳು ಮತ್ತು ಪರಿಸರ ವಿಜ್ಞಾನ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪತ್ರಕರ್ತ ನಾಗರಾಜ್ ಮಾಳ್ಕೋಡು ಪುಸ್ತಕ ಬಿಡುಗಡೆ ಮಾಡಿದರು. ಲಯನ್ಸ್ ಅಧ್ಯಕ್ಷ ಸಿ.ಎಸ್. ಗೌಡರ್ ಜಿ.ಜಿ.ಹೆಗಡೆ ಬಾಳಗೋಡರನ್ನು ಸನ್ಮಾನಿಸಿ, ಅನಿಸಿಕೆ ಹಂಚಿಕೊಂಡರು. ಎ.ಪಿ.ಎಂ.ಸಿ. ಅಧ್ಯಕ್ಷ ಕೆ.ಜಿ.ನಾಗರಾಜ್ ಮತ್ತು ಇತರರು ಮಾತನಾಡಿದರು. ಟಿ.ಎಂ.ಎಸ್. ಅಧ್ಯಕ್ಷ ಆರ್.ಎಂ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು.
ಅನ್ಯ ಅರಣ್ಯಗುತ್ತಿಗೆದಾರರನ್ನು
ಬೆದರಿಸುವ ನಾಗರಾಜ್
ವಿರುದ್ಧ ದೂರು ಸಾಧ್ಯತೆ
ಸಿದ್ಧಾಪುರ ರವೀಂದ್ರನಗರದ ವ್ಯಕ್ತಿಗಳೆಂದು ಗುರುತಿಸಲಾದ ಒಂದು ಗುಂಪು ಅವರಗುಪ್ಪಾದಲ್ಲಿ ಶಿರಸಿಯಅರಣ್ಯಗುತ್ತಿಗೆದಾರರಿಗೆ ಹೊಡೆದ ದುರ್ಘಟನೆ ಶುಕ್ರವಾರ ನಡೆದಿದೆ. ರವೀಂದ್ರನಗರದ ನಾಗರಾಜ್ ಎನ್ನುವ ವ್ಯಕ್ತಿ ಸಿದ್ಧಾಪುರದ ಸುತ್ತ-ಮುತ್ತ ಮಾಲಕಿಅರಣ್ಯ ಮಾರಾಟಮಾಡುವವರಿಗೆ ದುಸ್ವಪ್ನವಾಗಿದ್ದು ಈತ ಸ್ಥಳಿಯ ಅರಣ್ಯಮಾಲಿಕರಿಗೆ ಕಡಿಮೆ ದರದಲ್ಲಿ ಮಾಲಕಿ ಅರಣ್ಯ ಗುತ್ತಿಗೆ ಕೇಳುತಿದ್ದು ಹೊರಊರು,ತಾಲೂಕಿನ ಅರಣ್ಯ ಗುತ್ತಿಗೆದಾರರಿಗೆ ಸ್ಥಳಿಯವಾಗಿ ಗುತ್ತಿಗೆ ಪಡೆಯಲು ವಿರೋಧಿಸುವುದು,ಗುತ್ತಿಗೆ ಪಡೆದವರನ್ನು ಹೆದರಿಸುವುದು ಹಲ್ಲೆಮಾಡುತ್ತಿರುವ ಬಗ್ಗೆ ದೂರುಗಳಿವೆ.

