ಸಿದ್ಧಾಪುರ ನಗರದಲ್ಲಿ ಪ್ರಾರಂಭವಾಗಿರುವ ಮೂರು ಮಾಂಸಾಹಾರಿ ಹೋಟೆಲ್ ಗಳು ಸ್ಥಳಿಯರು ಮತ್ತು ಪ್ರವಾಸಿಗರ ಖುಷಿಯನ್ನು ವೃದ್ಧಿಸಿವೆ. ಹೊಸವರ್ಷದಲ್ಲಿ ನಗರದ ಗಾರ್ಡನ್ ವೃತ್ತ ಮತ್ತು ತಿಮ್ಮಪ್ಪ ನಾಯ್ಕ ವೃತ್ತಗಳ ನಡುವೆ ಮದ್ಯದಂಗಡಿಯ ಮೇಲಂತಸ್ತಿನಲ್ಲಿ ಕದಂಬ ಎನ್ನುವ ಮಾಂಸಾಹಾರಿ ಹೋಟೆಲ್ ಪ್ರಾರಂಭವಾಗಿದೆ.
ಈ ಹೋಟೆಲ್ ನ ವಿಶೇಶವೆಂದರೆ ಮಲೆನಾಡ ಕೋಳಿ ಕಜ್ಜಾಯ ಎನ್ನಲಾಗುವ ಹೊಸಕೆರೆ ಕಜ್ಜಾಯ ಮತ್ತು ನಾಟಿಕೋಳಿ ಮಸಾಲಾ.
ಈ ಪ್ರದೇಶದ ನೆಚ್ಚಿನ ಖಾದ್ಯಗಳಾದ ನಾಟಿಕೋಳಿ ಮತ್ತು ಹೊಸಗೆರೆ ಕಜ್ಜಾಯ ಪ್ರತಿ ಮನೆಗಳ ವಿಶೇಶ ಖಾದ್ಯಗಳಾದರೂ ಹೋಟೆಲ್‍ಗಳು ಅಥವಾ ಸಾರ್ವಜನಿಕವಾಗಿ ಇವುಗಳ ತಯಾರಿಕೆ,ಮಾರಾಟ ನಡೆಯುತ್ತಿರಲಿಲ್ಲ.
ಆದರೆ ಈವರ್ಷ ಇಲ್ಲಿಯ ಮಾವಿನಗುಂಡಿಯ ಯುವಕರು ಮಲೆನಾಡಿನ ಕೋಳಿಕಜ್ಜಾಯವನ್ನು ತಯಾರಿಸಿ ಗ್ರಾಹಕರಿಗೆ ನೀಡುವ ಮೂಲಕ ಹೆಸರುಮಾಡುವ ಜೊತೆಗೆ ಕೋಳಿಕಜ್ಜಾಯ ಪ್ರೀಯರನ್ನು ಸಂತೃಪ್ತಿಪಡಿಸಿದ್ದಾರೆ.
ಮಲೆನಾಡಿನ ಥರಾವರಿ ಮಾಂಸಾಹಾರಿ ವೈವಿಧ್ಯಕ್ಕಾಗಿ ಈಗ ಸಿದ್ಧಾಪುರದ ಜನತೆ ಇಲ್ಲಿ ಮುಗಿಬೀಳುತಿದ್ದಾರೆ ಎನ್ನಲಾಗಿದೆ.
ಸಿದ್ಧಾಪುರದ ಮಾಂಸಾಹಾರಿ ಹೋಟೆಲ್ ಗಳಲ್ಲಿ ಮಳವತ್ತಿಗೇಟಿನ ಶಿವಹೋಟೆಲ್ ಮತ್ತು ಶಾಂತಿಸಾಗರ ಹಾಗೂ ಗ್ರೀನ್‍ಲ್ಯಾಂಡ್ ಹೋಟೆಲ್‍ಗಳಿಗೆ ಹೆಚ್ಚಿನ ಬೇಡಿಕೆ.
ಈ ಮಾಂಸಾಹಾರಿ ಹೋಟೆಲ್‍ಗಳೊಂದಿಗೆ ಈಗ ಹೋಟೆಲ್ ಆತಿಥ್ಯಪ್ಯಾಲೇಸ್ ಸ್ಥಳಿಯರು,ಪ್ರವಾಸಿಗರ ನೆಚ್ಚಿನ ಹೋಟೆಲ್ ಆಗಿ ಗಮನಸೆಳೆಯುತ್ತಿದೆ.
