ಪಕ್ಷ, ವ್ಯವಸ್ಥೆ ಬೇರೆ ನಾವೆಲ್ಲಾ ಚಿಕ್ಕವರಾಗಿದ್ದಾಗಿನಿಂದ ನೋಡುತಿದ್ದ ಈ ನಾಮಫಲಕ ನೆಲಕ್ಕುರುಳಿದ ಬಗ್ಗೆ ನಮಗೆ ವಿಶಾದವಿದೆ. ರಾಜಕೀಯ ಪಕ್ಷ, ವ್ಯಕ್ತಿಗಳು ಬಂದು ಹೋಗುತ್ತಾರೆ. ಆದರೆ ಇಂಥ ಐತಿಹಾಸಿಕ ಮಹತ್ವದ ಪಳಯುಳಿಕೆಗಳನ್ನು ಸಂರಕ್ಷಿಸಿ, ಸುಸ್ಥಿತಿಯಲ್ಲಿಡುವ ಸ್ಥಳಿಯ ಆಡಳಿತದ ಜವಾಬ್ಧಾರಿ ಇಂಥ ಸಮಯದಲ್ಲಿ ಪರಿಶೀಲನಾರ್ಹ.ಸ್ಥಳಿಯ ಸದಸ್ಯರು,ಆಡಳಿತಕ್ಕೆ ಉತ್ತರದಾಯಿತ್ವಇರದಿದ್ದರೆ ಐತಿಹಾಸಿಕ ಅಪಚಾರ ಮಾಡಿದಂತಾಗುತ್ತದೆ.
-ಪ್ರಕಾಶ ಹೆಗಡೆ, ಅಡಿಕೆ ವರ್ತಕರ ಸಂಘದ ಅಧ್ಯಕ್ಷ
ಸಿದ್ಧಾಪುರ ತಾಲೂಕಿನ ಐತಿಹಾಸಿಕ ನೆಹರೂ ಕ್ರೀಡಾಂಗಣದ ನಾಮಫಲಕ ಉರುಳಿಬಿದ್ದಿದ್ದು ಯಾರೂ ಕೇಳದ ಸ್ಥಿತಿಯಲ್ಲಿ ಜೀರ್ಣವಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.
ಪಟ್ಟಣ ಪಂಚಾಯತ್ ನಿರ್ವಹಣೆಯ ನೆಹರೂ ಕ್ರೀಡಾಂಗಣ ನಗರದ ಏಕೈಕ ಆಟದ ಮೈದಾನವಾಗಿದ್ದು ಅದರ ಅಭಿವೃದ್ಧಿ ಆಗಿಲ್ಲ. ನೆಹರೂ ಈ ಮೈದಾನದಲ್ಲಿ ಸಾರ್ವಜನಿಕ ಭಾಷಣ ಮಾಡಿದ ಹಿನ್ನೆಲೆಯಲ್ಲಿ ನೆಹರೂ ಕ್ರೀಡಾಂಗಣ ಎಂದು ಪ್ರಸಿದ್ಧವಾದ ಈ ಆಟದ ಬಯಲು ನಿರ್ವಹಣೆ ಇಲ್ಲದೆ ಬಿಕೋ ಎನ್ನುತ್ತಿದೆ. ಇಲ್ಲಿಯ ನೆಹರೂ ಭೇಟಿಯ ಸವಿನೆನಪಿನ ನಾಮಫಲಕ ಅನೇಕ ಹಿರಿಯರು, ಹೋರಾಟಗಾರರು,ಕಾಂಗ್ರೆಸ್ಸಿಗರ ಭಾವನಾತ್ಮಕ ಫಲಕವಾಗಿತ್ತು. ಶಾಶ್ವತವಾಗಿರುವ ಕಲ್ಲಿನ ನಾಮಫಲಕ ಧರೆಗುರುಳುವ ಹಿಂದೆ ಸ್ಥಳಿಯ ಕಾಂಗ್ರೆಸ್ ಮತ್ತು ನೆಹರೂ ವಿರೋಧಿಗಳ ಕೈವಾಡವಿದೆಯಾ ಎನ್ನುವ ಸಂಶಯವೂ ವ್ಯಕ್ತವಾಗಿದೆ.