
ವಿದ್ಯುತ್ ಕಳ್ಳತನದ ಆರೋಪದ ಮೇಲೆ ಹೆಸ್ಕಾಂ ವಿಜಲೆನ್ಸ್ ಪೊಲೀಸ್ ಕಾರವಾರ ಠಾಣೆಯ ಅಧಿಕಾರಿಗಳು ಬುಧವಾರ ಸಿದ್ಧಾಪುರದ ಎರಡು ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳು ನಾಣಿಕಟ್ಟಾ ಮಂಚಿಕೆಮನೆ ಬಾಲಚಂದ್ರ ಹೆಗಡೆ ಮತ್ತು ಬಾಳೆಕೈನ ರವಿಕುಮಾರ ನಾಯ್ಕ ಎನ್ನುವವರಾಗಿದ್ದು ಇವರಿಂದ 9361 ದಂಡವಸೂಲಿಗೆ ಸೂಚಿಸಲಾಗಿದೆ.
ಖಚಿತ ದೂರಿನ ಆಧಾರದಲ್ಲಿ ವಿಜುಲನ್ಸ್ ಹೆಸ್ಕಾ ಹುಬ್ಬಳ್ಳಿ ಠಾಣೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿ.ಆಯ್. ಶಿವಕುಮಾರ ತಂಡ ಕಾರ್ಯನಿರ್ವಹಿಸಿತ್ತು.
