

ಕಾಗೇರಿಯವರ ಹೊಂದಾಣಿಕೆ ರಾಜಕೀಯದಲ್ಲಿ ಬಡವಾದರೆ ಬಿ.ಜೆ.ಪಿ.ಕಾರ್ಯಕರ್ತರು?
ಸಿದ್ಧಾಪುರ ಸಾಯಿನಗರದ ವಿಧಾನಸಭಾಧ್ಯಕ್ಷರ ಮಾಮೂಲಿ ಅಡಿಗಲ್ಲು ಸಮಾರಂಭದ ನಂತರ ಸಾಯಿನಗರದ ಮನೆ ಒಂದರಲ್ಲಿ ಕಾಗೇರಿ ಮಾತನಾಡುತ್ತಾ ಕುಳಿತಿದ್ದಾಗ ಅವರೊಂದಿಗಿದ್ದ ಕಾರ್ಯಕರ್ತರು ಮನೆಯ ಹೊರಗಿದ್ದರು. ಶಾಸಕರು,ವಿಧಾನಸಭಾ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆಯವರೊಂದಿಗಿದ್ದ ಬಿ.ಜೆ.ಪಿ. ಕಾರ್ಯಕರ್ತರಿಗೆ ಪರೋಕ್ಷವಾಗಿ ಒಳಗೆ ಬರಬೇಡಿ ಎನ್ನುವ ರೀತಿಯಲ್ಲಿ ಮನೆ ಮಾಲಿಕರು ಸಾಯಿನಗರದವರಷ್ಟೇ ಒಳಗೆ ಬನ್ನಿ ಎಂದು ಕರೆದರು.

ಸಾರ್ವಜನಿಕ ಕಾರ್ಯಕ್ರಮಕ್ಕೆ ತೆರಳಿದ್ದ ಶಾಸಕರೊಂದಿಗಿನ ಕಾರ್ಯಕರ್ತರಿಗೆ ಹೀಗೆ ಅವಮಾನವಾಗುತಿದ್ದರೆ ಕಾಗೇರಿಯವರು ಅದನ್ನು ಗಮನಿಸಿರಲಿಲ್ಲ. ವಿಶೇಶವೆಂದರೆ ಮೊನ್ನೆ ಸಿದ್ಧಾಪುರದಲ್ಲಿ ನಡೆದ ಇನ್ನೂ 2-3 ಕಾರ್ಯಕ್ರಮಗಳಲ್ಲಿ ಕಾಗೇರಿಯವರೊಂದಿಗೆ ಚುನಾವಣೆಯಲ್ಲಿ ಕೆಲಸಮಾಡಿದ್ದ ಕಾರ್ಯಕರ್ತರಿಗೆ ಅವಮಾನವಾಗಿತ್ತು.
ಹೀಗೆ ಅವಮಾನಮಾಡುವುದು, ಮಾಡಿಸುವುದು ಕಾಗೇರಿಯವರ ಉದ್ಧೇಶವಾಗಿರಲಿಕ್ಕಿಲ್ಲ ಆದರೆ ವಿಧಾನಸಭಾ ಅಧ್ಯಕ್ಷರೆದುರೇ ಅವರನ್ನು ಆ ಹುದ್ದೆಗೇರಿಸಿದ ಕಾರ್ಯಕರ್ತರಿಗೆ ನೋವು, ಅವಮಾನವಾಗುತ್ತಿರುವುದನ್ನು ಗೃಹಿಸದಷ್ಟು ಕಾಗೇರಿ ಅಸೂಕ್ಷ್ಮರಾದರೆ ಎನ್ನುವ ಪ್ರಶ್ನೆಯೊಂದಿಗೆ ಹಲವು ಅನುಮಾನ, ಅಸಮಾಧಾನಗಳ ಹಿನ್ನೆಲೆಯಲ್ಲಿ ಸೋಮವಾರ ವಿಶ್ವೇಶ್ವರ ಹೆಗಡೆ ಯವರ ವಿರುದ್ಧ ಕಾರ್ಯಕರ್ತರ ಅಸಮಾಧಾನ ಕೆಲಸಮಾಡಿದೆ. ಬಿ.ಜೆ.ಪಿ.ಕಾರ್ಯಕರ್ತರೇ ಹೇಳುವಂತೆ ಅನುದಾನ ಹಂಚಿಕೆ, ಅಭಿವೃದ್ಧಿ ಕೆಲಸ, ಪರಿಗಣನೆಗಳಲ್ಲಿ ಶಾಸಕರಿಗೆ ಪಕ್ಷನಿಷ್ಠರು, ಕಾರ್ಯಕರ್ತರಿಗಿಂತ ಹೊರಗಿನವರು ಆಪ್ತರಾಗುತಿದ್ದಾರೆ.
ಇಂಥ ಅನ್ಯಪಕ್ಷಗಳ ನಾಯಕರೊಂದಿಗಿನ ಸಲುಗೆ ಸ್ವಪಕ್ಷದ ಕಾರ್ಯಕರ್ತರ ಅವಗಣನೆ ಕಾರಣ ಬಿ.ಜೆ.ಪಿ.ಕಾರ್ಯಕರ್ತರು ವಿಧಾನಸಭಾಧ್ಯಕ್ಷರಿಗೆ ಈಗಾಗಲೇ ಹಲವುಬಾರಿ ಮಾತುಕತೆಗೆ ಕರೆದಿದ್ದರಂತೆ. ಕಾರ್ಯಕ್ರಮದಲ್ಲಿ ಸ್ವಲಾಭದ ಮಾತನಾಡುವುದು,ನಂತರ ಹೊರಗಿನ ವಲಸೆ ಮುಖಂಡರು,ಅನ್ಯಪಕ್ಷಗಳ, ಹೊರಗಿನ ವ್ಯಕ್ತಿಗಳೊಂದಿಗೆ ಮಾತನಾಡುವ ವಿ.ಹೆಗಡೆ ಸ್ವಪಕ್ಷದ ಕಾರ್ಯಕರ್ತರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಾರೆ ಎನ್ನುವ ಆರೋಪಗಳಿವೆ.ಇಂಥ ಅಸಹನೆ,ಅಸಮಾಧಾನ, ಅವಗಣನೆಗಳಿಂದ ಬೇಸತ್ತ ಬಿ.ಜೆ.ಪಿ. ಕಾರ್ಯಕರ್ತರುಬಹಿರಂಗವಾಗಿ ಮಾತುಕತೆಗೆ ಬರುವಂತೆ ಶಾಸಕರನ್ನು ಒತ್ತಾಯಿಸುವ ಹಿಂದೆ ಅನೇಕ ಕಾರಣಗಳು, ಅಸಮಾಧಾನಗಳಿವೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
