
ಅಕ್ರಮ ಬಂದೂಕು ಹೊಂದಿದ್ದ ಎನ್ನುವ ಆರೋಪದ ಮೇಲೆ ತಾಲೂಕಿನ ಶಿವಳಮನೆ ಗ್ರಾಮಗ ಕಲಗದ್ದೆಯ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಜಾನ್ಮನೆ ವಲಯದ ವಲಯ ಅರಣ್ಯಾಧಿಕಾರಿ ರಘು ದೂರಿನ ಅನ್ವಯ ಬಂಧಿತನಾದ ಆರೋಪಿ ನಾಗು ಬೀರಾ ಗೌಡ ಎನ್ನಲಾಗಿದೆ. ನಾಡ ಬಂದೂಕಿನ ನೆರವಿನಿಂದ ಪ್ರಾಣಿಬೇಟೆಗೆ ಯತ್ನಿಸುತಿದ್ದ ಎನ್ನುವ ಆರೋಪದ ಮೇಲೆ ಮಂಗಳವಾರ ಇವರ ಬಂಧನವಾಗಿದೆ.
ವಿದ್ಯುತ್ ಕಳ್ಳತನದ ಆರೋಪ ಎರಡುಜನರ ಬಂಧನ
ವಿದ್ಯುತ್ ಕಳ್ಳತನದ ಆರೋಪದ ಮೇಲೆ ಹೆಸ್ಕಾಂ ವಿಜಲೆನ್ಸ್ ಪೊಲೀಸ್ ಕಾರವಾರ ಠಾಣೆಯ ಅಧಿಕಾರಿಗಳು ಬುಧವಾರ ಸಿದ್ಧಾಪುರದ ಎರಡು ಜನರನ್ನು ಬಂಧಿಸಿನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.
