
ಸಿದ್ಧಾಪುರ ತಾಲೂಕಿನ ಭುವನಗಿರಿಯ ಮೂಕಾಂಬಿಕಾ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ರಥೋತ್ಸವಗಳು ನಡೆದವು.
ನಗರದ ಬಸವೇಶ್ವರ ದೇವರ ಜಾತ್ರೆ ಇಂದು ನಾಳೆ ನಡೆಯಲಿದೆ. ಸೋಮವಾರ ಪುಷ್ಫರಥೋತ್ಸವ ನಡೆದರೆ,ಮಂಗಳವಾರ ಮಹಾರಥೋತ್ಸವ ನಡೆಯಲಿದೆ.
ಸಿದ್ಧಾಪುರ ಕೊಂಡ್ಲಿ ಹಾಳದಕಟ್ಟಾದಲ್ಲಿ ನಡೆದ ಗುರುಪ್ರತಿಪದಾ ಉತ್ಸವ ಸೋಮುವಾರ ನಡೆಯಿತು.ಕಾರವಾರ ಬಾಡದ ಗುರುಮಠದ ಶಿಷ್ಯ ವರ್ಗಸೇರಿದಂತೆ ಅನೇಕರು ಕಾರವಾರದಿಂದ ಸಿದ್ಧಾಪುರಕ್ಕೆ ಆಗಮಿಸಿ ಈ ಉತ್ಸವದಲ್ಲಿ ಪಾಲ್ಗೊಂಡರು.
ಭಜನೆ,ಅನ್ನಸಂತರ್ಪಣೆ ವೇಳೆ ಸ್ಥಳಿಯರಿಗಿಂತ ಕಾರವಾರದಿಂದ ಬಂದ ಭಜಕರು ಪಾಲ್ಗೊಂಡು ಗುರುಪ್ರತಿಪದಾ ಉತ್ಸವ ಸಂಪನ್ನಮಾಡಿದರು.
ಗ್ರೀನ್ ಲ್ಯಾಂಡ್ ಆರಂಭೋತ್ಸವ-
ನಗರದ ಮಾಂಸಾಹಾರಿ ಹೋಟೆಲ್ ಗ್ರೀನ್‍ಲ್ಯಾಂಡ್‍ನ ಪ್ರಾರಂಭೋತ್ಸವ ಜೋಗರಸ್ತೆಯ ಕೆ.ಡಿ.ಸಿ.ಸಿ. ಬ್ಯಾಂಕಿನ ಪಕ್ಕದ ಕಟ್ಟಡದಲ್ಲಿ ನಡೆಯಿತು.ಗ್ರೀನ್ ಲ್ಯಾಂಡ್ ಮಾಲಿಕ ಅಣ್ಣಪ್ಪ ದಾಸನಗದ್ದೆಯವರ ಸ್ನೇಹಿತರು, ಹಿತೈಶಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹರಸಿದರು.




