

ರಾಮಾಯಣ ಹಾಗೂ ಮಹಾಭಾರತ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಗಮನ ಸೆಳೆದ ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಮತ್ತೀಹಳ್ಳಿಯ ಸಾತ್ವಿಕ್ ಎಸ್.ಹೆಗಡೆಗೆ ಪ್ರಕಟವಾದ ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭಾ ಪ್ರಶಸ್ತಿಯನ್ನು ಬನವಾಸಿಯಲ್ಲಿ ಫೆ.9ರಂದು ಬೆಳಿಗ್ಗೆ 9:30ಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಪ್ರದಾನ ಮಾಡಲಿದ್ದಾರೆ.
ಕಾನಸೂರಿನ ಕಾಳಿಕಾಭವಾನಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ತರಗತಿಯಲ್ಲಿ ಹತ್ತನೇ ವರ್ಗದ ವಿದ್ಯಾರ್ಥಿ. ಈ ವಿದ್ಯಾರ್ಥಿ ಸಾಧನೆಗೆ 2018-19ನೇ ಅಸಾಧಾರಣ ಪ್ರಶಸ್ತಿ ಪ್ರಕಟವಾಗಿತ್ತು. ಈತ ಮತ್ತೀಹಳ್ಳಿಯ ಪ್ರಗತಿಪರ ರೈತ ಶ್ರೀಕಾಂತ ಆರ್.ಹೆಗಡೆ ಹಾಗೂ ಸುವರ್ಣಾ ಹೆಗಡೆ ಪುತ್ರ.
ಮೋದಿ ಪಕೋಡಾಕ್ಕೆ ಕಾಂಗ್ರೆಸ್ ಸ್ಟೈಪಂಡ್ ಪರ್ಯಾಯ
ಕೇಂದ್ರದ ದೋಷಪೂರಿತ ನೀತಿಗೆ ಸ್ಟೈಪಂಡ್‍ಪರಿಹಾರ
-ಕುಬೇರಪ್ಪ ಉವಾಚ
ಕೇಂದ್ರಸರ್ಕಾರದ ದೋಷಪೂರಿತ ಆರ್ಥಿಕ ನೀತಿಗಳಿಂದ ದೇಶದ ಉದ್ದಿಮೆಗಳು ಮುಚ್ಚುತಿದ್ದು ನಿರುದ್ಯೋಗ ಹೆಚ್ಚುತ್ತಿರುವ ಬಿಕ್ಕಟ್ಟಿನ ಸಮಯದಲ್ಲಿ ಪ್ರಧಾನಿ ಮೋದಿ ಪಕೋಡಮಾರಿ ಎನ್ನುತ್ತಿರುವುದು ಬೇಜವಾಬ್ಧಾರಿಯಪರಮಾವಧಿ ಈ ಬೇಜವಾಬ್ಧಾರಿ, ಯುವಜನವಿರೋಧಿ ನೀತಿಗೆ ವಿರುದ್ಧವಾಗಿ ಕಾಂಗ್ರೆಸ್ ವಿದ್ಯಾವಂತನಿರುದ್ಯೋಗಿಗಳಿಗೆ ಸ್ಟೈಪಂಡ್ ನೀಡಲು ಸಿದ್ಧವಿದೆ ಎಂದು ಕರ್ನಾಟಕ ಪಶ್ಚಿಮಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಬೇರಪ್ಪ ಭರವಸೆ ನೀಡಿದ್ದಾರೆ.

