

ಸಿದ್ಧಾಪುರ ತಾಲೂಕಿನ ಸ.ಪ್ರ.ದ. ಮಹಾವಿದ್ಯಾಲಯ ಬೇಡ್ಕಣಿಯ ವಿದ್ಯಾರ್ಥಿಗಳು ಕ.ವಿ.ವಿ. ಅಂತರ್ ಕಾಲೇಜುಮಟ್ಟದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ವಿಶ್ವವಿದ್ಯಾಲಯಕ್ಕೆ ದ್ವಿತಿಯ ಸ್ಥಾನ ಪಡೆದಿದ್ದಾರೆ.
ಬಿ.ಎ. ಅಂತಿಮ ವರ್ಷದ ಕೌಶಿಕ್ ಗೌಡ ತಂಡದ ಮುಖ್ಯಸ್ಥರಾಗಿದ್ದರು.
ಜೀವನಾಧಾರ ಟ್ರಸ್ಟ್‍ನ ಜಾಕಿ ಡಿಸೋಜಾರಿಗೆ ಆಧಾರಶ್ರೀಪ್ರಶಸ್ತಿ
ಅನಾಥ, ಮಾನಸಿಕ ಅಸ್ವಸ್ಥರ ಮಾನವೀಯತೆಯ ಸೇವೆಗೆ ಸಂದÀ ಗೌರವ
ಆಧಾರ ಶಿಕ್ಷಣ, ಸ್ವ ಉದ್ಯೋಗ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ(ರಿ) ಸಿದ್ದಾಪುರ ಪ್ರತಿವರ್ಷ ಜಿಲ್ಲಾ ಮಟ್ಟದಲ್ಲಿ ನೀಡುವ ದಿ.ಎಂ.ಟಿ.ಕೊಡಿಯ ನೆನಪಿನ ‘ಆಧಾರಶ್ರೀ ಪ್ರಶಸ್ತಿ’ಗೆ ಹೊನ್ನಾವರದ ಜೀವನಾಧಾರ ಟ್ರಸ್ಟ್‍ನ ಜಾಕಿ ಡಿಸೋಜಾರನ್ನು ಆಯ್ಕೆ ಮಾಡಲಾಗಿದೆ. ಫೆ. 10 ರಂದು ನಡೆಯಲಿರುವ ಸಂಸ್ಥೆಯ ‘ಸಂಕಲ್ಪ ದಿನಾಚರಣೆ’ಯಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ತಿಳಿಸಿದ್ದಾರೆ.

