

ಉತ್ತರಕನ್ನಡದ ಸಂಸದ ಮಾಜಿ ಸಚಿವ ಅನಂತಕುಮಾರ ಹೆಗಡೆ ಉಸುರವಳ್ಳಿಯಂತೆ ವರ್ತಿಸುವುದು, ಮಾತನಾಡುವುದು ಅವರ ಲಾಗಾಯ್ತಿನ ಚಾಳಿ.
ಇದೇ ಮನುಷ್ಯ ಕೆಲವು ತಿಂಗಳುಗಳ ಹಿಂದೆ ಗಾಂಧಿ ಪರವಾಗಿ ಬಿ.ಜೆ.ಪಿ. ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಂಧಿ ಪರವಾಗಿ ಮಾತನಾಡಿ ನಾಟಕಮಾಡಿದ್ದ
ಹೀಗೆ ಗಾಂಧಿ ಮಹಾತ್ಮನನ್ನು ರಾಜಕೀಯ ಲಾಭಕ್ಕಾಗಿ ಇವರು ಹೊಗಳಿದ ಹಿಂದೆಮುಂದೆ ಅವರು ಗಾಂಧಿಯನ್ನು ತೆಗಳಿದ ಸಂದರ್ಭಗಳ್ಯಾವುವು ಎಂಬುದನ್ನು ಅರಿಯಬೇಕು.
ಬ್ರಾಹ್ಮಣರ ಸಮ್ಮೇಳನ,ಬ್ರಾಹ್ಮಣರು, ಬ್ರಾಹ್ಮಣ್ಯದ ಪೋಶಕ ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳಲ್ಲಿ ಮತಿವಿಕಲನಂತೆ ಅರಚಿ ತನ್ನ ಬ್ರಾಹ್ಮಣಿಕೆಯ ಹುಚ್ಚುತನ ಪ್ರದರ್ಶಿಸುವ ಈ ವೈದಿಕವೈರಸ್ ಹಿಂದುಳಿದವರು, ದಲಿತರಾದ ಭಾರತೀಯ ಬಹುಸಂಖ್ಯಾತರೆದುರು ಮತಾಂಧತೆಯ ಹಿಂದುತ್ವದ ಭಾಷಣ ಮಾಡುತ್ತಾರೆ.
ಉತ್ತರಕನ್ನಡದಲ್ಲಿ ಮತಾಂಧವೈದಿಕತೆಯನ್ನು ಬೆಂಬಲಿಸುವ ಕುತಂತ್ರಿಗಳನ್ನು ಬಿಟ್ಟರೆ ಈ ಉತ್ತರಕುಮಾರನ ಅವಾಂತರಗಳು, ಹುಚ್ಚುತನದ ಹೇಳಿಕೆಗಳನ್ನು ಉಪೇಕ್ಷಿಸುವವರೆ ಹೆಚ್ಚು, ಈ ಉಪೇಕ್ಷೆಯಲ್ಲಿ ಕೆಲವು ಬಾರಿ ಈ ವಿವೇಕಶೂನ್ಯನನ್ನು ನಿರ್ಲಕ್ಷಿಸುವುದಿರಬಹುದು ಆದರೆ ಅನೇಕಬಾರಿ ಈತನ ಹುಚ್ಚುತನಗಳನ್ನು ಉಪೇಕ್ಷಿಸಿದಂತೆ ಮಾಡಿ ಈತನ ಮಂಗಾಟಕ್ಕೆ ಪರೋಕ್ಷವಾಗಿ ಬೆಂಬಲಿಸುವ ಕುತಂತ್ರಗಳೂ ನಡೆಯುವುದುಂಟು.
ಅನಂತಕುಮಾರ ಹೆಗಡೆ ಕಾಂಗ್ರೆಸ್‍ನಿಂದಿಸುವುದು, ಜಾತ್ಯಾತೀತರು, ಪ್ರಗತಿಪರರು, ಧರ್ಮನಿರಪೇಕ್ಷರನ್ನು ದೂಷಿಸುವುದು ಸರ್ವೇಸಾಮಾನ್ಯ. ಆದರೆ ಇವರ ನಡೆ ನುಡಿಗಳನ್ನು ನೋಡಿದರೆ ಇವರ ಆಶಾಢಭೂತಿತನ, ಕಪಟತನ ಅರ್ಥವಾಗುತ್ತದೆ.
