
ಸ್ವಾತಂತ್ರ್ಯ ಹೋರಾಟ ಮತ್ತು ಗಾಂಧಿ ನಿಂದನೆ ಮಾಡಿದ ಸಂಸದ ಅನಂತಕುಮಾರ ಹೆಗಡೆ ಮತಾಂಧ ನಡವಳಿಕೆ ವಿರೋಧಿಸಿ ತಾಲೂಕು, ಜಿಲ್ಲೆ, ರಾಜ್ಯದಿಂದ ರಾಷ್ಟ್ರಮಟ್ಟದವರೆಗೆ ವ್ಯಾಪಕ ವಿರೋಧ ವ್ಯಕ್ತವಾಗ
ಶಿರಸಿಯಲ್ಲಿ ಪ್ರತಿಭಟನೆ ಮಾಡಿದ ಜಿಲ್ಲಾ ಕಾಂಗ್ರೆಸ್ ನಗರದ ಮಾರುಕಟ್ಟೆಯ ಗಾಂಧಿ ಪ್ರತಿಮೆ ಎದುರು ಸಾಂಕೇತಿಕ ಧರಣಿ ನಡೆಸಿದೆ.ಅನಂತಕುಮಾರ ಹೆಗಡೆಯವರನ್ನು ಸಂಸದ ಸ್ಥಾನದಿಂದ ವಜಾಮಾಡಲು ಆಗ್ರಹಿಸಿ ಲೋಕಸಭೆಯ ಸ್ಪೀಕರ್ ರಿಗೆ ಮನವಿ ಮಾಡಿದ್ದರೆ. ಸ್ವಯಂ ಬಿ.ಜೆ.ಪಿ. ಪಕ್ಷದ ಪ್ರಮುಖರೇ ಈ ಅವಿವೇಕಿಯ ಬಾಯಿ ಮುಚ್ಚಿಸುವಂತೆ ತಮ್ಮ ಪಕ್ಷದ ವರಿಷ್ಠರನ್ನು ಆಗ್ರಹಿಸಿದ್ದಾರೆ.
ಅನಂತ ಹೆಗಡೆಗೆ ಕ್ಷಮೆಯಾಚಿಸಲು ಪಕ್ಷದ ಆದೇಶ
ಉತ್ತರಕನ್ನಡದ ಸಂಸದ ಮಾಜಿ ಸಚಿವ ಅನಂತಕುಮಾರ ಹೆಗಡೆ ಉಸುರವಳ್ಳಿಯಂತೆ ವರ್ತಿಸುವುದು, ಮಾತನಾಡುವುದು ಅವರ ಲಾಗಾಯ್ತಿನ ಚಾಳಿ.
ಇದೇ ಮನುಷ್ಯ ಕೆಲವು ತಿಂಗಳುಗಳ ಹಿಂದೆ ಗಾಂಧಿ ಪರವಾಗಿ ಬಿ.ಜೆ.ಪಿ. ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಂಧಿ ಪರವಾಗಿ ಮಾತನಾಡಿ ನಾಟಕಮಾಡಿದ.್ದ
ಹೀಗೆ ಗಾಂಧಿ ಮಹಾತ್ಮನನ್ನು ರಾಜಕೀಯ ಲಾಭಕ್ಕಾಗಿ ಇವರು ಹೊಗಳಿದ ಹಿಂದೆಮುಂದೆ ಅವರು ಗಾಂಧಿಯನ್ನು ತೆಗಳಿದ ಸಂದರ್ಭಗಳ್ಯಾವುವು ಎಂಬುದನ್ನು ಅರಿಯಬೇಕು.
ಬ್ರಾಹ್ಮಣರ ಸಮ್ಮೇಳನ,ಬ್ರಾಹ್ಮಣರು, ಬ್ರಾಹ್ಮಣ್ಯದ ಪೋಶಕ ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳಲ್ಲಿ ಮತಿವಿಕಲನಂತೆ ಅರಚಿ ತನ್ನ ಬ್ರಾಹ್ಮಣಿಕೆಯ ಹುಚ್ಚುತನ ಪ್ರದರ್ಶಿಸುವ ಈ ವೈದಿಕವೈರಸ್ ಹಿಂದುಳಿದವರು, ದಲಿತರಾದ ಭಾರತೀಯ ಬಹುಸಂಖ್ಯಾತರೆದುರು ಮತಾಂಧತೆಯ ಹಿಂದುತ್ವದ ಭಾಷಣ ಮಾಡುತ್ತಾರೆ.
ಉತ್ತರಕನ್ನಡದಲ್ಲಿ ಮತಾಂಧವೈದಿಕತೆಯನ್ನು ಬೆಂಬಲಿಸುವ ಕುತಂತ್ರಿಗಳನ್ನು ಬಿಟ್ಟರೆ ಈ ಉತ್ತರಕುಮಾರನ ಅವಾಂತರಗಳು, ಹುಚ್ಚುತನದ ಹೇಳಿಕೆಗಳನ್ನು ಉಪೇಕ್ಷಿಸುವವರೆ ಹೆಚ್ಚು, ಈ ಉಪೇಕ್ಷೆಯಲ್ಲಿ ಕೆಲವು ಬಾರಿ ಈ ವಿವೇಕಶೂನ್ಯನನ್ನು ನಿರ್ಲಕ್ಷಿಸುವುದಿರಬಹುದು ಆದರೆ ಅನೇಕಬಾರಿ ಈತನ ಹುಚ್ಚುತನಗಳನ್ನು ಉಪೇಕ್ಷಿಸಿದಂತೆ ಮಾಡಿ ಈತನ ಮಂಗಾಟಕ್ಕೆ ಪರೋಕ್ಷವಾಗಿ ಬೆಂಬಲಿಸುವ ಕುತಂತ್ರಗಳೂ ನಡೆಯುವುದುಂಟು.
ಅನಂತಕುಮಾರ ಹೆಗಡೆ ಕಾಂಗ್ರೆಸ್‍ನಿಂದಿಸುವುದು, ಜಾತ್ಯಾತೀತರು, ಪ್ರಗತಿಪರರು, ಧರ್ಮನಿರಪೇಕ್ಷರನ್ನು ದೂಷಿಸುವುದು ಸರ್ವೇಸಾಮಾನ್ಯ. ಆದರೆ ಇವರ ನಡೆ ನುಡಿಗಳನ್ನು ನೋಡಿದರೆ ಇವರ ಆಶಾಢಭೂತಿತನ, ಕಪಟತನ ಅರ್ಥವಾಗುತ್ತದೆ.


