ನಿಮ್ಮ ಮೌನ ನಮ್ಮನ್ನು ಕೆಣಕಿದೆ
-ಮಾರ್ಗರೇಟ್ ಆಳ್ವ
ಬೀದರ್ ನ ಶಾಹೀನ್ ಶಾಲೆಯಲ್ಲಿ ಸಿ.ಎ.ಎ. ವಿರುದ್ಧ ನಾಟಕ ಪ್ರದರ್ಶಿಸಿ ಸರ್ಕಾರದ ಪೊಲೀಸ್ ಕ್ರಮಕ್ಕೆ ತುತ್ತಾಗಿರುವ ಘಟನೆ ಬಗ್ಗೆ ಮೌನ ವಹಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಬಗ್ಗೆ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಬೇಸರಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು ಶಾಲೆಯಲ್ಲಿ ಸಿ.ಎ.ಎ. ವಿರೋಧಿ ನಾಟಕ ಪ್ರದರ್ಶನದ ವಿರುದ್ಧ ಕ್ರಮಕೈಗೊಂಡಿರುವ ಪೊಲೀಸರ ನಡೆ ಅಮಾನವೀಯ ಅದರ ಬಗ್ಗೆ ಮೌನ ವಹಿಸಿರುವ ನಿಮ್ಮ ವರ್ತನೆ ಖಂಡನಾರ್ಹ. ಜನವಿರೋಧದ ಮಸೂದೆ ವಿರುದ್ಧ ಅಭಿವ್ಯಕ್ತಿ ಮಾಡುವುದನ್ನು ಸಹಿಸಿಕೊಳ್ಳದ ನಿಮ್ಮ ಸರ್ಕಾರದ ನಡೆ ಜನವಿರೋಧಿಯಾಗಿದೆ.
ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿ ಮತ್ತು ಶಿಕ್ಷಕರ ಮೇಲೆ ನಿಮ್ಮ ಸರ್ಕಾರ ಬ್ರಹ್ಮಾಸ್ರ್ತ ಪ್ರಯೋಗಿಸುತಿದ್ದಾಗ ಪ್ರತಿಕ್ರೀಯಿಸದ ನಿಮ್ಮ ನಡೆಯನ್ನು ಏನೆಂದು ತಿಳಿಯಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಿ ಅದನ್ನು ನೋಡಿಯೂ ನೋಡದಂತೆ, ಕೇಳಿಯೂ ಕೇಳದಂತೆ ಇರುವ ನಿಮ್ಮ ಜಾಣ ಮೌನ ನಮ್ಮನ್ನು ಕೆಣಕಿದೆ. ಅಸಹಾಯಕರು,ಅಮಾಯಕರ ಮೇಲೆ ಪ್ರಭುತ್ವದ ಕ್ರೌರ್ಯವನ್ನು ನಾವು ನೋಡಲು ಬದುಕಿದ್ದೇವಾ ಇಲ್ಲಿ. ಇಂಥ ವರ್ತನೆ ಯಾವುದೇ ಸರ್ಕಾರ ಅದರ ಮುಖ್ಯಸ್ಥನಿಗೆ ಗೌರವ ತರುವಂಥದ್ದಲ್ಲ ಈ ಬಗ್ಗೆ ನಿಮ್ಮ ಪ್ರತಿಕ್ರೀಯೆಗಾಗಿ ನಾವು ಕಾದಿದ್ದೇವೆ ಎಂದು ಹರಿಹಾಯ್ದಿದ್ದಾರೆ.