

ಉತ್ತರಕನ್ನಡ ಜಿಲ್ಲೆಯಲ್ಲಿ ಅನುದಾನಿತ ಪದವಿಮಹಾವಿದ್ಯಾಲಯಗಳು ರೋಸ್ಟರ್ ನಿಯಮ ಉಲ್ಲಂಘಿಸಿ ಅಸಂವಿಧಾನಿಕವಾಗಿ ನಡೆದುಕೊಂಡ ಬಗ್ಗೆ
ಬಾಧಿತರಿಂದ ಈವರೆಗೆ ದೂರು ಬಂದಿಲ್ಲ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಕುಬೇರಪ್ಪ ಹೇಳಿದರು.
ಜೂನ್ ನಲ್ಲಿ ನಡೆಯಲಿರುವ ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಶ್ಚಿಮ ಪದವೀಧರ ಕ್ಷೇತ್ರದ 32 ಬ್ಲಾಕ್ ಗಳಲ್ಲಿ ಪ್ರಚಾರ ಮುಗಿಸಿದ್ದೇವೆ. ಉತ್ತರಕನ್ನಡ ಜಿಲ್ಲೆಯ 12 ತಾಲೂಕುಗಳಲ್ಲಿ 15 ಸಾವಿರ ಶಿಕ್ಷಕರು,ಪದವೀಧರರು ನೋಂದಣಿ ಮಾಡಿದ್ದಾರೆ. ಅನುದಾನಿತ ಶಾಲಾ-ಕಾಲೇಜುಗಳ ಪರವಾಗಿ ಕೆಲಸ ಮಾಡಿರುವ ನಮಗೆ ಮತದಾರರು ಆಶೀರ್ವದಿಸಲಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳು ಸರ್ಕಾರದ ರೋಸ್ಟರ್ ನಿಯಮ ಉಲ್ಲಂಘಿಸಿದ್ದರೆ ಅವರ ರಕ್ಷಣೆಗೆ ನಾವು ಬರುವ ಪ್ರಶ್ನೆಯೇ ಇಲ್ಲ ಎಂದು ವಿವರಿಸಿದರು.

