

ಸಿದ್ಧಾಪುರ ತಾಲೂಕಿನ ದೊಡ್ಮನೆಯ ಭರತ್ ರಾಮನಾಥ ಹೆಗಡೆ ಈ ವರ್ಷದ ಉತ್ತರ ಕನ್ನಡ ಜಿಲ್ಲೆಯ ಅಸಾಧಾರಣ ಪ್ರತಿಭಾ ಪುರಸ್ಕಾರ ಪಡೆದಿದ್ದಾನೆ. ಈತ ಸಿದ್ಧಾಪುರ ಎಸ್.ವಿ. ಗಂಡುಮಕ್ಕಳ ಶಾಲೆಯ ವಿಶೇಶ ಪ್ರತಿಭೆಯ ವ್ಯಕ್ತಿಯಾಗಿದ್ದು ವಿಶೇಶಚೇತನನಾಗಿದ್ದರೂ ಹಲವಾರು ಸ್ಫರ್ಧೆ, ಪಂದ್ಯಾಟಗಳಲ್ಲಿ ಮೊದಲಿಗನಾಗುವ ಮೂಲಕ ಗಮನ ಸೆಳೆದಿದ್ದಾನೆ. ಚೆಸ್ ಮತ್ತು ಇತರ
ಪಠ್ಯ ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿರುವ ಈ ವಿದ್ಯಾರ್ಥಿಯ ವಿಶಿಷ್ಟ ಕೌಶಲ್ಯ ಪರಿಗಣಿಸಿ ಉತ್ತರಕನ್ನಡ ಜಿಲ್ಲೆಯ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಈ ಪುರಸ್ಕಾರ ನೀಡಿದೆ. ಈ ವಿದ್ಯಾರ್ಥಿಯ ಅಸಾಧಾರಣ ಪ್ರತಿಭೆ ಮತ್ತು ಸಾಧನೆಗೆ ಅನೇಕರು ಅಭಿನಂದಿಸಿದ್ದಾರೆ.
ವಿಡಂಬಾರಿ ಕೋಟಿಗೊಂದು ಬಂಡಾಯದ ಬೆಳಕು
ಒಂದು ಚಿಟಿಕೆಯಷ್ಟು ಚಳಿ ಇದ್ದ ಮಧ್ಯಾಹ್ನ, ಬಹುಶ: ಎಂದಿನಂತೆ ಅಂದೂ ಆಕಾಶಕ್ಕೆ ಏಣಿ ಹಾಕುವ ಬಗ್ಗೆ ಯೋಚಿಸುತಿದ್ದೆ.
ಫಳ್ ಎಂದು ಗ್ಲಾಸ್ ಒಡೆದಂತೆ ಒಂಥರಾ ಸೌಂಡುಮಾಡುತ್ತಾ ನನ್ನ ಆಕಾಲದ ಐದುಸಾವಿರ ರೂಪಾಯಿಯ ಸೋವಿ ಮೊಬೈಲ್ ರಿಂಗಣಿಸಿತು. ಆ ಕಡೆಯಿಂದ ಬಂದ ಧ್ವನಿ ಕನ್ನೇಶ್ ಎಂದು ಗಡುಸಾಗಿಯೇ ಇತ್ತು ಎಂದಿನಂತೆ,
ಸಂಶಯವಿಲ್ಲ, ಜಿ.ಎನ್.ಮೋಹನ್ ಸರ್ ಧ್ವನಿಯದು,ಆಗ ಜಿ.ಎನ್.ಮೋ.ಈ ಟಿ.ವಿ.ಗೆ ಮುಖ್ಯಸ್ಥರಾಗಿ ಬಂದು ಕೆಲವು ತಿಂಗಳುಗಳೂ ಕಳೆದಿರಲಿಲ್ಲ. ಶಿರಸಿಯಲ್ಲಿ ಬಸ್ ನಿಲ್ಧಾಣದಲ್ಲಿ ಒಬ್ಬರು ಪುಸ್ತಕ ಮಾರುತ್ತಾರೆ ಗೊತ್ತಾ ಎಂದರು. ಇಲ್ಲ ಎಂದೆ, ಸರಿ ನೋಡಿ ಒಂದು ಒಳ್ಳೆಯ ಸುದ್ದಿಯಾಗುತ್ತೆ ಎಂದವರೆ, ಹೆಚ್ಚು ಮಾತನಾಡದೆ ಕಾಲ್ ಕಟ್ ಮಾಡಿದರು.


