

ವೈದಿಕರು ಸಮಾನತೆಯ ಶರಣರನ್ನು ಕೊಂದು ವಚನಗಳನ್ನು ಸುಟ್ಟ ಮತಾಂಧತೆಯ ಪೈಶಾಚಿಕತೆಗೆ ಸಾವಿರ ವರ್ಷಗಳ ಹತ್ತಿರದ ಇತಿಹಾಸವಿದೆ.
ಅಣ್ಣ ಬಸವಣ್ಣ ವೈದಿಕಧರ್ಮದ ಪೈಶಾಚಿಕತೆ,ಶೋಷಣೆ,ಕಂದಾಚಾರಗಳಿಗೆ ಸೆಡ್ಡುಹೊಡೆದು ಬಸವಧರ್ಮ ಸ್ಥಾಪನೆ ಮಾಡಿ ಲಿಂಗಾಯತ ಧರ್ಮವೆಂದು ಪ್ರಸಿದ್ಧವಾದದ್ದು ನಂತರ ವೈದಿಕರು ಲಿಂಗಾಯತ ಧರ್ಮ ನಾಶಕ್ಕೆ ಪಣತೊಟ್ಟು ಭಾರತೀಯ ಬೌದ್ಧಧರ್ಮ ನಾಶಮಾಡಿದಂತೆ ಲಿಂಗಾಯತ ಧರ್ಮವನ್ನು ನಾಶಮಾಡಲು ಪ್ರಯತ್ನಿಸಿದ ಚರಿತ್ರೆ ವೈದಿಕ ಕೊಲೆಗಡುಕತನಕ್ಕೆ ಸಾಕ್ಷಿ.
ಈ ಸಮಯದಲ್ಲಿ ಗೂಂಡಾ ವೈದಿಕರಿಂದ ತಪ್ಪಿಸಿಕೊಂಡು ಬಂದ ಚನ್ನಬಸವಣ್ಣ ಉತ್ತರಕನ್ನಡ ಜಿಲ್ಲೆಯ ಉಳವಿಯಲ್ಲಿ ಉಳಿದು ಶರಣರು,ವಚನಗಳನ್ನು ಉಳಿಸಿದ್ದು ಭಾರತೀಯ ಬಹುಸಂಖ್ಯಾತರು ಆರ್ಯ ವಲಸೆ ವೈದಿಕರ ಧರ್ಮಸಂಘರ್ಷದ ಚರಿತ್ರೆ.
ಇಂಥ ಚಾರಿತ್ರಿಕ ಮಹತ್ವದ ಜೊಯಡಾ ತಾಲೂಕಿನ ಉಳುವಿಯಲ್ಲಿ ಪ್ರತಿವರ್ಷ ವಾರ್ಷಿಕ ಜಾತ್ರೆ ನಡೆದು ದೇಶದ ಮೂಲೆಮೂಲೆಗಳಿಂದ ಬಸವಾನುಯಾಯಿಗಳು ಉಳುವಿಗೆ ಬರುತ್ತಿರುವುದು ರೂಢಿ. ಸಂಮೃದ್ಧ ಕಾಡು,ಪರಿಸರದ ಚನ್ನಬಸವಣ್ಣನ ಉಳುವಿ ಪ್ರಕೃತಿಪ್ರೀಯರು, ಚಾರಣಪ್ರೀಯರ ಸ್ವರ್ಗ. ಈಸ್ವರ್ಗಸದೃಶ ವೈದಿಕವಿರೋಧಿ ನೆಲದಲ್ಲಿ ಜಾನಪದ ಆಚರಣೆಯ ರೀತಿ ವಾರ್ಷಿಕ ಜಾತ್ರೆಯಾಗಿ ಲಕ್ಷಾಂತರ ಜನ ಸೇರುತ್ತಾರೆ. ಇಂಥ ವೈಶಿಷ್ಟ್ಯದ ಉಳುವಿ ಚನ್ನಬಸವಣ್ಣನ ಜಾತ್ರೆ ಫೆ.9.10 ರಂದು ನಡೆಯುತ್ತಿದೆ. ಉತ್ತರಕರ್ನಾಟಕದ ಜನ ಜನಜಾನುವಾರುಗಳೊಂದಿಗೆ ಬಂದು ಈ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಿಶೇಶ.