ಇದಕ್ಕೆ ಪೂರಕವಾಗಿ ಸ್ಥಳಿಯ ಪ.ಪಂ. ಆಡಳಿತ ನೆಹರೂ ವಿರೋಧಿ ಬಿ.ಜೆ.ಪಿ.ಸದಸ್ಯರ ಬಹುಮತದಲ್ಲಿದೆ. ರಾಜಕೀಯ, ರಾಜಕೀಯ ಲಾಭದ ವ್ಯಕ್ತಿ-ಪಕ್ಷ ದೂಷಣೆ ಪ್ಯಾಶನ್ ಆಗಿರುವ ಅಧಿಕಾರಸ್ಥರ ಈ ಐತಿಹಾಸಿಕ ಉಪೇಕ್ಷೆ,ನಿರ್ಲಕ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ಸಾರ್ವಜನಿಕರು ಈ ಫಲಕದ ಮರುಸ್ಥಾಪನೆ,ಸಂರಕ್ಷಣೆಗೆ ಆಗ್ರಹಿಸಿದ್ದಾರೆ.
ನಾಳೆ ಕೆರೆಕೋಣದಲ್ಲಿ ಸಿನೆಮಾ ಹೊಸತಲೆಮಾರು
ಸಿದ್ಧಾಪುರ,ಫೆ.07- ಹೊನ್ನಾವರದ ಕೆರೆಕೋಣನಲ್ಲಿ ಪ್ರತಿವರ್ಷ ನಡೆಯುವ ಸಹಯಾನ ಸಾಹಿತ್ಯೋತ್ಸವ ನಾಳೆ ರವಿವಾರ ನಡೆಯಲಿದೆ.ಪ್ರತಿವರ್ಷ ಗಣ್ಯರು ಆಗಮಿಸಿ, ವಿಚಾರ ವಿನಿಮಯ ನಡೆಸುವ ಕೆರೆಕೋಣದ ಸಾಹಿತ್ಯೋತ್ಸವ ಕಳೆದ 9 ವರ್ಷಗಳನ್ನು ಪೂರೈಸಿ ಹತ್ತನೇ ವರ್ಷಕ್ಕೆ ಕಾಲಿಟ್ಟಿದೆ. ದಿ. ಆರ್.ವಿ.ಭಂಡಾರಿಯವರ ನೆನಪಿನಲ್ಲಿ ಅವರ ಹಿತೈಶಿಗಳು ಕಟ್ಟಿಕೊಂಡ ಸಹಯಾನ ಒಂದುದಶಕದಿಂದೀಚೆಗೆ ಉಪಯುಕ್ತ ಚಟುವಟಿಕೆಗಳು, ಸಾಹಿತ್ಯಕ,ಸಾಂಸ್ಕøತಿಕ ಚಟುವಟಿಕೆಗಳೊಂದಿಗೆ ಹೆಸರುಮಾಡಿದೆ. ಈ ವರ್ಷ ಸಿನೆಮಾಹೊಸತಲೆಮಾರು ಶೀರ್ಷಿಕೆಯಡಿ ನಡೆಯಲಿರುವ ಒಂದು ದಿನದ ಸಾಹಿತ್ಯೋತ್ಸವದಲ್ಲಿ ನಾಡಿನ ಗಣ್ಯ ಸಾಹಿತಿಗಳು,ಸಿನೆಮಾ ನಿರ್ಧೇಶಕರು ಪಾಲ್ಗೊಳ್ಳಲಿದ್ದಾರೆ. ಈ ಸಮಾರಂಭಕ್ಕೆ ಸರ್ವರನ್ನೂ ಸಂಘಟಕರು ಆಮಂತ್ರಿಸಿದ್ದಾರೆ.