ಹಿಂದೂ- ಹಿಂದುತ್ವದ ಹೆಸರಲ್ಲಿ ಬಹುಸಂಖ್ಯಾತರಿಗೆ ಮಂಕುಬೂದಿ ಎರಚಿ ವೈದಿಕವೈರಸ್ ಬೆಳೆಸುತ್ತಿರುವ ಇವರು ಇವರ ಕ್ಷೇತ್ರದಲ್ಲಿ ಜಿಲ್ಲೆಯ ಬಹುಸಂಖ್ಯಾತರಿಗೆ ಮಾಡಿದ ಅನುಕೂಲ, ಒಳ್ಳೆಯದನ್ನು ಮಾಡಿದ್ದನ್ನು ಹುಡುಕಲೂ ಸಾಧ್ಯವಿಲ್ಲ.
ಇವರು ಜನಪ್ರತಿನಿಧಿಯಾಗಿ ಜಾತಿ-ಮತದ ಅವಿವೇಕ, ಅಪದ್ಧವನ್ನು ಹೇಗೆ ಪೋಶಿಸುತ್ತಾರೆ ಎನ್ನುವುದಕ್ಕೆ ಇವರ ಸುಧೀರ್ಘ ಅವಧಿಯಲ್ಲಿ ಕೆನರಾ ಕ್ಷೇತ್ರ, ಉತ್ತರಕನ್ನಡ ಜಿಲ್ಲೆಯಲ್ಲಿ ಇವರು ಮಂಜೂರು ಮಾಡಿರುವ ರಸ್ತೆಗಳು, ಇವರ ಆದೇಶದ ಪ್ರಕಾರದ ನಾನಾ ಇಲಾಖೆಗಳಲ್ಲಾದ ಫಲಾನುಭವಿಗಳ ಪಟ್ಟಿ ತೆಗೆದರೆ ಈವರ ಹಿಂದುತ್ವ-ಧರ್ಮಾಂಧತೆಯ ಹೂರಣ ಹೊರಬೀಳುತ್ತದೆ.
ಕಾಂಗ್ರೆಸ್ ನಲ್ಲಿರುವ ಮೃಧು ಹಿಂದುತ್ವವಾದಿಗಳು, ವೈದಿಕ ಆಶಾಢಭೂತಿಗಳ ನೆರವಿನಿಂದಲೇ ಆಯ್ಕೆಯಾಗುವ ಇವರು ಈವರೆಗೆ ಕ್ಷೇತ್ರ-ಜಿಲ್ಲೆಗೆ ಮಾಡಿದ ಕೆಲಸಗಳೇನೂ ಇಲ್ಲ.
ನೆರೆ ಹೊರೆಯ ಜಿಲ್ಲೆಗಳಲ್ಲಿ ಜನಪ್ರತಿನಿಧಿಗಳಾದವರು ಕೆಲಸ,ಹೋರಾಟಗಳಿಂದ ಹೆಸರು ಮಾಡಿದರೆ ಇವರು ಹಾರಾಟ, ಅವಿವೇಕದ ಮಾತು ವರ್ತನೆಗಳಿಂದ ಸುದ್ದಿಯಾಗುತ್ತಾರೆ.
ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತರು, ಅವರ ಸಮಸ್ಯೆಗಳಾದ ಅರಣ್ಯ ಅತಿಕ್ರಮಣ, ನಿರುದ್ಯೋಗ, ಉದ್ಯೋಗಕ್ಕಾಗಿ ವಲಸೆ ,ಮೂಲಭೂತ ಸೌಲಭ್ಯಗಳ ಕೊರತೆ ಇವುಗಳ ಬಗ್ಗೆ ಎಂದೂ ಮಾತನಾಡದ ಈ ಸಂಘಿ ಸೊಪ್ಪಿನಬೆಟ್ಟದ ಹಕ್ಕು ಕೊಡಿಸಲು ಊಟಿಯಲ್ಲಿ ಸಭೆ ನಡೆಸುತ್ತಾರೆ!.
