
ಕಳೆದ ಒಂದು ವಾರದಿಂದ ನಡೆದ ತಾಲೂಕಿನ ಬಿಳಗಿ ಶ್ರೀಮಾರಿಕಾಂಬಾ ಜಾತ್ರಾ ಮಹೋತ್ಸವ ಇಂದು ವಿದ್ಯುಕ್ತವಾಗಿ ಮುಕ್ತಾಯವಾಯಿತು.
ವಾಹನ ನಿಲುಗಡೆ ವ್ಯವಸ್ಥೆ,ಪ್ಲಾಸ್ಟಿಕ್ ಮುಕ್ತ ಉತ್ಸವಗಳಿಂದಾಗಿ ಸಾರ್ವಜನಿಕರಿಗೆ ತುಸು ಕಿರಿಕಿರಿಯಾದರೂ ಸ್ವಚ್ಛತೆ,ನಿರ್ವಹಣೆಗಳ ಹಿನ್ನೆಲೆಯಲ್ಲಿ ಜಾತ್ರೆಯ ಯಶಸ್ಸು ಅಭೂತಪೂರ್ವ ಎನ್ನುವಂತಿತ್ತು.
ಶನಿವಾರ,ರವಿವಾರಗಳಂದು ಹೆಚ್ಚಿನ ಜನರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ವ್ಯಾಪಾರ,ವ್ಯವಹಾರ, ಗಳಿಕೆ ಹಿನ್ನೆಲೆಯಲ್ಲಿ ಜಾತ್ರೆ ಯಶಸ್ವಿ ಎನ್ನಲಾಗಿದೆ. ಸ್ಥಳಿಯರು,ಪೊಲೀಸರು ಮತ್ತು ಸಂಘಟಕರ ಪ್ರಯತ್ನಗಳಿಂದಾಗಿ ಜಾತ್ರೆಯಲ್ಲಿ ಅಹಿತಕರ ಘಟನೆಗಳಾಗಿಲ್ಲ ಎನ್ನುವ ಮೆಚ್ಚುಗೆ ವ್ಯಕ್ತವಾಗಿದೆ. ಕಳೆದ ಮಂಗಳವಾರದ ಮಧ್ಯರಾತ್ರಿ ಆಚರಣೆಗಳ ನಂತರ ಹಿಂದಿನ ಬುಧವಾರ ಬೆಳಿಗ್ಗೆ ಜಾತ್ರೆಯ ಗದ್ದುಗೆಗೆ ಬಂದಿದ್ದ ಮಾರಿಕಾಂಬೆ ಈ ಬುಧವಾರದ ಮುಂಜಾನೆವೇಳೆಗೆ ವಿಸರ್ಜನೆಯಾಗಿದ್ದಾಳೆ.


