ಗಾಂಧಿ ಕರೆಗೆ ಒಗೊಟ್ಟು ಸ್ವಾತಂತ್ರ್ಯ ಹೋರಾಟ,ಕರಾನಿರಾಕರಣೆ ಚಳವಳಿ,ಅಸ್ಪೃಶ್ಯತೆ ನಿವಾರಣೆ, ಸಾರಾಯಿ ನಿಷೇಧವನ್ನು ಬೆಂಬಲಿಸಿದ ಸಿದ್ಧಾಪುರದ ಜನತೆ ಗಾಂಧಿ ಮಹತ್ವವನ್ನು ಅರಿತಿದ್ದರಿಂದ ಅಹಿಂಸಾತ್ಮಕ ಹೋರಾಟದ ಮೂಲಕ ಸ್ವಾತಂತ್ರ್ಯ ಗಳಿಕೆಗೆ ತಮ್ಮ ಅಳಿಲುಸೇವೆ ಸಲ್ಲಿಸಿದ್ದಾರೆ ಎಂದು ಸಾಹಿತಿ ಎಸ್.ವಿ.ಹೆಗಡೆ ಹೇಳಿದರು.
ಅವರು ರಂಗಸೌಗಂಧ ಮತ್ತಿತರ ಸಂಘಟನೆಗಳ ಸಹಯೋಗದ ದೇವಿಯದೀವಿಗೆ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಶ್ರೀಧರ ಹೆಗಡೆ ಹುಲಿಮನೆ ಮಾತನಾಡಿ ಗಾಂಧಿ, ಟಿಪ್ಪು ವ್ಯಕ್ತಿಗಳಲ್ಲ ಅವರು ಒಂದೊಂದು ಸಿದ್ಧಾಂತ, ಶಕ್ತಿ ಹೋರಾಟ ಮತ್ತು ಸಾಮರಸ್ಯಕ್ಕೆ ಅವರ ಕೊಡುಗೆ ಅಪಾರ ಅವರ ವೈಚಾರಿಕತೆಯನ್ನು ರಂಗಭೂಮಿ ಸಮರ್ಥವಾಗಿ ಪ್ರತಿಬಿಂಬಿಸಿದೆ ಎಂದರು.
ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಒಡ್ಡೋಲಗ ಗಣಪತಿ ಹಿತ್ತಲಕೈ ಮಾತನಾಡಿ ತಮ್ಮ ಕೆಲಸ, ಸಾಧನೆ, ಯಶಸ್ಸುಗಳ ಹಿಂದೆ ಸಿದ್ಧಾಪುರದ ಸಹೃದಯರಿದ್ದಾರೆ ಎಂದು ಕೃತಜ್ಞತೆ ತಿಳಿಸಿದರು. ಈ ನಾಟಕದ ಡೈಲಾಗ್,ಅಭಿನಯ ನೋಡಲು https://www.youtube.com/watch?v=6k9j-bnG738 ಹುಡುಕಿ #samajamukhi ಸಮಾಜಮುಖಿ ಕನ್ನೇಶ್ you tube channel