ಉತ್ತರಕನ್ನಡಜಿಲ್ಲೆಯಲ್ಲಿ ಬಹುಸಂಖ್ಯಾತರು ಅರಣ್ಯ ಅತಿಕ್ರಮಣ ಮಾನ್ಯತೆ ಬಗ್ಗೆ ಕೇಳಿದರೆ ಇವರು ಸ್ವಜಾತಿಯವರು, ಪಕ್ಷದವರೊಂದಿಗೆ ಸೇರಿಕೊಂಡು ಸೊಪ್ಪಿನ ಬೆಟ್ಟದ ಹಕ್ಕುಪತ್ರಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುತ್ತಾರೆ.
ಮೂರ್ಖರು, ಅವಿವೇಕಿಗಳಾದ ಕೆಲವು ಹಿಂದುಳಿದ ವರ್ಗಗಳ ಯುವಕರು ಇವರೊಂದಿಗೆ ಧರ್ಮಧಾರಿತ ಸಂಘರ್ಷಗಳಲ್ಲಿ ಜೈಲು ಸೇರಿದರೆ ಇವರ ಮೇಲ್ವರ್ಗದ ಯುವಕರು ಶಿಕ್ಷಣ, ಉದ್ಯಮ, ಕೃಷಿಯೆಂದು ಆರ್ಥಿಕ ಅನುಕೂಲದ ಬಗ್ಗೆ ಜಾಗೃತಿ ವಹಿಸುತ್ತಾರೆ. ಗಾಂಧಿ ನಿಂದಿಸುವುದು, ಮುಸ್ಲಿಂರನ್ನು ದೂಷಿಸುವುದು ಇವರ ದುಷ್ಟ ಪರಿವಾರದ ಕಾರ್ಯಸೂಚಿಗಳು.
ಒಬ್ಬ ಜನಪ್ರತಿನಿಧಿಯಾಗಿ ಅವರ ಜೀವಮಾನದಲ್ಲಿ ಪ್ರಗತಿ, ತನ್ನಿಂದಾದ ಸಾಧನೆಗಳ ಬಗ್ಗೆ ಮಾತನಾಡುವ ಯೋಗ್ಯತೆ, ಅರ್ಹತೆ ಇಲ್ಲದ ಇವರು ಪ್ರಚಾರಕ್ಕಾಗಿ ಹುಚ್ಚನಂತೆ ಬೊಗಳುವುದು ಮಾಮೂಲಿ. ಉತ್ತರಕನ್ನಡ ಜಿಲ್ಲೆಯಲ್ಲಿ ಮೀನುಗಾರರು, ಹಾಲಕ್ಕಿ ಒಕ್ಕಲಿಗರು, ಮರಾಠಿಗರು ಸೇರಿದಂತೆ ಅನೇಕ ದಲಿತ ಗುಂಪುಗಳು, ಬುಡಕಟ್ಟುಗಳು ತಮ್ಮ ನೆಲ-ನೆಲೆಗಾಗಿ ಹೋರಾಡುತಿದ್ದಾರೆ. ಇಂಥ ಅನಿವಾರ್ಯತೆಯ ಸಂದರ್ಭ, ಬಹುಜನರ ತೊಂದರೆಗಳ ಬಗ್ಗೆ ಜಾಣಕುರುಡುತನ ಪ್ರದರ್ಶಿಸುವ ಇವರು ವೇದಿಕೆಯ ಮೇಲೆ ಹುಲಿ. ಅದರಲ್ಲೂ ಬ್ರಾಹ್ಮಣರ ಸಮಾವೇಶಗಳು, ಮತಾಂಧ ಸಂಘಟನೆಗಳ ಸಭೆಗಳಲ್ಲಿ ಮತಿಗೆಟ್ಟವನಂತೆ ಅರಚುವ ಇವರ ಬಂಡವಾಳವೆಂದರೆ ಸುಳ್ಳು ಮತ್ತು ನಾಟಕ.
