
ಸಿದ್ಧಾಪುರ ರವೀಂದ್ರನಗರದ ವ್ಯಕ್ತಿಗಳೆಂದು ಗುರುತಿಸಲಾದ ಒಂದು ಗುಂಪು ಅವರಗುಪ್ಪಾದಲ್ಲಿ ಶಿರಸಿಯಅರಣ್ಯಗುತ್ತಿಗೆದಾರರಿಗೆ ಹೊಡೆದ ದುರ್ಘಟನೆ ಶುಕ್ರವಾರ ನಡೆದಿದೆ. ರವೀಂದ್ರನಗರದ ನಾಗರಾಜ್ ಎನ್ನುವ ವ್ಯಕ್ತಿ ಸಿದ್ಧಾಪುರದ ಸುತ್ತ-ಮುತ್ತ ಮಾಲಕಿಅರಣ್ಯ ಮಾರಾಟಮಾಡುವವರಿಗೆ ದುಸ್ವಪ್ನವಾಗಿದ್ದು ಈತ ಸ್ಥಳಿಯ ಅರಣ್ಯಮಾಲಿಕರಿಗೆ ಕಡಿಮೆ ದರದಲ್ಲಿ ಮಾಲಕಿ ಅರಣ್ಯ ಗುತ್ತಿಗೆ ಕೇಳುತಿದ್ದು ಹೊರಊರು,ತಾಲೂಕಿನ ಅರಣ್ಯ ಗುತ್ತಿಗೆದಾರರಿಗೆ ಸ್ಥಳಿಯವಾಗಿ ಗುತ್ತಿಗೆ ಪಡೆಯಲು ವಿರೋಧಿಸುವುದು,ಗುತ್ತಿಗೆ ಪಡೆದವರನ್ನು ಹೆದರಿಸುವುದು ಹಲ್ಲೆಮಾಡುತ್ತಿರುವ ಬಗ್ಗೆ ದೂರುಗಳಿವೆ.
ಇಲ್ಲಿ ಕೂಡಾ ಈ ನಾಗರಾಜ ಹೊರ ಊರಿನ ಮಾಲಕಿ ಅರಣ್ಯ ಗುತ್ತಿಗೆದಾರರಿಗೆ ಧಮಕಿ ಹಾಕಿದ ಬಗ್ಗೆ ಸ್ಥಳಿಯರು ದೂರಿದ್ದಾರೆ. ನಂತರ ಚಿಕ್ಕ ಗಲಾಟೆಯಾಗಿದ್ದು ಇದೇ ನಾಗರಾಜ್ ರವಿಂದ್ರನಗರದ ಕೆಲವು ಪುಂಡರನ್ನು ಕಟ್ಟಿಕೊಂಡು ಶಿರಸಿ ಅರಣ್ಯ ಗುತ್ತಿಗೆದಾರರಿಗೆ ಥಳಿಸಿದ್ದಾನೆ. ಹೀಗೆ ಥಳಿತಕ್ಕೆ ಸಿಕ್ಕ ವ್ಯಕ್ತಿಗಳು ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ರಾಜಕೀಯ ಪಕ್ಷವೊಂದರ ಹೆಸರು ಹೇಳಿಕೊಂಡು ಅಧಿಕಾರಿಗಳು, ಅನ್ಯ ಗುತ್ತಿಗೆದಾರರನ್ನು ಬೆದರಿಸುತ್ತಿರುವ ಈ ನಾಗರಾಜ್ ಮೇಲೆ ಪ್ರಕರಣ ದಾಖಲಿಸಲು ಮುಂದಾಗಿರುವ ಬಗ್ಗೆ ಸಮಾಜಮುಖಿಗೆ ಖಚಿತಮಾಹಿತಿ ದೊರೆತಿದೆ.
ಕೆಲವು ವರ್ಷಗಳಿಂದ ಶಾಂತವಾಗಿದ್ದ ಸಿದ್ಧಾಪುರದಲ್ಲಿ ರವೀಂದ್ರನಗರದ ಕೆಲವು ವ್ಯಕ್ತಿಗಳು ಗೂಂಡಾವರ್ತನೆ ಮಾಡುತಿದ್ದು ಪೊಲೀಸರನ್ನು ಹೊಡೆದಿದ್ದು ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಈ ಪ್ರದೇಶದ ಕೆಲವು ಪುಂಡರ ಮೇಲೆ ಆರೋಪಗಳಿವೆ. ಈ ನಾಗರಾಜ್ ಮತ್ತವರ ಸಹಚರರು ಅರಣ್ಯ ಇಲಾಖೆ ಸೇರಿದಂತೆ ಸ್ಥಳಿಯ ಅಧಿಕಾರಿಗಳು, ರಾಜಕಾರಣಿಗಳ ನೆರವಿನಿಂದಲೇ ಈ ಪುಂಡಾಟ ಮಾಡುತ್ತಿರುವ ಬಗ್ಗೆ ಸ್ಥಳಿಯರು ಆಕ್ಷೇಪಿಸಿದ್ದಾರೆ.