ಸಿದ್ಧಾಪುರದ ಮಾಂಸಾಹಾರಿ ಹೋಟೆಲ್ ಗಳಲ್ಲೇ ವಿಶಾಲ, ವೈವಿಧ್ಯ,ವಿಭಿನ್ನತೆಗಳೊಂದಿಗೆ ಗ್ರಾಹಕರಿಗೆ ಇಷ್ಟವಾಗುವಂತೆ ನಾನಾ ವಿಭಾಗಗಳನ್ನು ಮಾಡಲಾಗಿದೆ. ಕೋಲಶಿರ್ಸಿಯ ಸುರೇಶ್ ನಾಯ್ಕ ಮಾಲಕತ್ವದ ಈ ಹೋಟೆಲ್ ಸಿದ್ಧಾಪುರದ ಮೀನು-ಮಾಂಸಾಹಾರಿ ಹೋಟೆಲ್‍ಗಳಲ್ಲೇ ವಿಶಾಲವಾಗಿದ್ದು ಬಹುತೇಕ ಎಲ್ಲಾ ಮೀನು-ಮಾಂಸಾಹಾರಿ ಖಾದ್ಯಗಳನ್ನು ಒದಗಿಸುತ್ತಿದೆ. ವಾಹನನಿಲುಗಡೆ, ವಿಶ್ರಾಂತಿ,ಶೌಚ್ಯಗಳ ಸಕಲ ಅನುಕೂಲಗಳನ್ನಿಟ್ಟಿರುವ ಸುರೇಶ್ ನಾಯ್ಕ ಗ್ರಾಹಕರ ಸೇವೆ,ಸಂತೃಪ್ತಿಯಿಂದ ಹೆಸರುಮಾಡುವ ಧ್ಯೇಯ ಹೊಂದಿದ್ದಾರೆ.
ಇದೇ ತಿಂಗಳಿಂದ ಮರುಪ್ರಾರಂಭವಾಗಲಿದೆ ಗ್ರೀನ್‍ಲ್ಯಾಂಡ್-
ಸಾರಿಗೆ ಸಂಸ್ಥೆ ಬಸ್ ನಿಲ್ಧಾಣದ ಬಳಿ ಕೆಲವು ವರ್ಷಗಳಿಂದ ನಡೆಯುತಿದ್ದ ಗ್ರೀನ್‍ಲ್ಯಾಂಡ್ ಇದೇ ತಿಂಗಳಿಂದ ಜೋಗರಸ್ತೆಯ ಮಿನಿನ್ ವೈನ್ಸ್ ಬಳಿ ಪ್ರಾರಂಭವಾಗಲಿದೆ. ಹಲವು ವಿಭಾಗಗಳ ಅನೇಕರ ನೆಚ್ಚಿನ ಗ್ರೀನ್‍ಲ್ಯಾಂಡ್ ಕೂಡಾ ತಾಲೂಕಿನ ಜನರು ಮತ್ತು ಪ್ರವಾಸಿಗಳ ಆದ್ಯತೆಯ ಹೋಟೆಲ್ ಆಗುವ ನಿರೀಕ್ಷೆಗಳಿವೆ. ಫೆ,10 ರ ಸೋಮವಾರದಿಂದ ಗ್ರೀನ್ ಲ್ಯಾಂಡ್ ಮಿನಿನ್ ವೈನ್ಸ್ ಬಳಿಯ ಜೋಗರಸ್ತೆಯ ಹೊಸ ಕಟ್ಟದಲ್ಲಿ ಶುಭಾರಂಭ ಮಾಡಲಿದೆ.
ಸಾತ್ವಿಕ್‍ಗೆ 9ಕ್ಕೆ ಪ್ರಶಸ್ತಿ ಪ್ರದಾನ
ಸಿದ್ದಾಪುರ:ಫೆ,06- ರಾಮಾಯಣ ಹಾಗೂ ಮಹಾಭಾರತ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಗಮನ ಸೆಳೆದ ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಮತ್ತೀಹಳ್ಳಿಯ ಸಾತ್ವಿಕ್ ಎಸ್.ಹೆಗಡೆ ಅವರಿಗೆ ಪ್ರಕಟವಾದ ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭಾ ಪ್ರಶಸ್ತಿಯನ್ನು ಬನವಾಸಿಯಲ್ಲಿ ಫೆ.9ರಂದು ಬೆಳಿಗ್ಗೆ 9:30ಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಪ್ರದಾನ ಮಾಡಲಿದ್ದಾರೆ.