ಬಿ.ಜೆ.ಪಿ. ಕೂಡಾ ಕೊಲೆಗಡುಕರಾದ ಇಂಥವರಿಗೆ ಅವಕಾಶ ಕೊಟ್ಟು ಮುಜುಗರ ಅನುಭವಿಸುತ್ತಿದೆ. ಬಿ.ಜೆ.ಪಿ.ಯಲ್ಲಿ ಕೂಡ ಅವಕಾಶ, ಸ್ಥಾನಮಾನಗಳ ಸ್ಫರ್ಧೆಯಲ್ಲಿ ಎಲ್ಲವರಿಂದಲೂ ಇಕ್ಕಿಸಿಕೊಂಡು ಮಂತ್ರಿ ಪದವಿಯನ್ನೂ ಕಳೆದುಕೊಂಡು ಹುಚ್ಚನಂತೆ ಮತಾಂಧನಾಗಿ ವರ್ತಿಸುವ ಇವರ ಅರಚುವರೂಢಿಕೂಡಾ ನಾಟಕ ಎನ್ನುವುದು ಇವರ ಆಪ್ತರು, ಮಾಜಿ ಹಿತೈಶಿಗಳಿಗೆ ತಿಳಿದಿರುವ ಗುಟ್ಟು.
ಆರುತಿಂಗಳಿಗೊಮ್ಮೆ ಹುಚ್ಚುಚ್ಚಾಗಿ ಮಾತನಾಡಿ ತನ್ನ ಜೀವಂತಿಕೆ ಸಾಬೀತುಮಾಡಿಕೊಳ್ಳುವ ದುರ್ಗತಿ ತಲುಪಿರುವ ಇವರಿಗೆ ಜನ ಮತಕೊಟ್ಟು ಗೆಲ್ಲಿಸುವ ಹಿಂದೆ ವೈದಿಕತೆಯ ಕಪಟತನ ಕೆಲಸಮಾಡುತ್ತಿರುವುದು ಬಹಿರಂಗ ಸತ್ಯ.
ಪಕ್ಷ-ಜನರು, ಸಮಾಜದಿಂದ ಉಗಿಸಿಕೊಳ್ಳುತ್ತಿರುವ ಇವರ ವರ್ತನೆಯನ್ನು ಸಜ್ಜನರ್ಯಾರೂ ಒಪ್ಪಲು ಸಾಧ್ಯವಿಲ್ಲ. ಆದರೂ ವರ್ಷಕ್ಕೆರಡು ಬಾರಿ ಇವರ ಹುಚ್ಚುತನದ ಹೇಳಿಕೆಗಳ ಹಿಂದೆ ಇವರನ್ನು ಬೆಂಬಲಿಸುವ ದುಷ್ಟ ಪರಿವಾರದ ಅವಿವೇಕದ ಬಗ್ಗೆ ಜನ ಯೋಚಿಸಬೇಕಿದೆ. 25 ವರ್ಷಗಳ ಸಾಧನೆಯನ್ನು ಬದುಕಿನ 25 ನಿಮಿಷಗಳಲ್ಲೂ ಹೇಳಿಕೊಳ್ಳಲು ಸಾಧ್ಯವಿಲ್ಲದ ಇವರು ಗಾಂಧಿ,ನೆಹರು,ಜಾತ್ಯಾತೀತರು, ಪ್ರಗತಿಪರರ ಬಗ್ಗೆ ಮಾತನಾಡುವ ಹಿಂದೆ ಇವರ ಅನಕ್ಷರತೆ, ಅವಿವೇಕ, ವಲಸೆಕುತಂತ್ರಗಳ ಅನೇಕ ಹೀನಗುಣಗಳಿರುವುದು ವಾಸ್ತವ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
