

ಹೊನ್ನಾವರದ ಕೆರೆಕೋಣನಲ್ಲಿ ಪ್ರತಿವರ್ಷ ನಡೆಯುವ ಸಹಯಾನ ಸಾಹಿತ್ಯೋತ್ಸವ ನಾಳೆ ರವಿವಾರ ನಡೆಯಲಿದೆ.ಪ್ರತಿವರ್ಷ ಗಣ್ಯರು ಆಗಮಿಸಿ, ವಿಚಾರ ವಿನಿಮಯ ನಡೆಸುವ ಕೆರೆಕೋಣದ ಸಾಹಿತ್ಯೋತ್ಸವ ಕಳೆದ 9 ವರ್ಷಗಳನ್ನು ಪೂರೈಸಿ ಹತ್ತನೇ ವರ್ಷಕ್ಕೆ ಕಾಲಿಟ್ಟಿದೆ. ದಿ. ಆರ್.ವಿ.ಭಂಡಾರಿಯವರ ನೆನಪಿನಲ್ಲಿ ಅವರ ಹಿತೈಶಿಗಳು ಕಟ್ಟಿಕೊಂಡ ಸಹಯಾನ ಒಂದುದಶಕದಿಂದೀಚೆಗೆ ಉಪಯುಕ್ತ ಚಟುವಟಿಕೆಗಳು, ಸಾಹಿತ್ಯಕ,ಸಾಂಸ್ಕøತಿಕ ಚಟುವಟಿಕೆಗಳೊಂದಿಗೆ ಹೆಸರುಮಾಡಿದೆ. ಈ ವರ್ಷ ಸಿನೆಮಾಹೊಸತಲೆಮಾರು ಶೀರ್ಷಿಕೆಯಡಿ ನಡೆಯಲಿರುವ ಒಂದು ದಿನದ ಸಾಹಿತ್ಯೋತ್ಸವದಲ್ಲಿ ನಾಡಿನ ಗಣ್ಯ ಸಾಹಿತಿಗಳು,ಸಿನೆಮಾ ನಿರ್ಧೇಶಕರು ಪಾಲ್ಗೊಳ್ಳಲಿದ್ದಾರೆ. ಈ ಸಮಾರಂಭಕ್ಕೆ ಸರ್ವರನ್ನೂ ಸಂಘಟಕರು ಆಮಂತ್ರಿಸಿದ್ದಾರೆ.
ರೋಸ್ಟರ್ ನಿಯಮ ಉಲ್ಲಂಘನೆ ದೂರು ಬಂದಿಲ್ಲ ಎಂದ ಕುಬೇರಪ್ಪ
ಉತ್ತರಕನ್ನಡ ಜಿಲ್ಲೆಯಲ್ಲಿ ಅನುದಾನಿತ ಪದವಿಮಹಾವಿದ್ಯಾಲಯಗಳು ರೋಸ್ಟರ್ ನಿಯಮ ಉಲ್ಲಂಘಿಸಿ ಅಸಂವಿಧಾನಿಕವಾಗಿ ನಡೆದುಕೊಂಡ ಬಗ್ಗೆ
ಬಾಧಿತರಿಂದ ಈವರೆಗೆ ದೂರು ಬಂದಿಲ್ಲ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಕುಬೇರಪ್ಪ ಹೇಳಿದರು.


