

ರಾಷ್ಟ್ರಪಿತ ಮಹಾತ್ಮಾಗಾಂಧಿ ಬಗ್ಗೆ ಅವಹೇಳನಕಾರಿ ಮಾತನಾಡಿದ ಸಂಸದ ಅನಂತಕುಮಾರ ಹೆಗಡೆ ಅನರ್ಹಗೊಳಿಸಿ ಅವರನ್ನು ಗಡಿಪಾರುಮಾಡಲು ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ಆಗ್ರಹಿಸಿದೆ.
ಶುಕ್ರವಾರ ಅನಂತಕುಮಾರ ಹೆಗಡೆ ವಿರುದ್ಧ ಪ್ರತಿಭಟನೆ ನಡೆಸಿ ಹೆಗಡೆ ಸಂಸದತ್ವ ಅನರ್ಹಗೊಳಿಸುವುದು,ಅವರನ್ನು ಗಡಿಪಾರು ಮಾಡುವ ಮನವಿಯನ್ನು ತಹಸಿಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ತಲುಪಿಸಿದ ಪ್ರತಿಭಟನಾಕಾರರು ಅಮಿತ್ ಶಾ ಮೋದಿ ಜೋಡಿಯ ಪ್ರಚೋದನೆ, ಉತ್ತೇಜನದಿಂದ ಅನಂತಕುಮಾರ ಹೀಗೆ ವರ್ತಿಸುತಿದ್ದು ಅವರ ಮೇಲೆ ಶೀಘ್ರಕ್ರಮಕ್ಕೆ ಒತ್ತಾಯಿಸಲಾಗಿದೆ.
