ಕೇಂದ್ರದ ದೋಷಪೂರಿತ ನೀತಿಗೆ ಸ್ಟೈಪಂಡ್‍ಪರಿಹಾರ
-ಕುಬೇರಪ್ಪ ಉವಾಚ
ಕೇಂದ್ರಸರ್ಕಾರದ ದೋಷಪೂರಿತ ಆರ್ಥಿಕ ನೀತಿಗಳಿಂದ ದೇಶದ ಉದ್ದಿಮೆಗಳು ಮುಚ್ಚುತಿದ್ದು ನಿರುದ್ಯೋಗ ಹೆಚ್ಚುತ್ತಿರುವ ಬಿಕ್ಕಟ್ಟಿನ ಸಮಯದಲ್ಲಿ ಪ್ರಧಾನಿ ಮೋದಿ ಪಕೋಡಮಾರಿ ಎನ್ನುತ್ತಿರುವುದು ಬೇಜವಾಬ್ಧಾರಿಯಪರಮಾವಧಿ ಈ ಬೇಜವಾಬ್ಧಾರಿ, ಯುವಜನವಿರೋಧಿ ನೀತಿಗೆ ವಿರುದ್ಧವಾಗಿ ಕಾಂಗ್ರೆಸ್ ವಿದ್ಯಾವಂತನಿರುದ್ಯೋಗಿಗಳಿಗೆ ಸ್ಟೈಪಂಡ್ ನೀಡಲು ಸಿದ್ಧವಿದೆ ಎಂದು ಕರ್ನಾಟಕ ಪಶ್ಚಿಮಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಬೇರಪ್ಪ ಭರವಸೆ ನೀಡಿದ್ದಾರೆ.
ಸಿದ್ಧಾಪುರ ಎ.ಪಿ.ಎಂ.ಸಿ. ಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿ.ಜೆ.ಪಿ. ಗೆ ದೇಶ ಛಿದ್ರಮಾಡುವುದೇ ಸಿದ್ಧಾಂತ ಕಾಂಗ್ರೆಸ್ ಯಾವ ಸಿದ್ಧಾಂತದ ಪರವಿದೆ, ಅಭಿವೃದ್ಧಿಗೆ ಪ್ರಾಧಾನ್ಯತೆ ಏನು ಎನ್ನುವುದನ್ನು ಕಳೆದ ಎಪ್ಪತ್ತು ವರ್ಷಗಳಲ್ಲಿ ಸಾಧನೆಯಿಂದ ತೋರಿಸಿದೆ. ಸುಳ್ಳು,ವಿಭಜನೆ,ಮತಾಂಧತೆಯ ಅಜೆಂಡಾ ಇರುವ ಪಕ್ಷ ಇತ್ತೀಚಿನ ಎರಡು ಅವಧಿಯಿಂದ ಪಡೆದುಕೊಂಡ ಈ ಕ್ಷೇತ್ರದ ಗೆಲುವನ್ನು ಈ ಬಾರಿ ಕಾಂಗ್ರೆಸ್ ಕೈ ವಶಮಾಡಿಕೊಳ್ಳಲಿದೆ. ಹಲವು ವರ್ಷಗಳಿಂದ ನೇಮಕವಾಗದಿದ್ದ ಅನುದಾನಿತ ಕಾಲೇಜುಗಳ ಉಪನ್ಯಾಸಕರ ಹುದ್ದೆಗಳನ್ನು ಸಿದ್ಧರಾಮಯ್ಯ ಅವಧಿಯಲ್ಲಿ ಭರ್ತಿ ಮಾಡಿದ್ದೇವೆ.ರಾಜ್ಯದ 2ಲಕ್ಷಖಾಲಿ ಹುದ್ದೆಗಳಿಗೆ ನೇಮಕ ಮಾಡಲು ಸರ್ಕಾರಕ್ಕೆ ಒತ್ತಾಯಿಸಿದ್ದೇವೆ. ನಮ್ಮ ಬದ್ಧತೆ, ಸಾಧನೆ ಆಧಾರದಲ್ಲಿ ಶಿಕ್ಷಕರು, ಪದವಿಧರರು ನನ್ನನ್ನು ಈ ಬಾರಿ ಆಯ್ಕೆ ಮಾಡುತ್ತಾರೆ ಎಂದರು.